HomePage_Banner
HomePage_Banner
HomePage_Banner

ವಿವೇಕಾನಂದ ಕಾಲೇಜು: ರಾಷ್ಟ್ರೀಯ ವಿಚಾರ ಸಂಕಿರಣ ಸಮಾರೋಪ

Puttur_Advt_NewsUnder_1
Puttur_Advt_NewsUnder_1
  • ಯುವಕರು ಅಭಿವೃದ್ಧಿ ಪೂರಕ ಸಂಶೋಧನೆಗಳಲ್ಲಿ ತೊಡಗಿ: ಡಾ. ಕೆ.ಎಂ.ಕೃಷ್ಣಭಟ್

ಪುತ್ತೂರು: ವಿಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆಗಳಾಗಬೇಕು. ಅದಕ್ಕೆ ಯುವಕರು ಸಂಶೋಧನೆ ನಡೆಸುವ ಕನಸನ್ನು ಹೊಂದಿ ಮನಸ್ಸನ್ನು ಮಾಡಬೇಕು. ವಿಜ್ಞಾನ ಎಂಬುದು ಬಹುದೊಡ್ಡ ಕೊಡುಗೆ. ಇದರಿಂದ ದೇಶದ ವಿಕಾಸವೂ ಆಗಬಹುದು, ದುರುಪಯೋಗಪಡಿಸಿಕೊಂಡರೆ ವಿನಾಶವೂ ನಡೆಯಬಹುದು. ಹಾಗಾಗಿ ದೇಶದ ಅಭಿವೃದ್ಧಿಗೆ ಪೂರಕವಾಗುವ ಸಂಶೋಧನೆಗಳಲ್ಲಿ ಯುವಕರು ತೊಡಗಬೇಕು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣಭಟ್ ಅಭಿಪ್ರಾಯಪಟ್ಟರು.

ಅವರು ಬುಧವಾರ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ರಸಾಯನಶಾಸ್ತ್ರ ವಿಭಾಗಗಳು ಕಾಲೇಜಿನ ಐಕ್ಯುಎಸಿ ಘಟಕ ಮತ್ತು ಮಂಗಳೂರು ವಿವಿ ರಸಾಯನಶಾಸ್ತ್ರ ಅಧ್ಯಾಪಕರ ಸಂಘದ ಸಂಯುಕ್ತಾಶ್ರಯದಲ್ಲಿ ಕರೆಂಟ್ ಟ್ರೆಂಡ್ಸ್ ಇನ್ ಕೆಮಿಕಲ್ ರಿಸರ್ಚ್ ಆಂಡ್ ಡೆವಲಪ್‌ಮೆಂಟ್ ಎಂಬ ವಿಷಯದ ಕುರಿತು ಆಯೋಜಿಸಿದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದರು.

ವಿಜ್ಞಾನದ ದುರುಪಯೋಗವಾಗಿ ಎಂಡೋಸಲ್ಫಾನ್ ಉದಾಹರಣೆಯಾಗಿ ನಿಲ್ಲುತ್ತದೆ. ಋಣಾತ್ಮಕ ವಿಷಯಗಳಿಗೆ ಒತ್ತು ನೀಡುವ ಬದಲು ಧನಾತ್ಮಕವಾಗಿ ಚಿಂತಿಸಿ ದೇಶಕ್ಕೆ ಕೊಡುಗೆಯನ್ನು ನೀಡುವ ಮನಸ್ಸನ್ನು ಯುವಕರು ಮಾಡಬೇಕಿದೆ. ಅಂತೆಯೇ ವಿಜ್ಞಾನ ಕ್ಷೇತ್ರದಲ್ಲಿ ಭಾರತದಲ್ಲಿ ನೋಬಲ್ ಪ್ರಶಸ್ತಿ ಪಡೆದುಕೊಂಡವರ ಸಂಖ್ಯೆ ಬಹಳ ವಿರಳವಾಗಿ. ಹಾಗೂ ಸಂಶೋಧನಾ ಪ್ರವೃತ್ತಿಯನ್ನು ಮೈಗೂಡಿಸಿಕೊಳ್ಳುವ ಬಗ್ಗೆಯೂ ಯುವಕರು ಯೋಚಿಸಬೇಕು ಎಂದು ಅವರು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ವಿಜ್ಞಾನ ಎಂಬುದು ಎಲ್ಲಾ ವಿಷಯಗಳಿಗೆ ಸಂಬಂಧಿಸಿದ್ದಾಗಿದೆ. ಹಾಗಾಗಿ ವಿಜ್ಞಾನದಲ್ಲಿನ ವಿವಿಧ ವಿಷಯಗಳು ನಾನಾ ಕಾರ್ಯಕ್ಕೆ ಆವಶ್ಯಕವಾಗಿದೆ. ಹಾಗಾಗಿ ವಿಜ್ಞಾನದಲ್ಲಿ ಸಂಶೋಧನೆಗಳಾದಾಗ ಹೊಸ ಆವಿಷ್ಕಾರಗಳು ನಡೆಯಲು ಸಾಧ್ಯ. ಈ ಆವಿಷ್ಕಾರದಿಂದ ಸಮಾಜಕ್ಕೆ ನಾನಾ ರೀತಿಯಲ್ಲಿ ಪ್ರಯೋಜನವಾಗುತ್ತದೆ. ಇದು ಸಮಾಜಕ್ಕೆ ಒಬ್ಬ ವ್ಯಕ್ತಿ ನೀಡಬಹುದಾದ ಕೊಡುಗೆಯಾಗಿದೆ ಎಂದರಲ್ಲದೆ, ಸಂಶೋಧನೆ ಎಂಬುದು ಎಲ್ಲರ ಇಂಗಿತವಾಗಿರಬೇಕು. ಹಾಗಾದಾಗ ಹೊಸದಾದ ಆಲೋಚನೆಗಳು ಬರುತ್ತದೆ ಇದು ಸಂಶೋಧನೆಗೆ ಪ್ರೇರೇಪಿಸುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಎಂ.ಟಿ.ಜಯರಾಮ ಭಟ್ ಮಾತನಾಡಿ, ಪ್ರಸ್ತುತ ಮನುಷ್ಯನಿಗೆ ಹಲವು ರೋಗಗಳು ಬಾಧಿಸುತ್ತಿದೆ. ಇದಕ್ಕೆ ಔಷಧಗಳನ್ನು ಕಂಡು ಹಿಡಿಯುವ ಮಹತ್ತರ ಕಾರ್ಯ ವಿಜ್ಞಾನ ಕ್ಷೇತ್ರಕ್ಕಿದೆ. ಮಾತ್ರವಲ್ಲದೆ ವಿಜ್ಞಾನ ದುರುಪಯೋಗ ಕಾರಣದಿಂದ ಮಾದಕ ದ್ರವ್ಯಗಳ ಸೃಷ್ಠಿಯೂ ಆಗಿದೆ. ಹಾಗಾಗಿ ಈ ಮಾದಕ ದ್ರವ್ಯವೆಂಬ ಪಿಡುಗನ್ನು ತಡೆಗಟ್ಟುವಂತಾಗಬೇಕು. ಜೊತೆಗೆ ದೇಶದ ಅಭ್ಯುದಯಕ್ಕೆ ವಿಜ್ಞಾನ ಕ್ಷೇತ್ರದ ಯುವಕರು ಕೊಡುಗೆಯನ್ನು ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಪ್ರಶಸ್ತಿ
ಈ ಸಂದರ್ಭ ಸುರತ್ಕಲ್‌ನ ಎನ್‌ಐಟಿಕೆ ಕಾಲೇಜಿನ ಹರ್ಷ ಬಿ. ಯಂಗ್ ಸೈಂಟಿಸ್ಟ್ ಅವಾರ್ಡ್ ಅನ್ನು ಪಡೆದುಕೊಂಡರು. ಪೋಸ್ಟರ್ ಪ್ರಸೆಂಟೇಶನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಮಡಿಕೇರಿಯ ಎಫ್‌ಎಂಕೆಸಿ ಕಾಲೇಜಿನ ವಿದ್ಯಾರ್ಥಿ ರಾರ್‍ಲಿಕ್ ಪಡೆದುಕೊಂಡರೆ, ಉಜಿರೆ ಎಸ್‌ಡಿಎಂ ಕಾಲೇಜಿನ ಸುರಕ್ಷ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.

ಪದವಿ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ನಿಶಾ ಸ್ವಾಗತಿಸಿದರು. ಕಾಲೇಜಿನ ಪದವಿ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಕೃಷ್ಣ ಕಾರಂತ ವಂದಿಸಿದರು. ಉಪನ್ಯಾಸಕಿ ಅಪೂರ್ವ ಹಾಗೂ ವಿದ್ಯಾರ್ಥಿನಿ ದಿಶಾ ಕಾರ್ಯಕ್ರಮ ನಿರ್ವಹಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.