Home_Page_Advt
Home_Page_Advt
Home_Page_Advt
Breaking News

ಬಾಲಕನ ಅಪಹರಣ ಪ್ರಕರಣ: ಇನ್ನೋರ್ವ ಆರೋಪಿ ಮಹೇಶ್ ಬಂಧನ

ಪುತ್ತೂರು: ಬಲ್ನಾಡು ಬಳಿ ಪತ್ತೆಯಾದ, ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಬಂಧಿತ ಆರೋಪಿಯಾಗಿರುವ ಆಂಧ್ರ ಮೂಲದ ಶಿಲ್ಪಾ ಎಂಬಾಕೆಯ ಪತಿಯನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ.ಕಬಕ ವಿದ್ಯಾಪುರ ಮೂಲದ ಮಹೇಶ್(32ವ.)ಇದೀಗ ಬಂಧಿತ ಆರೋಪಿ.

ಬಲ್ನಾಡು ಗ್ರಾಮ ಪಂಚಾಯತ್ ಸದಸ್ಯರುಗಳು, ಮಹಿಳಾ ಸಾಂತ್ವನ ಕೇಂದ್ರದ ಸಿಬ್ಬಂದಿ ಪ್ರಕರಣ ಪತ್ತೆ ಮಾಡಿದ್ದರು.ಅಪಹರಣಕ್ಕೊಳಗಾದ ಬಾಲಕನನ್ನು ಸೆ.೧೦ರಂದು ಮಂಗಳೂರಿನ ಚೈಲ್ಡ್‌ಲೈನ್ ಕಚೇರಿಗೆ ಕರೆದುಕೊಂಡು ಬಂದಿದ್ದು ಚೈಲ್ಡ್‌ಲೈನ್ ನಿರ್ದೇಶಕರ ನಿರ್ದೇಶನ ಮೇರೆಗೆ ಆಪ್ತಸಮಾಲೋಚಕರು ಬಾಲಕನಿಗೆ ಆಪ್ತ ಸಮಾಲೋಚನೆಯನ್ನು ನಡೆಸಿದಾಗ ‘ತಾನು ಆಂಧ್ರಪ್ರದೇಶದ ಓಂಗೋಳ ಹತ್ತಿರದ ಸೀತಾರಾಮ್ ಪುರದ ಬಾಲಕನಾಗಿದ್ದು, ಬೆಂಗಳೂರಿನ ಯಶವಂತಪುರದ ರೈಲ್ವೇ ನಿಲ್ದಾಣದಲ್ಲಿ ಒಬ್ಬಂಟಿಯಾಗಿ ಮಲಗಿರುವಾಗ ಶಿಲ್ಪಾ ಎಂಬಾಕೆಯು ಕರೆದುಕೊಂಡು ಬಂದಿರುತ್ತಾರೆ’ ಎಂದು ಬಾಲಕ ಮಾಹಿತಿ ನೀಡಿದ್ದ ಹಿನ್ನಲೆಯಲ್ಲಿ ಬಾಲಕನನ್ನು ಬಳಿಕ ಜಿಲ್ಲಾಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೆನ್ನಿ ಡಿಸೋಜರವರ ಆದೇಶದ ಮೇರೆಗೆ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿ ಸೂಕ್ತ ಪುನರ್ವಸತಿಯನ್ನು ಕಲ್ಪಿಸಲಾಗಿತ್ತು.ಬಳಿಕ ಚೈಲ್ಡ್‌ಲೈನ್ ತಂಡವು ಸಂಪ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ. ಪುತ್ತೂರು ಶಿಶುಅಭಿವೃದ್ದಿ ಯೋಜನಾಧಿಕಾರಿ, ಮಹಿಳಾ ಸಾಂತ್ವನದ ಸಿಬ್ಬಂದಿ ಹಾಗೂ ಬಲ್ನಾಡು ಗ್ರಾಮ ಪಂಚಾಯತ್ ಸದಸ್ಯರ ಜೊತೆ ತೆರಳಿ ಶಿಶುಅಭಿವೃದ್ದಿ ಯೋಜನಾಧಿಕಾರಿಯವರು ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಶಿಲ್ಪಾ ವಿರುದ್ಧ `ಬಾಲಕನ ಅಪಹರಣ’ ಪ್ರಕರಣ ದಾಖಲಿಸಿಕೊಂಡಿದ್ದರು.ಬಳಿಕ ವಿಚಾರಣೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಆಕೆಯ ಜೊತೆಗಿದ್ದ ಮಹೇಶ್ ಎಂಬವರನ್ನು ಬಂಧಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.