Home_Page_Advt
Home_Page_Advt
Home_Page_Advt
Breaking News

ಕಾವು: ಉಚಿತ ಯೋಗ ತರಬೇತಿ ಶಿಬಿರದ ಸಮಾರೋಪ

ವರದಿ: ಸುನೀಲ್ ಎನ್. ಕಾವು


ಕಾವು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದ ನೇತೃತ್ವದಲ್ಲಿ ಯುವ ಆದರ್ಶ ಗ್ರಾಮವಿಕಾಸ ಯೋಜನೆಯಡಿ ಮಂಗಳೂರು ನೆಹರು ಯುವ ಕೇಂದ್ರ ಮತ್ತು ಪುತ್ತೂರು ಯೋಗ ಕೇಂದ್ರದ ಸಹಕಾರದೊಂದಿಗೆ ನನ್ಯ ಜನಮಂಗಲ ಸಭಾಭವನದಲ್ಲಿ ಒಂದು ವಾರಗಳ ಕಾಲ ನಡೆದ ಉಚಿತ ಯೋಗ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮವು ಸೆ.18ರಂದು ಬೆಳಿಗ್ಗೆ ನಡೆಯಿತು.

ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ಸಮಾರೋಪ ಭಾಷಣ ಮಾಡಿದರು. ಯೋಗ ತರಬೇತಿ ನೀಡಿದ ಪುತ್ತೂರು ಯೋಗ ಕೇಂದ್ರದ ಅಧ್ಯಕ್ಷ ಗಿರೀಶ್ ಮಳಿ ಮತ್ತು ಕಾರ್ಯದರ್ಶಿ ಪ್ರಸಾದ್ ಪಾಣಾಜೆಯವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಎಸ್‌ಜಿಎಂ ಕನ್‌ಸ್ಟ್ರಕ್ಷನ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಸಂದೀಪ್ ನಾಕ್‌ರವರು ಅತಿಥಿಯಾಗಿ ಮಾತನಾಡಿದರು. ಯುವಕ ಮಂಡಲದ ಅಧ್ಯಕ್ಷ ಸುನೀಲ್ ನಿಧಿಮುಂಡರವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಬಿರಾರ್ಥಿಗಳಾದ ರಮೇಶ್ಚಂದ್ರ ಮುಂಡಕೊಚ್ಚಿ ಮತ್ತು ಜ್ಯೋತಿ ನೆಲ್ಲಿತಡ್ಕರವರು ಅನಿಸಿಕೆ ವ್ಯಕ್ತಪಡಿಸಿದರು.

ಸನ್ಮಾನ:
ಒಂದು ವಾರಗಳ ಕಾಲ ಶಿಬಿರಾರ್ಥಿಗಳಿಗೆ ಯೋಗ ತರಬೇತಿ ನೀಡಿದ ಪ್ರಸಾದ್ ಪಾಣಾಜೆ ಮತ್ತು ಗಿರೀಶ್ ಮಳಿಯವರಿಗೆ ಯುವಕ ಮಂಡಲದ ವತಿಯಿಂದ ಶಾಲು ಹೊದಿಸಿ, ಹಾರಹಾಕಿ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಯೋಗ ತರಬೇತಿಯಲ್ಲಿ ಸಹಕರಿಸಿದ ಅಭಿಜಿತ್, ರಾಮಚಂದ್ರ ಭಟ್, ರಮೇಶ್, ಸಂದೀಪ್ ನಾಕ್‌ರವರಿಗೆ ಶಾಲು ಹಾಕಿ ಗೌರವಿಸಲಾಯಿತು.

೪೫ಜನ ಪಾಲ್ಗೊಳ್ಳುವಿಕೆ:
ಸೆ.11ರಿಂದ 18ರವರೆಗೆ ಪ್ರತಿ ದಿನ ಬೆಳಿಗ್ಗೆ ಗಂಟೆ 5.30ರಿಂದ 7ರವರೆಗೆ ನಡೆದ ಉಚಿತ ಯೋಗ ತರಬೇತಿ ಶಿಬಿರದಲ್ಲಿ 45ಜನ ಹೆಸರು ನೋಂದಾಯಿಸಿಕೊಂಡು ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು. ಯೋಗ ತರಬೇತುದಾರರಾದ ಪ್ರಸಾದ್ ಪಾಣಾಜೆ ಮತ್ತು ಗಿರೀಶ್ ಮಳಿಯವರು ಸರಳ ವ್ಯಾಯಾಮ, ಯೋಗಾಸನ, ಸೂರ್ಯನಮಸ್ಕಾರ, ಪ್ರಾಣಾಯಾಮದ ಬಗ್ಗೆ ತರಬೇತಿ ನೀಡಿದರು.

ಶಿಬಿರಾರ್ಥಿ ರಮೇಶ್ ಎನ್. ರಾವ್ ನಿಧಿಮುಂಡ ಪ್ರಾರ್ಥಿಸಿದರು. ಯುವಕ ಮಂಡಲದ ಮಾಜಿ ಅಧ್ಯಕ್ಷ ಭಾಸ್ಕರ ಬಲ್ಯಾಯ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸತೀಶ ಮದ್ಲ ವಂದಿಸಿದರು. ಮಾಜಿ ಅಧ್ಯಕ್ಷ ಗಂಗಾಧರ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಸದಸ್ಯರುಗಳು ಸಹಕರಿಸಿದರು. ಸಮಾರೋಪದ ಬಳಿಕ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.