HomePage_Banner
HomePage_Banner
HomePage_Banner
HomePage_Banner

ಪುತ್ತೂರು ಕಾಂಗ್ರೆಸ್ ವತಿಯಿಂದ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರದ ವೈಫಲ್ಯದ ವಿರುದ್ಧ ಧರಣಿ ಸತ್ಯಾಗ್ರಹ

Puttur_Advt_NewsUnder_1
Puttur_Advt_NewsUnder_1


ಪುತ್ತೂರು:ಕೋಟಿ ಕೋಟಿ ರೂಪಾಯಿ ನೀಡಿ ಬಿಜೆಪಿಯವರು 17 ಮಂದಿ ಶಾಸಕರನ್ನು ಖರೀದಿಸಿ ರಾಜ್ಯದಲ್ಲಿ ಸರಕಾರ ನಡೆಸುವಾಗ ದಾಳಿ ನಡೆಸದ ಇಡಿ ಅಧಿಕಾರಿಗಳು ಎಲ್ಲಿ ಹೋಗಿದ್ದರು. ಅವರ ಮೇಲೆ ಯಾಕೆ ಇಡಿಯವರ ದಾಳಿ ನಡೆಸಿಲ್ಲ. ಡಿ.ಕೆ ಶಿವಕುಮಾರ್‌ರವರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ. ಹೀಗಾದರೆ ಕಾಂಗ್ರೆಸ್ ಹಾಗೂ ಬಿಜೆಪಿಗೆ ಪ್ರತ್ಯೇಕ ನ್ಯಾಯವೇ ಎಂದು ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಪ್ರಶ್ನಿಸಿದರು.

ನೆರೆ ಸಂತ್ರಸ್ಥರ ನಿರ್ಲಕ್ಷ್ಯ ದೋರಣೆ ಹಾಗೂ ಕೇಂದ್ರ ಸರಕಾರದ ಹಾಗೂ ರಾಜ್ಯ ಸರಕಾರದ ವೈಪಲ್ಯದ ವಿರುದ್ದ ಪುತ್ತೂರು ವಿಧಾನ ಸಭಾ ಕಾಂಗ್ರೆಸ್‌ನ ವತಿಯಿಂದ ಸೆ.12ರಂದು ಬಸ್ ನಿಲ್ದಾಣದ ಗಾಂಧಿಕಟ್ಟೆಯ ಬಳಿ ನಡೆದ ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಅವರು ಮಾತನಾಡಿದರು. ಜನ ಸಾಮಾನ್ಯರ ಕಷ್ಟ ಪರಿಹರಿಸಲಾಗದ ಸರಕಾರದ ವಿರುದ್ದ ಮಾತನಾಡಿದರೆ ಅವರನ್ನು ಧಮನಿಸುವ ಕೆಲಸ ನಡೆಯುತ್ತಿದೆ. ಡಿ.ಕೆ ಶಿವಕುಮಾರ್ ಸುಪ್ರಸಿದ್ದ ರಾಜಕಾರಣಿ. ಕೇವಲ ರೂ.೮ಕೋಟಿಯ ವಿಚಾರದಲ್ಲಿ ಅವರನ್ನು ಇಡಿ ಅಧಿಕಾರಿಗಳ ಮೂಲಕ ಬಂಧಿಸಿದ್ದಾರೆ. ಸೂಕ್ತ ಉತ್ತರ ನೀಡಿದರೂ ಅವರನ್ನು ಬಂಧಿಸಿದ್ದಾರೆ. ಆದರೆ ಸಿಂಹ ಒಳಗಿದ್ದರೂ, ಹೊರಗಿದ್ದರೂ ಸಿಂಹವೇ. ಅವರ ಬೆಲೆ ಕಡಿಮೆಯಾಗಲು ಸಾಧ್ಯವಿಲ್ಲ ಎಂದರು.

ರಾತ್ರಿ ಬೆಳಗಾಗುವಾಗ ದೇಶದ್ರೋಹಿಯಾದ ಡಿಸಿ:
ತನ್ನ ಹುದ್ದೆಗೆ ರಾಜಿನಾಮೆ ನೀಡಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಪ್ರಜಾಪ್ರಭುತ್ವ ಕುಸಿಯುತ್ತಿದೆ ಎಂದಾಗ ಅವರ ವಿರುದ್ದ ದೇಶ ದ್ರೋಹದ ಆರೋಪ ಹೊರಿಸಲಾಗುತ್ತಿದೆ. ಬೆಳಗಾಗುವ ತನಕ ದಕ್ಷ ಅಧಿಕಾರಿಯಾಗಿದ್ದ ಜಿಲ್ಲಾಧಿಕಾರಿಗಳು ಪ್ರಜಾಪ್ರಭುತ್ವದ ಪ್ರಸ್ತಾಪ ಮಾಡಿದಾಗ ಪುತ್ತೂರಿನ ಶಾಸಕರಿಗೆ ಬೆಳಗಾದ ಬಳಿಕ ದೇಶದ್ರೋಹಿ ಬಳಿಕ ಭ್ರಷ್ಠಾಚಾರಿ ಎನಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಧಮನಿಸಲು ಹೊರಟರೆ ಅದು ಇನ್ನಷ್ಟು ಬೆಳೆಯುತ್ತದೆ. ಕೇಂದ್ರ ಸರಕಾರವು ಜಾರಿಗೆ ತಂದಿರುವ ಮೋಟಾರು ವಾಹನ ಕಾಯಿದೆ ವಿರೋಧಿಸುವುದಿಲ್ಲ. ಆದರೆ ರಸ್ತೆಯಲ್ಲಿರುವ ಹೊಂಡ, ಗುಂಡಿಗಳನ್ನು ಮುಚ್ಚಿದ ಬಳಿ ಕಾನೂನು ಜಾರಿಗೊಳಿಸಲಿ. ಪ್ರದಾನಿ ಮೋದಿಯನ್ನು ಹೊಗಲಿ. ತೆಗಲಬೇಡಿ ಎಂದು ಶಕುಂತಳಾ ಶೆಟ್ಟಿ ಹೇಳಿದರು.

ಜಿ.ಪಂ ಸದಸ್ಯ ಎಂ.ಎಸ್ ಮಹಮ್ಮದ್ ಮಾತನಾಡಿ, ರಾಜ್ಯದಲ್ಲಿ ಮೂರು ಉಪಮುಖ್ಯಮಂತ್ರಿಗಳನ್ನು ಆಯ್ಕೆ ಮಾಡುವ ಮೂಲಕ ಮುಖ್ಯ ಮಂತ್ರಿ ಯಡಿಯೂರಪ್ಪನವರನ್ನು ಕಟ್ಟಿ ಹಾಕುವ ಪ್ರಯತ್ನ ಹೈಕಮಾಂಡ್ ಮೂಲಕ ನಡೆದಿದೆ. ನೆರೆ ಸಂತ್ರಸ್ಥರಾದವರಿಗೆ ಅನುದಾನ ನೀಡುವಂತೆ ಹಲವು ಬಾರಿ ಕೇಂದ್ರದ ಬಳಿ ಹೋದರೂ ಪ್ರದಾನಿ ಮೋದಿಯವರು ಭೇಟಿ ಮಾಡಿಲ್ಲ. ಹಲವು ರಾಜ್ಯಗಳಲ್ಲಿ ನೆರೆ ಬಂದು ಸಂತ್ರಸ್ಥರಾದರೂ ವಿದೇಶಗಳಿಗೆ ಭೇಟಿ ನೀಡುವ ಮೋದಿ ಒಬ್ಬ ಮೋಜುಗಾರ ಪ್ರದಾನಿಯಾಗಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್‌ಗೂ ಯಕ್ಷಗಾನದ ಹಾಸ್ಯಗಾರನಿಗೂ ವ್ಯತ್ಯಾಸವಿಲ್ಲ. ಪಕ್ಷದ ರಾಜ್ಯಾಧ್ಯಕ್ಷರಾದ ಬಳಿಕ ಸನ್ಮಾನ ಪಡೆಯುವುದು ಮಾತ್ರ. ಶಾಸಕ ಸಂಜೀವ ಮಠಂದೂರು ಸಚಿವರನ್ನು ಭೇಟಿ ಮಾಡಿ ಫೋಟೋ ತೆಗಿಸಿಕೊಳ್ಳುವ ಮೂಲಕ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಧರ್ಮದ ವಿಚಾರದಲ್ಲಿ ರಾಜಕೀಯ ನಡೆಸಿದ ಬಿಜೆಪಿ ಇಂದು ದಕ್ಷ ಅಧಿಕಾರಿಯಗಿದ್ದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜಿನಾಮೆ ನೀಡಿದಾಗ ಅವರ ಮೇಲೆ ದೇಶದ್ರೋಹದ ಆರೋಪ ಮಾಡುವ ಮೂಲಕ ದೇಶದ್ರೋಹದ ರಾಜಕಾರಣ ಮಾಡುತ್ತಿದೆ.

ರಾಜ್ಯದಲ್ಲಿ ಬಿಜೆಪಿಯ 25 ಮಂದಿ ಸಂಸದರಿದ್ದರೂ ಕೇಂದ್ರದಿಂದ ನೆರೆ ಸಂತ್ರಸ್ಥರಿಗೆ ನಯಾಪೈಸೆ ಅನುದಾನ ತರಲಾಗದವರು ನಪುಂಸಕರು. ಇವರು ರಾಜಿನಾಮೆ ಕೊಟ್ಟು ಹೋಗಲಿ ಎಂದು ಹೇಳಿದರು.
ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ ಮಾತನಾಡಿ, ರಾಜ್ಯದಲ್ಲಿ ಪೂರ್ಣಪ್ರಮಾಣದ ಸರಕಾರವಿಲ್ಲ. 17 ಖಾತೆಗಳು ಮುಖ್ಯಮಂತ್ರಿಯ ಬಳಿಯೇ ಇದ್ದು ಆಡಳಿತ ನಡೆಸುವುದಾರೂ ಹೇಗೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ 25 ದಿನಗಳ ಕಾಲ ಏಕೋಪಾಧ್ಯಾಯ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಂತೆ ಆಡಳಿತ ನಡೆಸಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಯಾವುದೇ ಅನುದಾನ ಬಂದಿಲ್ಲ ಎಂಬುದನ್ನು ಖಾಸಗಿ ವಾಹಿನಿಯ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದರಾದ ಪ್ರತಾಪ ಸಿಂಹ ಹಾಗೂ ತೇಜಸ್ವೀ ಸೂರ್ಯ ಒಪ್ಪಿಕೊಂಡಿದ್ದಾರೆ. ಹಿಬಂದಿ ಬಾಗಿಲ ಮೂಲಕ ಹಲವು ರಾಜ್ಯಗಳಲ್ಲಿ ಕುದುರೆ ವ್ಯಾಪಾರ ಮಾಡಿ ಆಡಳಿತ ನಡೆಸುತ್ತಿದ್ದಾರೆ. ಮೋದಿಯ ಆಡಳಿತದಿಂದ ದೇಶದ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ. ಬ್ಯಾಂಕುಗಳ ವಿಲೀನ, ಜಿಡಿಪಿ ಕುಸಿತ ಹಾಗೂ ದೇಶದ ಯುವ ಜನರು ನಿರುದ್ಯೋಗಿಗಳಾಗುತ್ತಿದ್ದಾರೆ. ಮೋದಿಯವರ ಏಕ ಪಕ್ಷೀಯ ನಿರ್ದಾರದಿಂದ ದೇಶಕ್ಕೆ ಭವಿಷ್ಯವಿಲ್ಲ ಎಂದು ಆರೋಪಿಸಿದರು.

ವಿಟ್ಲ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಡಾ.ರಾಜಾರಾಮ್ ಮಾತನಾಡಿ, ಪ್ರದಾನಿ ಮೋದಿ ಹಾಗೂ ಸರಕಾರದ ಆಡಳಿತದ ವಿರುದ್ದ ಮಾತನಾಡಿದರೆ ಅವರನ್ನು ದೇಶದ್ರೋಹದ ಆರೋಪ ಹೊರಿಸಲಾಗುತ್ತದೆ. ರಾಜಕೀಯ ಪಿತೂರಿ ನಡೆಸಿ ಡಿ.ಕೆ ಶಿವಕುಮಾರ್‌ರವರನ್ನು ಬಂಧಿಸಿದ್ದಾರೆ. ಆರ್ಥಿಕ ನೀತಿಯಿಂದಾಗಿ ಬಡ ಕೂಲಿ ಕಾರ್ಮಿಕರಿಗೂ ಕೆಲಸವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಸ ಹೊಸ ಕಾನೂನುಗಳ ಮೂಲಕ ಬಡವರನ್ನು ನಾಶ ಮಾಡುವ ಮುಖಾಂತರ ಗುಬ್ಬಚ್ಚಿ ಮೇಲೆ ಬ್ರಹ್ಮಾಸ್ತ್ರವನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಕಾರ್ಮಿಕ ಘಟಕದ ಮುಖಂಡ ನಝೀರ್ ಮಠ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬಡತನ ನಿರ್ಮೂಲನೆ ಮಾಡುತ್ತೇವೆ ಎಂದು ಹೇಳುತ್ತಿದ್ದವರು ಈಗ ಬಡವರನ್ನು ನಿರ್ಣಾಮ ಮಾಡುತ್ತಿದ್ದಾರೆ. ಕಾಂಗ್ರೆಸ್ ೬೦ ವರ್ಷ ಉತ್ತಮ ಆಡಳಿತ ನಡೆಸಿದರೂ ಬಿಜೆಪಿ ಐದು ವರ್ಷಗಳ ಆಡಳಿತದಲ್ಲಿ ಹಣ ಸಂಪಾದಿಸಿದೆ. ಡಿ,ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗುತ್ತಾರೆ ಎಂಬ ಕಾರಣಕ್ಕೆ ಅವರನ್ನು ಇಡಿ ಅಧಿಕಾರಿಗಳ ಮೂಲಕ ಬಂಧಿಸುವ ಕೆಲಸ ಮಾಡಿದ್ದಾರೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಮಾತನಾಡಿ, ನೆರೆಯಿಂದ ಸಂತ್ರಸ್ಥರಾದವರಿಗೆ ಆಶ್ರಯ ನೀಡಬೇಕಾದ ಸರಕಾರ ಶೋಷಣೆ ಮಾಡುತ್ತಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರಗಳು ದೇಶದ ಮಣ್ಣಿನ ಅಂತಃಶಕ್ತಿಗೆ ತಿಳಾಂಜಲಿ ಇಡುವ ಕೆಲಸ ಮಾಡುತ್ತಿದೆ. ರಾಜ್ಯದ ೨೫ ಬಿಜೆಪಿ ಸಂಸದರೂ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರು ಕೇಂದ್ರದಿಂದ ನೆರೆ ಸಂತ್ರಸ್ಥರಿಗೆ ಅನುದಾನ ತರುವ ಪ್ರಯತ್ನ ಮಾಡಿಲ್ಲ. ರಾಜ್ಯದಲ್ಲಿ ಲಾ ಆಂಡ್ ಆರ್ಡರ್ ಜಾರಿಯಲ್ಲಿಲ್ಲ. ಪೊಲೀಸರು ರಸ್ತೆಯಲ್ಲಿ ನಿಂತು ವಾಹನ ಸವಾರರರಿಗೆ ದಂಡ ಹಾಕುವುದಕ್ಕೆ ಬಳಸಲಾಗುತ್ತಿದೆ ಎಂದು ಆರೋಪಿಸಿದರು.

ನಗರ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ವಿಲ್ಮಾ ಗೊನ್ಸಾಲ್ವೀಸ್, ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ಎಂ.ಬಿ ವಿಶ್ವನಾಥ ರೈ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ದ ಕಿಡಿಕಾರಿದರು. ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳಿಧರ ರೈ ಮಠಂತಬೆಟ್ಟು, ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ ತೌಸಿಫ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಆಳ್ವ, ರಾಮಚಂದ್ರ ಅಮಳ, ಮಹಿಳಾ ಘಟಕದ ಅಧ್ಯಕ್ಷ ವಿಶಾಲಾಕ್ಷಿ ಬನ್ನೂರು, ಶಾರದಾ ಅರಸ್, ಎಪಿಎಂಸಿ ಸದಸ್ಯ ಶಕೂರ್ ಹಾಜಿ, ಪುರಸಭಾ ಮಾಜಿ ಅಧ್ಯಕ್ಷೆ ವಾಣಿಶ್ರೀಧರ್, ಕಿಸಾನ್ ಘಟಕದ ಅಧ್ಯಕ್ಷ ಉಮಾನಾಥ ಶೆಟ್ಟಿ, ದಿನೇಶ್ ಪಿ.ವಿ, ಅರ್ಷದ್ ದರ್ಬೆ, ರಾಮ ಮೇನಾಲ, ತಿಮ್ಮಪ್ಪ ಗೌಡ ಬಲ್ನಾಡು ಸೇರಿದಂತೆ ಹಲವು ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಇಸಾಖ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕಾರ್ತಿಕ್ ಕೊಲೆ ಆಕಸ್ಮಿಕವಾದರೆ ಪೊಲೀಸರ ಕೈವಾಡ
ಸಂಪ್ಯ ಠಾಣೆಯ ಮುಂಭಾಗದ ಸಿಸಿ ಕ್ಯಾಮರಾ ಪವರ್ ಪುಲ್ ಇದ್ದರೂ ಅದು ಕೆಟ್ಟುಹೋಗಿದೆ. ಪೊಲೀಸ್ ಠಾಣೆ ಎದುರೇ ಯುವಕನ ಕೊಲೆ ಆಗಿದೆ. ಈ ಕೊಲೆ ಆಕಸ್ಮಿಕ ಎಂದು ಪ್ರಕರಣ ಎಂದು ದಾಖಲಾಗಿದ್ದು ಆಕಸ್ಮಿಕವಾದರೆ ಇದರಲ್ಲಿ ಹೌದಾಗಿದ್ದರೆ ಪೊಲೀಸರ ಕೈವಾಡವಿದೆ. ಗಣೇಶೋತ್ಸವ ಕಾರ್ಯಕ್ರಮದಲ್ಲಿ ಯುವಕ ಕೊಲೆಯಾಗುವುದಾರೆ ಅದು ಅಕಸ್ಮಿಕವಾಗುವುದು ಹೇಗೆ’ ಠಾಣೆಯ ಮುಂಭಾಗದಲ್ಲೇ ನಡೆಯುವ ಗಣೇಶೋತ್ಸವದ ಅಧ್ಯಕ್ಷ, ಕಾರ್ಯದರ್ಶಿ ಯಾರೂ ಎಂದು ಪೊಲೀಸರಿಗೆ ಗೊತ್ತಿಲ್ಲವೇ’ ಗಣಪತಿಗೋ, ಬಿಜೆಪಿಯವರಿಗೂ ನಾಚಿಕೆಯಾಗುತ್ತದೆ ಎಂಬ ಕಾರಣಕ್ಕೆ ಪ್ರಕರಣ ಮುಚ್ಚಿಹಾಕಿದ್ದೀರಾ’ ಪೊಲಿಸರು ತಮ್ಮ ಖಾಕಿಗೆ ಇರುವ ಗೌರವ ಉಳಿಸಿಕೊಳ್ಳಬೇಕು. ಪ್ರಕರಣದ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಉತ್ತರ ನೀಡಬೇಕು. ಸರಕಾರ ಯಾವುದೂ ಬಂದರೂ ನಿಮಗೆ ಸಂಬಳ ನೀಡುತ್ತದೆ. ಇಲ್ಲಿಂದ ಬೇರೆ ಕಡೆಗೆ ವರ್ಗಾವಣೆ ಆಗಬಹುದು. ನಿಮ್ಮ ಒಳ್ಳೆಯ ಕೆಲಸ ನಿಮ್ಮ ಮಕ್ಕಳಿಗೆ ರಕ್ಷಣೆ ನೀಡುತ್ತದೆ. ಕೊಲೆಗಾರರಿಗೆ ರಕ್ಷಣೆ ನೀಡಬೇಡಿ ಎಂದು ಶಕುಂತಳಾ ಶೆಟ್ಟಿ ಹೇಳಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.