Home_Page_Advt
Home_Page_Advt
Home_Page_Advt
Breaking News

ಎಸ್‌ಡಿಪಿಐ ಪ್ರತಿಭಟನೆಯಲ್ಲಿ ಸೈನಿಕರ ವಿರುದ್ಧ ಕೋಮು ಪ್ರಚೋದನೆ – ಆರೋಪ

  • ಪ್ರಕರಣ ದಾಖಲಿಸುವಂತೆ ಹಿಂಜಾವೇಯಿಂದ ಪೊಲೀಸರಿಗೆ ದೂರು

ಪುತ್ತೂರು: ಸೆ.19 ರಂದು ನಡೆದ ಎಸ್‌ಡಿಪಿಐ ಪ್ರತಿಭಟನಾ ಸಭೆಯಲ್ಲಿ ಭಾರತ ಸೈನಿಕರ ವಿರುದ್ಧ ಅವಹೇಳಕಾರಿಯಾಗಿ ಮಾತನಾಡಿ ಭಾರತೀಯ ಸೈನಿಕರ ಮತ್ತು ಸೈನ್ಯ ವ್ಯವಸ್ಥೆಯನ್ನು ಅವಮಾನಿಸಿ ಕೋಮು ಪ್ರಚೋಧನಕಾರಿಯಾಗಿ ಮಾತನಾಡಿರುವ ಎಸ್‌ಡಿಪಿಐ ಮುಖಂಡ ಜಾಬೀರ್ ಅರಿಯಡ್ಕ, ಸಿದ್ದೀಕ್ ,ಬಶೀರ ಕೂರ್ನಡ್ಕ  ಮತ್ತು ಪ್ರತಿಭಟನೆಯ ಕಾರ್ಯಕ್ರಮ ಆಯೋಜಿಸಿದ ಎಸ್‌ಡಿಪಿಐನ ಮುಖಂಡರು ಮತ್ತು ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹಿಂದೂ ಜಾಗರಣಾ ವೇದಿಕೆ ತಾಲೂಕು ಉಪಾಧ್ಯಕ್ಷ ಶಾಂತಿಗೋಡು ಪಂಜಿಗ ನಿವಾಸಿ ದಿನೇಶ್ ಪಂಜಿಗ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಎಸ್‌ಡಿಪಿಐ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಅದರಲ್ಲಿ ಎಸ್.ಡಿ.ಪಿ.ಐ ಮುಖಂಡ ಜಾಬೀರ್ ಅರಿಯಡ್ಕ ಅವರು ಭಾರತೀಯ ಸೈನಿಕರು ಕಾಶ್ಮೀರದಲ್ಲಿ ಮುಸ್ಲಿಮರನ್ನು ಆಪಲ್ ಗಿಡದಂತೆ ಕತ್ತರಿಸುತ್ತಿದ್ದಾರೆ. ಸೈನಿಕರ ಮನಸ್ಸಿನಲ್ಲಿ ಮತ್ತು ಅವರ ಹೃದಯದಲ್ಲಿ ಕೋಮು ಭಾವನೆ ಇದೆ. ಅವರು ಆರ್.ಎಸ್.ಎಸ್. ಮತ್ತು ಸಂಘ ಪರಿವಾರದ ಶಾಖೆಯಿಂದ ಬಂದವರು ಎಂಬುದಾಗಿ ಭಾರತೀಯ ಸೈನಿಕರ ಮತ್ತು ಸೈನ್ಯ ವ್ಯವಸ್ಥೆಯ ವಿರುದ್ಧ ಮಾತನಾಡಿ ಸೈನಿಕರಿಗೆ ಅವಮಾನ ಮಾಡಿದ್ದಾರೆ. ಮತ್ತು ಭಾರತದಲ್ಲಿ ಎಲ್ಲಾ ಮುಸ್ಲೀಮರು ಇವರ ವಿರುದ್ಧ ಹೋರಾಟ ಮಾಡಬೇಕು ಮತ್ತು ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ದರಾಗಬೇಕು ಎಂದು ಸೈನಿಕರ ವಿರುದ್ಧ ಎತ್ತಿ ಕಟ್ಟಿ ಕೋಮು ಪ್ರಚೋದನೆ ನೀಡಿರುತ್ತಾರೆ. ಯಾವುದೇ ಸ್ವಾರ್ಥವನ್ನು ಇಟ್ಟುಕೊಳ್ಳದೆ ಮನೆ ಮಠ, ಕುಟುಂಬವನ್ನು ಬಿಟ್ಟು ಕಠಿಣ ಸಂದರ್ಭದಲ್ಲಿಯೂ ದೇಶಕ್ಕಾಗಿ, ತಾಯಿ ನಾಡಿಗೋಸ್ಕರ ಹೋರಾಟ ಮಾಡುತ್ತಿರುವ ನಮ್ಮ ದೇಶದ ವೀರ ಸೈನಿಕರಿಗೆ ಮತ್ತು ಸೈನ್ಯ ವ್ಯವಸ್ಥೆಗೆ ಅವಮಾನಿಸಿ ದೇಶ ದ್ರೋಹದ ಹೇಳಿಕೆ ನೀಡಿರುವ ಮತ್ತು ಕೋಮು ಪ್ರಚೋದನಕಾರಿಯಾಗಿ ಮಾತನಾಡಿದ ಎಸ್.ಡಿ.ಪಿ.ಐ ಮುಖಂಡ ಜಾಬೀರ್ ಅರಿಯಡ್ಕ, ಸಿದ್ದೀಕ್ ಮತ್ತು ಬಶೀರ್ ಕೂರ್ನಡ್ಕ ಪ್ರತಿಭಟನಾ ಕಾರ್ಯಕ್ರಮ ಆಯೋಜಿಸಿದ ಎಸ್‌ಡಿಪಿಐ ನ ಮುಖಂಡರು ಮತ್ತು ಆಯೋಜಕರ ವಿರುದ್ಧ ಪ್ರಕರಣವನ್ನು ದಾಖಲಿಸಿ ಅವರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ದಿನೇಶ್ ಅವರು ದೂರಿನಲ್ಲಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.