Home_Page_Advt
Home_Page_Advt
Home_Page_Advt

ಅಸಂಘಟಿತ ಕಾರ್ಮಿಕ ವಲಯದಲ್ಲಿದ್ದರೂ ನಮಗೆ ಸವಲತ್ತು ಸಿಗುತ್ತಿಲ್ಲ – ಕರ್ನಾಟಕ ರಾಜ್ಯ ವಿಶ್ವಕರ್ಮ ಯುವ ಮಿಲನ್ ಪತ್ರಿಕಾಗೋಷ್ಠಿಯಲ್ಲಿ ಆಗ್ರಹ

Puttur_Advt_NewsUnder_1
Puttur_Advt_NewsUnder_1
  • ನಮಗೆ ಆರ್ಥಿಕ ಶಕ್ತಿ ತುಂಬುವಲ್ಲಿ ಕೇಂದ್ರ, ರಾಜ್ಯ ಸರಕಾರಗಳು ಕ್ರಮ ಕೈಗೊಳ್ಳಬೇಕು

ಪುತ್ತೂರು: ವಿಶ್ವಕರ್ಮ ಸಮಾಜದಲ್ಲಿ ಬಡತನ ಪ್ರಮಾಣ ಹೆಚ್ಚುತ್ತಿದೆ. ಇದಕ್ಕೆ ಮುಖ್ಯ ಕಾರಣ ಇತ್ತೀಚಿಗಿನ ವರ್ಷದಲ್ಲಾದ ಬದಲಾವಣೆ ಸಮಸ್ಯೆ. ವಿಶ್ವಕರ್ಮ ಸಮಾಜವು ಅಸಂಘಟಿತ ಕಾರ್ಮಿಕ ವಲಯದಲ್ಲಿದ್ದರೂ ಇತರ ಅಸಂಘಟಿತ ಕಾರ್ಮಿಕರಿಗೆ ಸಿಗುವ ಸವಲತ್ತು ಸಿಗುತ್ತಿಲ್ಲ. ರಾಜ್ಯದಲ್ಲಿ 25ಲಕ್ಷ ವಿಶ್ವಕರ್ಮಕರಿಗೆ ಆರ್ಥಿಕ ಶಕ್ತಿ ತುಂಬು ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ವಿಶ್ವಕರ್ಮ ಯುವ ಮಿಲನ್ ರಾಜ್ಯಾಧ್ಯಕ್ಷ ವಿಕ್ರಮ್ ಐ ಆಚಾರ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಕಟ್ಟಡ ಕಾರ್ಮಿಕರಿಗೆ ಗುರುತುಚೀಟಿ ಮೂಲಕ ನಾನಾ ಸೌಲಭ್ಯ ಸಿಗುತ್ತಿದ್ದರೂ ನಮಗೆ ಸಿಗುತ್ತಿಲ್ಲ. ಆರ್ಥಿಕ ನಷ್ಟದ ಕಾರಣದಿಂದ ಬ್ಯಾಂಕ್ ಸಾಲ ಸಿಗುತ್ತಿಲ್ಲ. ಚಿನ್ನ ಬೆಳ್ಳಿ ಕೆಲಸ, ಮರದ ಕೆಲಸ, ಕಬ್ಬಿಣ ಕೆಲಸ, ಕಂಚಿನ ಕೆಲಸ ಮತ್ತು ಶಿಲ್ಪ ಶಾಸ್ತ್ರಕ್ಕೆ ಸಂಬಂಧಪಟ್ಟ ಕೆಲಸಗಳನ್ನು ವಿಶ್ವಕರ್ಮರು ಸಾವಿರಾರು ವರ್ಷಗಳಿಂದ ನಿರ್ವಹಿಸುತ್ತಾ ಬಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇತರ ಸಮುದಾಯಗಳೂ ಈ ಕೆಲಸ ಮಾಡುತ್ತಿವೆ. ಜತೆಗೆ ಚಿನ್ನದ ಕುಸುರಿ ಕೆಲಸಗಳನ್ನು ಯಾಂತ್ರೀಕೃತವಾಗಿ ಮಾಡಲಾಗುವ ಕಾರಣ ವಿಶ್ವಕರ್ಮರಿಗೆ ಉದ್ಯೋಗ ಇಲ್ಲದಂತಾಗಿದೆ. ಚಿನ್ನಾಭರಣಗಳನ್ನು ಬಂಗಾಳ ಮೂಲದಿಂದ, ಇತರ ಬೆಳ್ಳಿ ಸೊತ್ತುಗಳನ್ನು ತಮಿಳುನಾಡಿನಿಂದ ತರಿಸಿಕೊಂಡು ಮಾರಲಾಗುತ್ತಿದೆ. ಜತೆಗೆ ಯಂತ್ರದ ಮೂಲಕ ಮಾಡುವ ಆಭರಣಗಳಿಗೆ ಬೇಡಿಕೆ ಹೆಚ್ಚಿದೆ. ಇದು ಪರಂಪರಾಗತ ವಿಶ್ವಕರ್ಮ ಕುಶಲಕರ್ಮಿಗಳ ಬದುಕನ್ನೇ ಸಂಕಷ್ಟಕ್ಕೆ ತಳ್ಳಿದೆ. ತಮ್ಮ ಕೆಲಸದಲ್ಲಿ ಆರೋಗ್ಯದ ಸಮಸ್ಯೆ ಬಹುಬೇಗ ಆವರಿಸುವ ಕಾರಣ ಜೀವನದ ಸಂಧ್ಯಾ ಕಾಲದಲ್ಲಿ ಸಂಕಷ್ಟ ಎದುರಿಸುವ ಸ್ಥಿತಿ ಸಮಾಜದ ಹಿರಿಯರಿಗಿದೆ ಎಂದು ಹೇಳಿದರು.

ರಾಜ್ಯ ಸರಕಾರ 3ವರ್ಷಗಳ ಹಿಂದೆ ವಿಶ್ವಕರ್ಮ ಜಯಂತಿ ಆಚರಿಸಲು ನಿರ್ಧರಿಸಿದೆ. ಇದು ಉತ್ತಮ ನಿರ್ಧಾರ. ಇದರ ಫಲವಾಗಿ ಪ್ರತೀ ವರ್ಷ ಸರಕಾರಿ ಕಾರ್ಯಕ್ರಮ ನಡೆಯುತ್ತಿದೆ. ಆದರೆ ವಿಶ್ವಕರ್ಮ ಜಯಂತಿ ಎಂಬ ಪರಿಕಲ್ಪನೆ ಸರಿಯಲ್ಲ. ವಿಶ್ವಕರ್ಮ ದೇವರ ಮಹೋತ್ಸವ ಎಂದಾಗಬೇಕು. ಸರಕಾರವೂ ಇದೇ ಪರಿಕಲ್ಪನೆ ಅಳವಡಿಸಬೇಕು ಎಂದು ಆಗ್ರಹಿಸಲಾಗಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ವಿಶ್ವಕರ್ಮ ಯುವ ಮಿಲನ್‌ನ ಪ್ರಧಾನ ಕಾರ್ಯದರ್ಶಿ ಸೂರಜ್ ಟಿ. ಆಚಾರ್ಯ, ದ.ಕ. ಜಿಲ್ಲಾಧ್ಯಕ್ಷ ಹರೀಶ್ ಬಿ. ಆಚಾರ್ಯ, ತಾಲೂಕು ಅಧ್ಯಕ್ಷ ಹರೀಶ್ ಕೆ. ಆಚಾರ್ಯ, ಮಾಧ್ಯಮ ಪ್ರಮುಖ್ ದಿವಾಕರ ಆಚಾರ್ಯ ಪಾಲ್ತಾಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.