HomePage_Banner
HomePage_Banner
HomePage_Banner
HomePage_Banner

ಸಾಮಾಜಿಕ ಜಾಲತಾಣದಲ್ಲಿ ಆರೆಸ್ಸೆಸ್, ಬಜರಂಗದಳದ ಅವಹೇಳನ: ದೂರು

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಆರೆಸ್ಸೆಸ್ ಹಾಗೂ ಬಜರಂಗದಳದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಿಂದನಾತ್ಮಕ ಬರಹ ಹಾಕಲಾಗಿದೆ ಎಂದು ಆರೋಪಿಸಿ 34 ನೆಕ್ಕಿಲಾಡಿಯ ಯುವಕನೋರ್ವನ ವಿರುದ್ಧ ವಿಶ್ವಹಿಂದೂ ಪರಿಷತ್, ಬಜರಂಗದಳ ಉಪ್ಪಿನಂಗಡಿ ಘಟಕವು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದೆ.

34 ನೆಕ್ಕಿಲಾಡಿಯ ಶ್ರೀ ರಾಘವೇಂದ್ರ ಮಠದ ಬಳಿ ನಿವಾಸಿ ಮಹೇಶ್ ಪೊದುವಾಳರ ಪುತ್ರ ಅಮರ್‌ಜೀತ್ ಪೊದುವಾಳ (23) ದೂರು ನೀಡಲಾಗಿದ್ದು, ಈತ ಸಾಮಾಜಿಕ ಜಾಲತಾಣವಾದ ತನ್ನ ಇನ್‌ಸ್ಟಗ್ರಮ್ ಸ್ಟೇಟಸ್‌ನಲ್ಲಿ ಆರೆಸ್ಸೆಸ್ ಹಾಗೂ ಬಜರಂಗದಳದ ಕಾರ್ಯಕರ್ತರ ವಿರುದ್ಧ ಅವಹೇಳನವಾಗಿ ಬರೆದಿದ್ದು, ಇದಕ್ಕೆ ರಿಪ್ಲೆ ಕೊಡುವಂತೆ ಸವಾಲು ಕೂಡಾ ಹಾಕಿದ್ದ. ರಾಷ್ಟ್ರವಾದಿ, ಮೌಲ್ಯಧಾರಿತ, ಶಿಸ್ತುಬದ್ಧ ಸಂಘಟನೆಗಳಾಗಿರುವ ಆರೆಸ್ಸೆಸ್ ಹಾಗೂ ಬಜರಂಗದಳಕ್ಕೆ ಮಾಡಿದ ನಿಂದನೆಯಾಗಿದ್ದು, ನಿಷ್ಠಾವಂತ ಕಾರ್ಯಕರ್ತರಿಗೆ ಮಾಡಿದ ಅವಮಾನವಾಗಿದೆ ಎಂದು ವಿಶ್ವಹಿಂದೂ ಪರಿಷತ್, ಬಜರಂಗದಳ ಉಪ್ಪಿನಂಗಡಿ ಘಟಕವು ಆರೋಪಿಸಿದೆಯಲ್ಲದೆ, ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದೆ. ದೂರು ತೆಗೆದುಕೊಂಡಿರುವ ಉಪ್ಪಿನಂಗಡಿ ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.