Home_Page_Advt
Home_Page_Advt
Home_Page_Advt
Home_Page_Advt
Breaking News

ಬಾಲಕನ ಅಪಹರಣ ಆರೋಪ- ತನ್ನ ಮಗನೆಂದು ನಂಬಿಸಿ ಗುತ್ತಿಗೆದಾರರ ಬಳಿ ಬಿಟ್ಟಿದ್ದ ಬೆಂಗಳೂರಿನ ಶಿಲ್ಪಾ!!

  • ಬಲ್ನಾಡು ಗ್ರಾ.ಪಂ.ಸದಸ್ಯೆ ಪರಮೇಶ್ವರಿ, ಸಿಡಿಪಿಒ, ಸಾಂತ್ವನ ಕೇಂದ್ರದ ಮೂಲಕ ಪ್ರಕರಣ ಬೆಳಕಿಗೆ
  • ಸಂಪ್ಯ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲು

ಪುತ್ತೂರು: ತನ್ನ ಮಗನೆಂದು ನಂಬಿಸಿ ಗುತ್ತಿಗೆದಾರರೊಬ್ಬರ ಮನೆಯಲ್ಲಿ ಅಪ್ರಾಪ್ತ ಬಾಲಕನನ್ನು ಬಿಟ್ಟು ಹೋಗಿ ಕೆಲ ದಿನಗಳ ಬಳಿಕ ಬಾಲಕನನ್ನು ಕರೆದೊಯ್ಯಲು ಬಂದ ಮಹಿಳೆಯನ್ನು ಸಂಶಯದ ಮೇರೆಗೆ ವಿಚಾರಿಸಿದಾಗ ಮಹಿಳೆ ಬಾಲಕನನ್ನು ಅಪಹರಣಗೊಳಿಸಿದ ವಿಚಾರವನ್ನು ಬಲ್ನಾಡು ಗ್ರಾ.ಪಂ ಸದಸ್ಯೆ ಪರಮೇಶ್ವರಿ, ಸಿಡಿಪಿಒ ಭಾರತಿ ಮತ್ತು ಸಾಂತ್ವನ ಕೇಂದ್ರ ನಿಶಾ ಅವರ ನೇತೃತ್ವದ ತಂಡ ಬಯಲಿಗೆಳೆದ ಬಗ್ಗೆ ಬಲ್ನಾಡು ಚನಿಲದಿಂದ ವರದಿಯಾಗಿದೆ.

ಘಟನೆ ವಿವರ: ಬೆಂಗಳೂರಿನ ಬನಶಂಕರಿ ಮೂಲದ ಶಿಲ್ಪಾ ಹಾಗೂ ಮಹೇಶ್ ದಂಪತಿ  ಬಲ್ನಾಡು ಗ್ರಾಮದ ಚನಿಲ ನಿವಾಸಿ ಕೆಲಸದಾಳುಗಳ ಪೂರೈಕೆಯ ಗುತ್ತಿಗೆದಾರ ಮಂಜುನಾಥ್ ರೈ ಅವರ ಮೂಲಕ ಬೇರೆ ಬೇರೆ ಕೆಲಸದ ಕಡೆ ಹೋಗುತ್ತಿದ್ದರು. ಕಳೆದ ಕೆಲ ಸಮಯದಿಂದ ಕೆಲಸಕ್ಕೆ ಬಾರದ ಶಿಲ್ಪಾ ಅವರು ಸೆ.1ರಂದು ಏಕಾಏಕಿ ಅಪ್ರಾಪ್ತ ಬಾಲಕನೊಂದಿಗೆ ಬಂದು ಈತ ನನ್ನ ಮಗ ಸ್ವಲ್ಪ ಸಮಯ ನಿಮ್ಮ ಮನೆಯಲ್ಲಿ ಇರಲಿ ಬಳಿಕ ಬಂದು ಕರೆದೊಯ್ಯುತ್ತೇನೆ ಎಂದು ಕೇಳಿಕೊಂಡಂತೆ ಅಪ್ರಾಪ್ತ ಬಾಲಕನನ್ನು ಮಂಜುನಾಥ ರೈ ಅವರು ಮನೆಯಲ್ಲಿ ಉಳಿಸಿಕೊಂಡು ಸ್ಥಳೀಯ ಚನಿಲ ಅಂಗನವಾಡಿಗೆ ಆತನನ್ನು ಸೇರಿಸಿದ್ದರು.

ಇದೇ ವೇಳೆ ಬಾಲಕನ ವರ್ತನೆ ಕಂಡು ಸಂಶಯಗೊಂಡ ಅಂಗನವಾಡಿ ಕಾರ್ಯಕರ್ತೆ ಮತ್ತು ಸ್ಥಳೀಯ ಗ್ರಾ.ಪಂ ಸದಸ್ಯೆ ಪರಮೆಶ್ವರಿ ಅವರು ಬಾಲಕನ ಪೋಷಕರನ್ನು ಕರೆಸುವಂತೆ ಮಂಜುನಾಥ ರೈ ಅವರಿಗೆ ತಿಳಿಸಿದ್ದರು. ಸೆ.8ರಂದು ಶಿಲ್ಪಾ ಅವರು ಮಂಜುನಾಥ ರೈ ಅವರ ಮನೆಗೆ ಬಂದು ಬಾಲಕನನ್ನು ಕರೆದೊಯ್ಯಲು ಮುಂದಾದಾಗ ಗ್ರಾ.ಪಂ ಸದಸ್ಯೆ ಪರಮೇಶ್ವರಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಶಿಲ್ಪಾ ಅವರನ್ನು ವಿಚಾರಿಸಿದರು.

ಬಳಿಕ ಪುತ್ತೂರು ಸಾಂತ್ವನ ಕೇಂದ್ರಕ್ಕೆ ಕರೆದೊಯ್ದು ಅಲ್ಲಿಂದ ಮಂಗಳೂರು ಮಕ್ಕಳ ಪಾಲನಾ ಕೇಂದ್ರದಲ್ಲಿ ಬಾಲಕನನ್ನು ಕೌನ್ಸಿಲಿಂಗ್ ಮಾಡಿಸಿದಾಗ ಆತ ತೆಲುಗಿನಲ್ಲಿ ಮಾತನಾಡಿ ತನ್ನ ಪೋಷಕರ ಕುರಿತು ಮಾಹಿತಿ ನೀಡಿದ್ದಾರೆ. ಈ ಸಂದರ್ಭ ಶಿಲ್ಪಾ ಅವರು ಈ ಬಾಲಕ ತನ್ನ ಮಗನಲ್ಲ. ನನಗೆ ಬೆಂಗಳೂರು ಯಶವಂತ ಪುರದಲ್ಲಿ ಸಿಕ್ಕಿದ ಎಂದು ಹೇಳುವ ಮೂಲಕ ಬಾಲಕನ ಅಪಹರಣ ಮಾಡಿದ ವಿಚಾರ ಬೆಳಕಿಗೆ ಬಂದಿದೆ. ಘಟನೆಯ ಕುರಿತು ಸೆ.10ರಂದು ಸಂಜೆ ಸಿಡಿಪಿಒ ಭಾರತಿ ಅವರು ಪುತ್ತೂರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಬಾಲಕನ ಅಪಹರಣ ಕುರಿತು ಶಿಲ್ಪಾ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿದು ಬಂದಿದೆ. ಹೆಚ್ಚಿನ ತನಿಖೆಗೆ ಪೊಲೀಸರು ಚೆನ್ನರಾಯಪಟ್ಟಣಕ್ಕೆ ತೆರಳಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.