Home_Page_Advt
Home_Page_Advt
Home_Page_Advt
Breaking News

ಕಾವು: ಕಾರಿನಲ್ಲಿ ಮನೆಯಂಗಳಕ್ಕೆ ಬಂದ ತಂಡ ಅಪರಿಚಿತರ ಕಂಡು ಬೊಬ್ಬೆ ಹೊಡೆದ ಗೃಹಿಣಿ-ತಂಡ ಪರಾರಿ

 

ಪುತ್ತೂರು: ಮನೆಗೆ ಬಂದ ಆರು ಮಂದಿಯ ತಂಡವೊಂದು ಮನೆಯ ಮಹಿಳೆ ಬೊಬ್ಬೆ ಹೊಡೆದಾಗ ಪರಾರಿಯಾದ ಘಟನೆ ಕಾವು ಮಾಡ್ನೂರಿನಲ್ಲಿ ನಡೆದ ಬಗ್ಗೆ ತಡವಾಗಿ ವರದಿಯಾಗಿದೆ.  ಮಾಡ್ನೂರು ನಿವಾಸಿ ಶಾಫಿ ಎಂಬವರ ಮನೆಗೆ ಮೂರು ದಿನಗಳ ಹಿಂದೆ ಬೆಳಿಗ್ಗೆ ವಾಹನವೊಂದರಲ್ಲಿ ಆರು ಮಂದಿಯ ತಂಡ ಮನೆಯ ಅಂಗಳಕ್ಕೆ ಬಂದಿದ್ದರು. ಅಪರಿಚಿತ ವ್ಯಕ್ತಿಗಳನ್ನು ಕಂಡು ಮನೆಯಲ್ಲಿದ್ದ ಮಹಿಳೆ ಬೊಬ್ಬೆ ಹಾಕಿದ ಪರಿಣಾಮ ಕಾರಿನಲ್ಲಿ ಬಂದ ತಂಡ ಅಲ್ಲಿಂದ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಸಾರ್ವಜನಿಕರು ಸೇರುವಷ್ಟರಲ್ಲಿ, ಅಪರಿಚಿತ ತಂಡದೊಂದಿಗೆ ಬಂದಿದ್ದ ಸ್ಥಳೀಯ ನಿವಾಸಿಯೊಬ್ಬರನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಚಯಸ್ಥ ಸ್ಥಳೀಯ ನಿವಾಸಿಯನ್ನು ವಶಕ್ಕೆ ಪಡೆದು ಅವರನ್ನು ವಿಚಾರಣೆ ಪಡಿಸಿದಾಗ ಕಾರಿನಲ್ಲಿದ್ದ ತಂಡ ಮಂತ್ರವಾದಿಗಳಾಗಿದ್ದರು. ಅವರು ಪವಾಡ ತೋರಿಸುತ್ತಾರೆ ಎಂದು ಹೇಳಿದ್ದ ಕಾರಣ ಅವರನ್ನು ಮನೆಗೆ ಕರೆದು ಕೊಂಡು ಬಂದಿದ್ದೆ. ಆದರೆ ಅವರ ಪರಿಚಯ ಇಲ್ಲ ಎಂದು ತಿಳಿಸಿದ್ದಾರೆಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ಬಿಟ್ಟಿದ್ದಾರೆಂದು ತಿಳಿದು ಬಂದಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.