HomePage_Banner
HomePage_Banner
HomePage_Banner
HomePage_Banner

ಮಾಣಿ ಕರ್ನಾಟಕ ಪ್ರೌಢ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ಮಾಣಿ:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯ ಮಾಣಿ ವಲಯ , ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆ ಮತ್ತು ಲಯನ್ಸ್ ಕ್ಲಬ್ ಮಾಣಿ ಹಾಗೂ ಇಂಟರ್ ಅ್ಯಕ್ಟ್ ಕ್ಲಬ್  ಕರ್ನಾಟಕ ಪ್ರೌಢ ಶಾಲೆ ಮಾಣಿ  ಆಶ್ರಯದಲ್ಲಿ ಮಾಣಿ ಕರ್ನಾಟಕ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಜರಗಿತು.ಲಯನ್ಸ್ ಕ್ಲಬ್ ಅಧ್ಯಕ್ಷ  ಗಂಗಾಧರ ರೈ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದ ಅವರು  ಹದಿ ಹರೆಯದ ವಯಸ್ಸು  ಚಟಗಳಿಗೆ ಬಲಿಯಾಗುವ ವಯಸ್ಸು , ಈ ಕಾಲಘಟ್ಟದಲ್ಲಿ ಯಾವುದೇ ಆಸೆ ಆಕಾಂಕ್ಷಗಳಿಗೆ ಬಲಿಯಾಗದೆ ಸನ್ನಡತೆಯ ಜೀವನವನ್ನು ರೂಪಿಸಿಕೊಳ್ಳಬೇಕೆಂದು ತಿಳಿಸಿದರು.
ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ  ಕೆಯ್ಯಾರು ನಾರಾಯಣ ಭಟ್ ರವರು ಮಾತನಾಡಿ, ದುಶ್ಚಟ ಮುಕ್ತ ಸಮಾಜ ನಮ್ಮದಾಗಬೇಕು, ಸಹವಾಸ ದೋಷದಿಂದ ಜೀವನ ಹಾಳು ಮಾಡಬಾರದು, ಉತ್ತಮ ಶಿಕ್ಷಣ ಪಡೆಯ ಬೇಕು. ಆರೋಗ್ಯವಂತರಾಗಿ, ಗೌರವಯುತರಾಗಿ ಬದುಕನ್ನು ರೂಪಿಸಿಕೊಳ್ಳ ಬೇಕೆಂದು ಹೇಳಿದರು.
ಮಾಣಿ  ವಿದ್ಯಾಭಿವರ್ಧಕ ಸಂಘ  ಅಧ್ಯಕ್ಷ ರೋ. ಕಿರಣ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಬಿ.ಕೆ ಭಂಡಾರಿಯವರು ಪ್ರಾಸ್ತಾವಿಕ ಭಾಷಣ ಮಾಡಿದರು. ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ , ಮಾಣಿ ಜನಜಾಗೃತಿ ವೇದಿಕೆಯ ಅಧ್ಯಕ್ಷ ರೋಹಿತಾಕ್ಷ, ಸೇವಾ ಪ್ರತಿನಿಧಿಗಳಾದ ಜಯಶ್ರೀ , ಶಶಿಕಲಾ ಹಾಗೂ  ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

  1. JAYARAMA KANCHANA

    Suddi news janathege thumba samarpaka seve needuttide. E payana heege munduvariyali jai shivanand sir &team (suddi abhimani)

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.