Home_Page_Advt
Home_Page_Advt
Home_Page_Advt

‘ಪುತ್ತೂರು ಉತ್ಸವ’ಕ್ಕೆ ಭರದ ಸಿದ್ಧತೆ

Puttur_Advt_NewsUnder_1
Puttur_Advt_NewsUnder_1

—————————————————————————————————————

 

 

ನಿಶಾಕಿರಣ್ ಬಾಳೆಪುಣಿ

  • ಮಲೇಶಿಯನ್ ಟ್ವಿನ್ ಟವರ್‌ನ ರಿಪ್ಲಿಕಾ: ಸೆಲ್ಫೀ ಗ್ಯಾಲರಿ ವಿಶೇಷ ಆಕರ್ಷಣೆ

ಳೆದ ವರುಷ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಾಲಯದ ಮುಂಭಾಗದ ಗದ್ದೆಯಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ‘ಪುತ್ತೂರು ಉತ್ಸವ’ ಎಂಬ ಬಹುದೊಡ್ಡ ಮೆಗಾ ಮನರಂಜನಾ ಮೇಳ ಮತ್ತು ವಸ್ತುಪ್ರದರ್ಶನ ನಡೆಸಿ ಜನಾಕರ್ಷಣೆಗೆ ಕಾರಣವಾಗಿದ್ದ `ನ್ಯಾಷನಲ್ ಕನ್ಸ್ಯೂಮರ್ ಫೇರ್’ ಈ ಭಾರಿ ಅದಕ್ಕಿಂತಲೂ ವಿಶಿಷ್ಟ ಹಾಗೂ ವಿಭಿನ್ನ ರೀತಿಯಲ್ಲಿ `ಪುತ್ತೂರು ಉತ್ಸವ’ ನಡೆಸಲು ಸಕಲ ಸಿದ್ದತೆಗಳನ್ನು ನಡೆಸುತ್ತಿದ್ದು, ಈ ವಾರದ ಅಂತ್ಯದಲ್ಲಿ ಉದ್ಘಾಟನೆಗೊಳ್ಳಲಿದೆ.

ನ್ಯಾಷನಲ್ ಕನ್ಸ್ಯೂಮರ್ ಫೇರ್ ೪೦ ವರ್ಷಗಳ ಇತಿಹಾಸ ಹೊಂದಿರುವ ಬೆಂಗಳೂರಿನ ಸಂಸ್ಥೆಯಾಗಿದ್ದು, ಭಾರತದಾದ್ಯಂತ ಸುಮಾರು ೭೦೦ ಕಡೆಗಳಲ್ಲಿ ಮೇಳಗಳನ್ನು ಸಂಘಟಿಸಿದ್ದು, ಇದೀಗ ಎರಡನೇ ಬಾರಿಗೆ ರಾಮ್ ದಾಸ್ ಶೆಟ್ಟಿ ವಿಟ್ಲರವರ ಆಯೋಜನೆಯಲ್ಲಿ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಗದ್ದೆಯಲ್ಲಿ ಈ ಮೆಗಾ ಮೇಳವನ್ನು ಆಯೋಜಿಸಿದೆ. ನಾನಾ ಕಂಪೆನಿಗಳ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಮನರಂಜನಾ ಕ್ರೀಡೆಗಳು ಒಂದೇ ಸೂರಿನಡಿ ಲಭ್ಯವಾಗಲಿದೆ. ವಸ್ತುಗಳ ಗುಣಮಟ್ಟದಲ್ಲಿ ಕಂಪೆನಿ ಮತ್ತು ಗ್ರಾಹಕರು ನೇರಾನೇರ ವ್ಯವಹಾರಕ್ಕೆ ಉತ್ತೇಜನ ನೀಡುವಲ್ಲಿ ಈ ಮೇಳ ಸಹಕಾರಿಯಾಗಲಿದ್ದು, ವಿವಿಧ ಕಂಪೆನಿಗಳು ಈ ಸಂಸ್ಥೆಯೊಡನೆ ಸಹಯೋಗ ಹೊಂದಿದೆ. ಭಾರತದಾದ್ಯಂತ ನಾನಾ ರಾಜ್ಯಗಳಲ್ಲಿ ಸಂಚರಿಸಿ ಸುಮಾರು ೪೫ ದಿನಗಳ ಕಾಲ ಒಂದೇ ಪ್ರದೇಶದಲ್ಲಿ ಮೇಳ ಆಯೋಜಿಸಿ ಆಯಾ ಪ್ರದೇಶಗಳ ಗ್ರಾಹಕರಿಗೆ ವಿವಿಧ ಕಂಪೆನಿಗಳ ವಿವಿಧ ಉತ್ಪನ್ನಗಳನ್ನು ಪರಿಚಯಿಸುವುದೇ ಈ ಸಂಸ್ಥೆಯ ಕಾರ್ಯವೈಖರಿಯಾಗಿದೆ. ರಾಮ್ ದಾಸ್ ಶೆಟ್ಟಿ ವಿಟ್ಲರವರು ಪುತ್ತೂರಿನಲ್ಲಿ ಇಂತಹ ಬಹುದೊಡ್ಡ ಮೇಳವನ್ನು ಕಳೆದ ಬಾರಿ ಪ್ರಥಮವಾಗಿ ಆಯೋಜಿಸಿದ ಸಂದರ್ಭದಲ್ಲಿ ಸಂಸ್ಥೆಗೆ ಭಾರೀ ಜನಬೆಂಬಲ ದೊರೆತಿದ್ದು, ಇದೀಗ ಎರಡನೇ ಬಾರಿಗೆ ಮೆಗಾ ಮೇಳವನ್ನು ಆರಂಭಿಸಲಿದೆ. ಈಗಾಗಲೇ `ಪುತ್ತೂರು ಉತ್ಸವ’ ಭಾರೀ ಪ್ರಚಾರವನ್ನು ಪಡೆದಿದ್ದು, ಈ ವರ್ಷ ಹೊಸದೇನಿರಬಹುದು ಎಂದು ಪ್ರತಿಯೋರ್ವರೂ ಮೇಳದ ಬಗ್ಗೆ ಕುತೂಹಲ ವ್ಯಕ್ತಪಡಿಸಲಾರಂಭಿಸಿದ್ದಾರೆ.

೯೦ ಅಡಿ ಎತ್ತರದ ಮಲೇಷಿಯಾದ ಟ್ವಿನ್ ಟವರ್‌ನ ಮಾದರಿ, ಭಾರೀ ಗಾತ್ರದ ಪ್ರಾಣಿಗಳ ಸ್ತಬ್ಧಚಿತ್ರ, ಸೆಲ್ಫೀ ಗ್ಯಾಲರಿ ಈ ಮೇಳದ ಮತ್ತೊಂದು ವಿಶೇಷವಾಗಿದೆ. ಕಾರುಗಳ ಮಾಹಿತಿ ಹಾಗೂ ಬುಕ್ಕಿಂಗ್ ಮಳಿಗೆ, ಚಿನ್ನಾಭರಣದ ಮಳಿಗೆ, ಗೃಹಬಳಕೆ ಉತ್ಪನ್ನಗಳು, ಪೀಠೋಪಕರಣಗಳು, ಅಡುಗೆ ಮನೆ ಉತ್ಪನ್ನಗಳು, ಕೈಮಗ್ಗದ ಉತ್ಪನ್ನಗಳು, ಕರಕುಶಲ ಉತ್ಪನ್ನಗಳು, ಡ್ರೆಸ್ ಮೆಟೀರಿಯಲ್ಸ್, ಫ್ಯಾಶನ್ ಪಾದರಕ್ಷೆಗಳು, ಆಟಿಕೆಗಳು, ಸ್ಟೇಷನರಿ, ಹ್ಯಾಂಡ್ಲ್ಯೂಮ್, ಫಿಶ್ ಮಸಾಜ್, ನರ್ಸರಿ, ಆಹಾರೋತ್ಪನ್ನಗಳು ಸೇರಿದಂತೆ ಇನ್ನೂ ನೂರಾರು ಉತ್ಪನ್ನಗಳನ್ನು ಕಾಣುವ, ಖರೀದಿಸುವ ವಿಶೇಷ ಅವಕಾಶ ಕಲ್ಪಿಸಲಾಗಿದೆ. ಇನ್ನು ವಿವಿಧ ಬಗೆಯ ತಿಂಡಿ-ತಿನಿಸುಗಳು ದೊರೆಯುವಂತಹ ಫುಡ್ ಕೋರ್ಟ್ ಇಲ್ಲಿದೆ. ಮನೋರಂಜನಾ ಕ್ರೀಡೆಗಳು, ಡ್ಯಾಶಿಂಗ್ ಕಾರು, ಟೊರ-ಟೊರ, ಸ್ಪೈಸ್ ಜೆಟ್, ಕೊಲಂಬಸ್, ಜಾಂಟ್‌ವ್ಹೀಲ್, ಬ್ರೇಕ್ ಡ್ಯಾನ್ಸ್, ಡ್ರ್ಯಾಗನ್ ಟ್ರೈನ್, ಹೋರ್ಸ್ ಎಂ.ಜಿ.ಆರ್, ಜಂಪಿಂಗ್ ಜಾಕ್, ಆರ್ ಶೂಟ್, ಜಂಪಿಂಗ್ ಫ್ರಾಗ್, ೩ಡಿ ಶೋ, ಸ್ಕ್ಯಾರೀ ಹೌಸ್,ಆಕ್ವ ಬರ್ಡ್ ಶೋ ಹಾಗೂ ಮಕ್ಕಳ ಬೋಟಿಂಗ್ ಸಹಿತ ಇನ್ನೂ ಹಲವಾರು ಕ್ರೀಡೆಗಳು ಮನರಂಜಿಸಲಿವೆ. ಪ್ರತಿದಿನ ಸಂಜೆ ೪ರಿಂದ ರಾತ್ರಿ ೯.೦೦ ಗಂಟೆವರೆಗೆ ಈ ಮೇಳ ನಡೆಯಲಿದೆ.

ಎ.ಕೆ. ನಾಯರ್‌ರವರಿಂದ ೧೯೮೪ ರಲ್ಲಿ ಸ್ಥಾಪನೆಯಾದ ಎನ್‌ಸಿಎಫ್ ಕಂಪೆನಿಯಲ್ಲಿ ಗೌತಮ್‌ರವರು ಪ್ರಸ್ತುತ ಆಡಳಿತ ನಿರ್ದೇಶಕರಾಗಿದ್ದಾರೆ. ಸಂಸ್ಥೆಯು ಪ್ರಸ್ತುತ ಎರಡು ಮೇಳಗಳನ್ನು ಹೊಂದಿದ್ದು, ಮಂಗಳೂರಿನಲ್ಲಿ ಸುಮಾರು ಇಪ್ಪತ್ತು ವರ್ಷಗಳಿಂದ `ರಾಷ್ಟ್ರೀಯ ಗ್ರಾಹಕರ ಮೇಳ’ ಎಂಬ ಹೆಸರಿನಲ್ಲಿ ಈ ಸಂಸ್ಥೆ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಅದೇ ರೀತಿ ಉಡುಪಿಯಲ್ಲಿ ಕಳೆದ ಹದಿನಾರು ವರ್ಷಗಳಿಂದ `ಉಡುಪಿ ಉತ್ಸವ’ ಎಂಬ ಹೆಸರಿನಲ್ಲಿ ಸಂಸ್ಥೆ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಇದೀಗ ಕಳೆದ ವರುಷದಿಂದ ಸಂಸ್ಥೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ `ಪುತ್ತೂರು ಉತ್ಸವ’ ಎಂಬ ಹೆಸರಿನಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದೆ.

ಪ್ರಾಣಿಪ್ರಿಯರಿಗಿದೆ ಎನಿಮಲ್ ಕಿಂಗ್ಡಮ್….: ಪ್ರಪಂಚದ ವಿವಿಧ ದೇಶಗಳಲ್ಲಿ ಕಾಣಸಿಗುವ ಪ್ರಾಣಿಗಳನ್ನು ಹೋಲುವ ಯಾಂತ್ರೀಕೃತ ಮೃಗಗಳು ಇಲ್ಲಿದೆ. ಆನೆ, ಜೀಬ್ರಾ, ಪಾಂಡಾ, ಖಡ್ಗಾಮೃಗ, ಹುಲಿ, ನೀರಾನೆ, ಕಿಂಗ್‌ಕಾಂಗ್ ಹೀಗೆ ಹಲವಾರು ಬಗೆಯ ಪ್ರಾಣಿಗಳ ಪ್ರದರ್ಶನ ವಿಶೇಷ ಆಕರ್ಷಣೆಯಾಗಿದೆ. ಇವೆಲ್ಲದರ ಬಗೆಗಿನ ಮಾಹಿತಿಗಳು ಅಲ್ಲಿವೆ ಮಾತ್ರವಲ್ಲದೆ ಅವುಗಳು ಕೂಗುವ ಶಬ್ಧವನ್ನು ನಾವು ಕೇಳಬಹುದಾಗಿದೆ.

90 ಅಡಿ ಎತ್ತರದ ಮಲೇಶಿಯನ್ ಟ್ವಿನ್ ಟವರ್
ಪುತ್ತೂರಿನಲ್ಲಿ ನ್ಯಾಷನಲ್ ಕನ್ಸ್ಯೂಮರ್ ಫೇರ್ ಆಯೋಜಿಸಿರುವ `ಪುತ್ತೂರು ಉತ್ಸವ’ದಲ್ಲಿ ೯೦ ಅಡಿ ಎತ್ತರದ ಮಲೇಶಿಯನ್ ಟ್ವಿನ್ ಟವರ್‌ನ ರಿಪ್ಲಿಕಾ ವಿಶೇಷವಾಗಿದೆ. ರಾತ್ರಿ ವೇಳೆ ವಿದ್ಯುತ್ ದೀಪಾಲಂಕೃತವಾಗಿ ಕಂಗೊಳಿಸುವ ಈ ಟವರ್ ಸುತ್ತ ನಿಂತು ಸೆಲ್ಫೀ, ಫೊಟೋ ತೆಗೆಯಲು ಅವಕಾಶವಿದೆ.

ಸೆಲ್ಪೀ ಪ್ರಿಯರಿಗಿದೆ ಸೆಲ್ಫೀ ಗ್ಯಾಲರಿ

ಇದು ಸೆಲ್ಫಿ ಪ್ರಿಯರಿಗೆ ಸಂತಸದ ವಿಚಾರವಾಗಿದೆ. ವಿವಿಧ ಚಿತ್ರ ಪಟಗಳ ಮುಂಭಾಗದಲ್ಲಿ ನಿಂತು ತಮ್ಮ ಫೊಟೋ ಅಥವಾ ಸೆಲ್ಪಿ ತೆಗೆದುಕೊಳ್ಳ ಬಹುದಾಗಿದೆ. ಇಲ್ಲಿ ತೆಗೆದ ಫೊಟೋಗಳು ನೈಜತೆಯಿಂದ ಕೂಡಿದ ಪೊಟೋದಂತಿರುತ್ತದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.