ಕಾಣಿಯುರು: ಉಪ್ಪಿನಂಗಡಿ ಸ.ಪ.ಪೂ.ಕಾಲೇಜಿನಲ್ಲಿ ಸೆ ೧೮ರಂದು ನಡೆದ ಪುತ್ತೂರು ತಾಲೂಕು ಮಟ್ಟದ ಪ್ರೌಢ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಯ ತುಳು ಭಾಷಣದಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ 10 ನೇ ತರಗತಿ ವಿದ್ಯಾರ್ಥಿನಿ ಪೌರ್ಶಿ.ವಿ. ರೈ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ದೋಳ್ಪಾಡಿ ಗ್ರಾಮದ ಪಿಜಕ್ಕಳ ವೇದವ್ಯಾಸ ರೈ ಮತ್ತು ನವೀನ. ವಿ.ರೈ ದಂಪತಿಗಳ ಪುತ್ರಿಯಾಗಿರುವ ಇವರನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಜಗನ್ನಾಥ ರೈ ನುಳಿಯಾಲು, ಶಾಲಾ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸಂಪತ್ ಕುಮಾರ್ ರೈ ಪಾತಾಜೆ, ಆಡಳಿತಾಧಿಕಾರಿ ವಸಂತ ರೈ ಕಾರ್ಕಳ, ಮುಖ್ಯಗುರುಗಳಾದ ಗಿರಿಶಂಕರ ಸುಲಾಯ, ಸರಸ್ವತಿ ಅಭಿನಂದಿಸಿದರು. ಸಹಶಿಕ್ಷಕ ಅಶೋಕ್ ಕುಮಾರ್, ದೈಹಿಕ ಶಿಕ್ಷಣ ಶಿಕ್ಷಕ ರಂಗನಾಥ್ ಸಹಕರಿಸಿದರು.