Home_Page_Advt
Home_Page_Advt
Home_Page_Advt
Breaking News

ಟ್ಯಾಂಕರ್ ಟ್ಯಾಂಕ್‌ನೊಳಗಡೆ ಚಾಲಕ ನಾಗರಾಜ್ ಶವ ಪತ್ತೆ ಆಕಸ್ಮಿಕ ಸಾವೇ? ಕೊಲೆಯೇ?-ಸಂಶಯ

ಉಪ್ಪಿನಂಗಡಿ: ನಿಲ್ಲಿಸಿದ್ದ ಟ್ಯಾಂಕರ್ ಲಾರಿಯ ಟ್ಯಾಂಕ್‌ನೊಳಗಡೆ ಚಾಲಕನ ಶವ ಪತ್ತೆಯಾದ ಘಟನೆ ಸೆ.20 ರಂದು ಶಿರಾಡಿ ಘಾಟಿಯ ಕೆಂಪು ಹೊಳೆಯಲ್ಲಿ ನಡೆದಿದ್ದು, ಈ ಬಗ್ಗೆ ಸಕಲೇಶಪುರ ಗ್ರಾಮಾಂತರಅ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ. ತಮಿಳುನಾಡಿನ ತಿರುಚಿ ಜಿಲ್ಲೆಯ ಪೆತ್ತುಪಟ್ಟ ಗ್ರಾಮದ ನಟರಾಜನ್ ಎಂಬವರ ಪುತ್ರ ನಾಗರಾಜ್ ಮೃತಪಟ್ಟ ಟ್ಯಾಂಕರ್ ಚಾಲಕ. ನಾಗರಾಜ್ ಡಾಮರು ಕೊಂಡೊಯ್ಯುವ ಟ್ಯಾಂಕರ್‌ನಲ್ಲಿ ಚಾಲಕನಾಗಿದ್ದು, ಗುರುವಾರ ಹೊಸೂರಿನಿಂದ ಮಂಗಳೂರಿಗೆ ಡಾಮರು ಲೋಡು ಮಾಡಲೆಂದು ಬರುತ್ತಿದ್ದರು. ಇವರ ಟ್ಯಾಂಕರ್ ಶಿರಾಡಿ ಘಾಟಿಯಲ್ಲಿ ನಿಲ್ಲಿಸಿದ್ದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಅದರ ಟ್ಯಾಂಕ್‌ನೊಳಗಡೆ ಚಾಲಕ ನಾಗರಾಜ್‌ರವರ ಶವ ಇರುವುದು ಶುಕ್ರವಾರ ಬೆಳಕಿಗೆ ಬಂದಿತ್ತು.

ಟ್ಯಾಂಕರ್‌ನಲ್ಲಿ ಚಾಲಕ ಮಾತ್ರ ಇದ್ದು, ಹೆದ್ದಾರಿ ಬದಿ ನಿಲ್ಲಿಸಲಾಗಿದ್ದ ಟ್ಯಾಂಕರ್‌ನ ಚಾಲಕ ಇಲ್ಲದೇ ಇದ್ದುದರಿಂದ ಸಾರ್ವಜನಿಕರು ಹುಡುಕಾಡಿದ ವೇಳೆ ಟ್ಯಾಂಕ್‌ನೊಳಗೆ ಶವವಿರುವುದು ಬೆಳಕಿಗೆ ಬಂತು ಎನ್ನಲಾಗಿದೆ. ಮೂಗಿನಲ್ಲಿ ನೊರೆ ಬರುವುದು ಬಿಟ್ಟರೆ, ದೇಹದಲ್ಲಿ ಬೇರೇನೋ ಗಂಭೀರ ಗಾಯಗಳಿಲ್ಲ. ಟ್ಯಾಂಕರ್‌ನ ಒಳಗಡೆ ಇಳಿದ ಈತ ಉಸಿರುಕಟ್ಟಿ ಅಥವಾ ಕೆಮಿಕಲ್ಸ್‌ನ ಗಾಳಿ ಸೇವನೆಯಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆಯಾದರೂ ಈ ಸಾವಿನ ಕುರಿತು ಹಲವು ಅನುಮಾನ ಸೃಷ್ಟಿಯಾಗಿದೆ. ಚಾಲಕನನ್ನು ಯಾರಾದರೂ ಕೊಲೆಗೈದು ಟ್ಯಾಂಕ್‌ನೊಳಗೆ ಎಸೆದಿರಬಹುದೇ ಎನ್ನುವ ಸಂಶಯವೂ ವ್ಯಕ್ತವಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕ ಸಾವಿನ ಕಾರಣ ಸ್ಪಷ್ಟವಾಗಲಿದೆ. ಈ ಬಗ್ಗೆ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.