HomePage_Banner
HomePage_Banner
HomePage_Banner

ವಿದ್ಯಾಭಾರತಿ ಕ್ರೀಡಾಕೂಟ: ವಿವೇಕಾನಂದ ಕ.ಮಾ. ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಶಿವಮೊಗ್ಗದಲ್ಲಿ ನಡೆದ ವಿದ್ಯಾಭಾರತಿ ದಕ್ಷಿಣ ಕ್ಷೇತ್ರೀಯ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಅಥ್ಲೆಟಿಕ್ಸ್‌ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅಮೀರ್ (10ನೇ ತರಗತಿ) : 17ರ ವಯೋಮಾನದ 110ಮಿ ಹರ್ಡಲ್ಸ್ 4*100 ರಿಲೇಯಲ್ಲಿ ಪ್ರಥಮ ಸ್ಥಾನ. ಇವರು ಕಬಕ ಅರೀಫ್ ಹುಸೈನ್‌ರವರ ಪುತ್ರ.

ಷಣ್ಮುಖ (10ನೇ ತರಗತಿ): 17 ರ ವಯೋಮಾನದ ತ್ರಿವಿಧ ಜಿಗಿತ, ಪೋಲ್‌ವಾಲ್ಟ್ ನಲ್ಲಿ ಪ್ರಥಮ. ಇವರು ಪುರುಷರಕಟ್ಟೆ ನಾಗಪ್ಪ ಮತ್ತು ದ್ಯಾಮವ್ವ ದಂಪತಿ ಪುತ್ರ

ಅದಿಲ್ (9ನೇ ತರಗತಿ):14 ರ ವಯೋಮಾನದ ಉದ್ದ ಜಿಗಿತ, ಹರ್ಡಲ್ಸ್, 200 ಮೀ ಪ್ರಥಮ ಸ್ಥಾನ. ಇವರು ಕಬಕ ನಿವಾಸಿ ಅರೀಫ್ ಹುಸೈನ್‌ರವರ ಪುತ್ರ.

ಜಯಶ್ರೀ: 17 ರ ವಯೋಮಾನದ ಬಾಲಕಿಯರ ವಿಭಾಗದ ನಡಿಗೆಯಲ್ಲಿ ಪ್ರಥಮ. ಇವರು ಕುಂತೂರು ನಿವಾಸಿ ಶ್ರೀಧರ್ ಮತ್ತು ಸುಮಲತಾ ದಂಪತಿ ಪುತ್ರಿ.

ಅಂಜಲಿ: 17 ರ ವಯೋಮಾನದ ಬಾಲಕಿಯರ ವಿಭಾಗದ 1500 ಮೀ ಮತ್ತು 3000 ಮೀ ಓಟದಲ್ಲಿ ದ್ವಿತೀಯ ಸ್ಥಾನ. ಇವರು ಅಗಳಿ ವೆಂಕಟೇಶ್ ಮತ್ತು ಪ್ರೇಮಲತಾ ದಂಪತಿ ಪುತ್ರಿ.

ಪೂಜಾಶ್ರೀ: 17 ರ ವಯೋಮಾನದ ಬಾಲಕಿಯರ ವಿಭಾಗದ 1500 ಮೀ, 800 ಮೀ. ಮತ್ತು 3000 ಮೀ. ಓಟದಲ್ಲಿ ಪ್ರಥಮ ಸ್ಥಾನ. ಇವರು ಕೌಡಿಚ್ಚಾರ್ ನಿವಾಸಿ ಕರುಣಾಕರ ಗೌಡ ಮತ್ತು ವಸಂತಿ ದಂಪತಿ ಪುತ್ರಿ.

ಪೂರ್ಣಲಕ್ಷ್ಮಿ: 14 ರ ವಯೋಮಾನದ ಬಾಲಕಿಯರ ವಿಭಾಗದ ಉದ್ದಜಿಗಿತದಲ್ಲಿ ದ್ವಿತೀಯ, 100 ಮೀ. ಓಟದಲ್ಲಿ ದ್ವಿತೀಯ, ಇವರು ಸಂಪ್ಯ ಬೈಲಾಡಿ ರವಿ ಗೌಡ ಮತ್ತು ಶೀಲಾವತಿ ದಂಪತಿ ಪುತ್ರಿ.

ನಿಶಾ: 14 ರ ವಯೋಮಾನದ ಬಾಲಕಿಯರ ವಿಭಾಗದ 600 ಮೀ, ಓಟದಲ್ಲಿ ಪ್ರಥಮ, 400 ಮೀ ಓಟದಲ್ಲಿ ದ್ವಿತೀಯ ಸ್ಥಾನ. ಇವರು ಸಂಪ್ಯ ಬೈಲಾಡಿ ಮಂಜಪ್ಪ ಗೌಡ ಮತ್ತು ರೂಪಾ ದಂಪತಿ ಪುತ್ರಿ.
ಇವರಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ದಾಮೋದರ ಕಜೆ ಮತ್ತು ಹರಿಣಾಕ್ಷಿ ತರಬೇತಿ ನೀಡುತ್ತಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.