ಸೆ.29-ಅ.8: ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ನವರಾತ್ರಿ, ಸಾಂಸ್ಕೃತಿಕ ವೈವಿಧ್ಯ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಪುತ್ತೂರು ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಸೆ.೨೯ರಿಂದ ಅ.೮ರ ವರೆಗೆ ನವರಾತ್ರಿ ಉತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಸೆ.೨೯ರಂದು ಸಂಜೆ ೬.೦೦ ಗಂಟೆಗೆ ಕಾರ್ಯಕ್ರಮ ಉದ್ಘಾಟನೆಗೊಳ್ಳಿದೆ. ಬಳಿಕ ಕುಡ್ಗಿ ಶಿವಾನಂದ ಶೆಣೈ ಮತ್ತು ಬಳಗದಿಂದ ಭಕ್ತಿಗೀತೆಗಳು ನಡೆಯಲಿದೆ. ಸೆ.೩೦ರಂದು ಸಂಜೆ ದೀಪ್ತಿ ಪ್ರಭು, ಶಾಂತೇರಿ ಶೆಣೈ, ಭಾವನಾ ಪ್ರಭು, ಲತಾ ಶೆನೈ ರವರಿಂದ ಭಜನಾ ಸಂಧ್ಯಾ, ಅ.೧ರಂದು ಸಂಧ್ಯಾ ಪ್ರಭು ಮತ್ತು ಜಾಗೃತಿ ನಾಯಕ್ ರವರಿಂದ ಭಕ್ತಿಗೀತೆ, ರಜನಿಪ್ರಭು, ನೀತಾ ಶೆಣೈ, ಸುಮನಾ ಪ್ರಭು ರವರಿಂದ ಭಜನಾಮೃತ, ಅ.೨ರಂದು ಸಂಜೆ ಪವಿತ್ರಾ ರೂಪೇಶ್ ರವರಿಂದ ಭಕ್ತಿಗೀತೆ, ಕೀರ್ತಿ ಕುಡ್ವ ರವರಿಂದ ದಾಸಸಂಕೀರ್ತನೆ, ಅ.೩ರಂದು ಸಂಜೆ ರೂಪಶ್ರೀ ನಾಯಕ್ ಮತ್ತು ಸೀಮಾ ಮಣಿಕ್ಕರ ರವರಿಂದ ಭಜನೆ, ಚೈತ್ರಾ ಭಟ್, ಕಾರ್ತಿಕ ಭಟ್, ವೈದೇಹಿ ಭಟ್ ರವರಿಂದ ಅಭಂಗವಾಣಿ, ಅ.೪ರಂದು ಸಂಜೆ ಶ್ರೀಲಕ್ಷ್ಮೀವೆಂಕಟ್ರಮಣ ಮಹಿಳಾ ಭಜನಾ ಮಂಡಳಿ ಯವರಿಂದ ಭಜನೆ, ಅ.೫ರಂದು ಸಂಜೆ ಅಪೇಕ್ಷಾ ಪೈ ಮತ್ತು ತನ್ವಿ ಶೆಣೈರವರರಿಂದ ಭಕ್ತಿಗೀತೆ, ಅ.೬ರಂದು ಗಾನಸಿಂಧೂ ಬಳಗ ಪುತ್ತೂರು ರವರಿಂದ ಭಜನಾಗಂಗಾ, ಅ.೭ರಂದು ನಿರ್ಮಲಪ್ರಭು ಮತ್ತು ರಜನಿ ಭಂಡಾರ್‌ಕಾರ್ ರವರಿಂದ ಭಜನೆ, ಕಿಶನ್ ಪ್ರಭು ರವರಿಂದ ಭಕ್ತಿ ಸಂಧ್ಯಾ, ಅ.೮ರಂದು ಸಂಜೆ ಸಮಾರೋಪ ಸಮಾರಂಭದಲ್ಲಿ ವತ್ಸಲಾ ನಾಯಕ್ ನೇತೃತ್ವದಲ್ಲಿ ಸಾಂಸ್ಕೃತಿಕ ವೈಭವ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.