Home_Page_Advt
Home_Page_Advt
Home_Page_Advt

ಬಿಳಿನೆಲೆ ಪ್ರಾ.ಕೃ.ಸ.ಸಂಘದ ವಾರ್ಷಿಕ ಮಹಾಸಭೆ

106.75 ಕೋಟಿ ವ್ಯವಹಾರ, 17.61ಲಕ್ಷ ಲಾಭ

ಕಡಬ : ಬಿಳಿನೆಲೆ ಪ್ರಾ.ಕೃ.ಪ.ಸ.ಸಂಘದ 2018-19ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.15ರಂದು ಸಂಘದ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ವಾಲ್ತಾಜೆ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ಅಭಿವೃದ್ಧಿಯಲ್ಲಿ ಎಲ್ಲರ ಸಹಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದಲ್ಲದೆ ಬಿಳೆನೆಲೆ ಪ್ರಾ.ಕೃ.ಪತ್ತಿನ ಸ.ಸಂಘವು 2018-19ನೇ ಸಾಲಿನಲ್ಲಿ 106.75ಕೋಟಿ ವ್ಯವಹಾರ ನಡೆಸಿದ್ದು 17.61 ಲಕ್ಷ ಲಾಭ ಗಳಿಸಿದೆ. ವಾರ್ಷಿಕ ವರ್ಷದಲ್ಲಿ ಸಂಘವು6.67ಕೋಟಿ ಠೇವಣಿ ಹೊಂದಿದ್ದು 2.55ಕೋಟಿ ಪಾಲು ಬಂಡವಾಳ ಹೊಂದಿದ್ದು 19.82ಕೋಟಿ ಸಾಲ ನೀಡಿದ್ದು ವರ್ಷಾಂತ್ಯಕ್ಕೆ 98.23% ಸಾಲ ವಸೂಲಾತಿ ಮಾಡಲಾಗಿದೆ. ಎಂದು ವಿವರಿಸಿದ ಅಧ್ಯಕ್ಷರು ವರದಿ ವರ್ಷದಲ್ಲಿ ಸದಸ್ಯರ ಆರ್ಥಿಕ ಅವಶ್ಯಕತೆಯನ್ನು ಪೂರೈಸಿ ಪ್ರಗತಿಗೆ ಸಹಕಾರ ನೀಡಿದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರು, ಆಡಳಿತ ಮಂಡಳಿ, ನಿರ್ದೇಶಕರು, ಮತ್ತು ಅಧಿಕಾರಿಗಳಿಗೆ , ನೌಕರ ವೃಂದಕ್ಕೆ ಎಲ್ಲಾ ರೀತಿಯಲ್ಲೂ ಸಂಘದ ಅಬಿವೃದ್ದಿಯಲ್ಲಿ ಸಹಕರಿಸುತ್ತಿರುವ ಸಂಘದ ಸದಸ್ಯರಿಗೆ ಅಬಿನಂದನೆ ಸಲ್ಲಿಸಿ ಮುಂದೆಯೂ ಎಲ್ಲರ ಸಹಕಾರ ಕೋರಿದರು.

20:20:20 ಸಂಘದ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ
ಸಂಘದ ಮಹಾಸಭೆಯಲ್ಲಿ ಪಾಳ್ಗೊಳ್ಳುವ ಸದಸ್ಯರಿಗೆ ಕೂಪನ್ ವ್ಯವಸ್ಥೆ ಮಾಡಲಾಗಿದ್ದು 20ರ 3 ಹಂತಗಳಲ್ಲಿ ಡ್ರಾ ನಡೆಸಿ ಒಟ್ಟು 60 ಸದಸ್ಯರಿಗೆ ಪಿಕ್ಕಾಸು, ಈಸ್‌ಮುಳ್ಳು, ಹಾರೆಗಳನ್ನು ಪ್ರೋತ್ಸಾಹಕ ಬಹುಮಾನ ನೀಡಲಾಯಿತು.  3 ಗ್ರಾಮಗಳನ್ನೊಳಗೊಂಡ ಈ ಬಿಳೆನೆಲೆ ಸಹಕಾರಿ ಬ್ಯಾಂಕ್‌ನ ಮಹಾಸಭೆಯಲ್ಲಿ ಈ ವರ್ಷ ಸಾವಿರಕ್ಕಿಂತಲೂ ಹೆಚ್ಚಿನ ಸದಸ್ಯರು ಪಾಲ್ಗೊಂಡಿರುವುದು ವಿಶೇಷವಾಗಿತ್ತು.
ಬಿಳಿನೆಲೆ ಹಾ.ಉ.ಸ.ಸಂಘದ ಅಧ್ಯಕ್ಷ ಪ್ರದೀಪ್ ಕುಮಾರ್ , ವಿಜಯ್ ಕುಮಾರ್ ಎರ್ಕ, ರಮೇಶ್ ವಾಲ್ತಾಜೆ , ಸೇರಿದಂತೆ ಹಲವರು ಸಂಘದ ಅಭಿವೃದ್ಧಿಯ ಬಗ್ಗೆ ಚರ್ಚಿಸಿದರು. ಸಂಘದ ಉಪಾಧ್ಯಕ್ಷ ಚೆನ್ನಕೇಶವ ಕೈಂತಿಲ, ನಿರ್ದೇಶಕರಾದ ವಾಡ್ಯಪ್ಪ ಗೌಡ, ರಾಮಚಂದ್ರ ಡಿ, ಲಕ್ಷ್ಮಣ ಆಚಾರಿ, ಸುಬ್ಬ ಪರವ , ಉಮಾವತಿ ಕಳಿಗೆ, ಶಶಿಲೇಖಾ ಮುಗೇರು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಪ್ರತಿನಿಧಿ ಪ್ರದೀಪ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ವಾಲ್ತಾಜೆ ಸ್ವಾಗತಿಸಿ, ನಿರ್ದೇಶಕ ಜಗದೀಶ್ ವಂದಿಸಿದರು. ನಿರ್ದೇಶಕರಾದ ಉದಯ ಕುಮಾರ್ ಬಿ ಕಾರ್‍ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಚೆನ್ನಕೇಶವ ಕೈಂತಿಲ ವಾರ್ಷಿಕ ಲೆಕ್ಕಪತ್ರ ಮಂಡಿಸಿದರೆ, ಮುಖ್ಯ ಕಾರ್‍ಯನಿರ್ವಾಹಣಾಧಿಕಾರಿ ಎಲ್ಯಣ್ಣ ಗೌಡ ನಡ್ತೋಟು ವಾರ್ಷಿಕ ವರದಿ ವಾಚಿಸಿದರು. ಸಿಬ್ಬಂದಿಗಳಾದ ರೋಸಮ್ಮ , ಸುಜಾತ, ಭಾಸ್ಕರ ಯನ್, ಚೆನ್ನಕೇಶವ ಯನ್, ನಾರಾಯಣ ಟಿ, ಮನೋಜ್ ಕುಮಾರ್ , ವೆಂಕಟೇಶ್, ರಂಜಿತ್ ಸಹಕರಿಸಿದರು.

ಸರಕಾರದ ಸಾಲಮನ್ನಾ ಆನ್‌ಲೈನ್‌ನಲ್ಲಿ ಜಮೆಯಾಗಿದ್ದರೂ ಖಾತೆಗೆ ಬರಲಿಲ್ಲ: 
ಕಳೆದ ಸರಕಾರ ಕೃಷಿಕ ರೈತರ ಸಾಲ ಮನ್ನಾ ಮಾಡಿದ್ದು ಮನ್ನಾ ಮಾಡಿದ ಬಗ್ಗೆ ಪ್ರತಿಯೊಬ್ಬರಿಗೂ ಋಣಮುಕ್ತ ದೃಢಪತ್ರ ನೀಡಿದ್ದಂತೆ ಆನ್‌ಲೈನ್‌ನಲ್ಲಿ ನಮ್ಮ ಸಾಲಮನ್ನಾ ಆದ ಬಗ್ಗೆ ದಾಖಲೆ ತೋರಿಸುತ್ತಿದ್ದರೂ ಬ್ಯಾಂಕ್‌ನಲ್ಲಿ ವಿಚಾರಿಸಿದರೆ ನಮ್ಮ ಖಾತೆಗೆ ಹಣ ಬಂದಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಹಾಗಾದರೆ ಸರಕಾರದಿಂದ ಬಿಡುಗಡೆಯಾದ ಸಾಲಮನ್ನದ ಹಣ ಎಲ್ಲಿ ಮಧ್ಯವರ್ತಿಗಳಲ್ಲಿ, ಉಳಿದಿದೆ. ಈ ಬಗ್ಗೆ ಸೂಕ್ತ ತನಿಖೆ ಆಗಲೇಬೇಕಾಗಿದೆ , ದೇವರು ಕೊಟ್ಟರೂ ಪೂಜಾರಿ ಬಿಡಲ್ಲ ಎಂಬಂತಾಗಿದೆ

ನಮಗೆ 1 ವಾರದೊಳಗೆ ನಮ್ಮ ಖಾತೆಗೆ ಹಣ ಜಮೆಯಾಗದಿದ್ದರೆ ಮುಂದಿನ ವಾರದಿಂದ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದಲ್ಲದೆ, ಈ ಸೊಸೈಟಿಯಲ್ಲಿ ಹಲವಾರು ಮಂದಿಗೆ ಹಣ ಬರಲಿಲ್ಲ ಅದೇ ರೀತಿ ಹೆಚ್ಚಿನ ಎಲ್ಲಾ ಬ್ಯಾಂಕ್‌ಗಳ್ಲಲಿ ಇದೇ ಸಮಸ್ಯೆಯಾಗಿದ್ದು ಎಲ್ಲರನ್ನು ಒಟ್ಟಾಗಿಸಿಕೊಂಡು ಉಗ್ರ ಪ್ರತಿಭಟನೆ ನಡೆಸಲಾಗುವುದು.
ದಾಮೋದರ ಗೌಡ ,ಸದಸ್ಯ, ಸಿಎ ಬ್ಯಾಂಕ್ ಬಿಳಿನೆಲೆ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.