Home_Page_Advt
Home_Page_Advt
Home_Page_Advt

ಪೆರಾಬೆ ಗ್ರಾಮದಲ್ಲಿ ಸುಂಟರ ಗಾಳಿಗೆ ಸುಮಾರು 500ರಷ್ಟು ಅಡಿಕೆ, ತೆಂಗು, ಬಾಳೆ ಕೃಷಿ ನಾಶ

Puttur_Advt_NewsUnder_1
Puttur_Advt_NewsUnder_1

ಆಲಂಕಾರು: ಪೆರಾಬೆ ಗ್ರಾಮದ ಪರಾರಿ, ಮನವಳಿಕೆ, ಸುರುಳಿ, ಪೂಂಜ, ಮರುವಂತಿಲ, ಕೆಮ್ಮಿಂಜೆ ಭಾಗಗಳಲ್ಲಿ ಅ.9 ರಂದು ಸಂಜೆ 4 ಗಂಟೆಯ ಹೊತ್ತಿಗೆ ಸುರಿದ ಮಳೆ ಹಾಗೂ ಸುಂಟರ ಗಾಳಿಗೆ ಸಾಧಾರಣ 500ರಷ್ಟು ಫಸಲು ತುಂಬಿದ ಅಡಿಕೆ ಮರ, ತೆಂಗಿನ ಮರ ಹಾಗೂ ಬಾಳೆ ಗಾಳಿಯ ರಭಸಕ್ಕೆ ತುಂಡಾಗಿ ಕೆಲವು ಅಡಿಕೆ ಮರಗಳು ಭಾಗಗಳಾಗಿ, ತೆಂಗಿನ ಮರ ಬುಡದಿಂದ ಮೇಲೆ ತುಂಡಾದ ಘಟನೆ ನಡೆದಿದೆ.

ರಾಧಾ ಕೃಷ್ಣ ರೈ ಪರಾರಿ ಗುತ್ತುರವರು ಗಾಳಿ, ಮಳೆಗೆ ತನ್ನ ತೋಟದಲ್ಲಿ 200ರಷ್ಟು ಫಸಲು ತುಂಬಿದ ಅಡಿಕೆ ಮರ, ತೆಂಗು, ಬಾಳೆ ಗಿಡಗಳು ಬಿದ್ದಿದ್ದು ಗಾಳಿಯ ತೀವ್ರತೆ ಮನೆಯನ್ನೆ ಎಬ್ಬಿಸಿ ಹಾಕುವ ರೀತಿಯಲ್ಲಿ ಗಾಳಿ ಬೀಸಿ ಧಾರಾಕಾರವಾಗಿ ಮಳೆ ಸುರಿಯಲಾರಂಭಿಸ ತೊಡಗಿತು ಎಂದು ತಿಳಿಸಿದ್ದಾರೆ. ಅದರಂತೆಯೇ ಮನವಳಿಕೆ ಗುತ್ತು ಜಯಪ್ರಕಾಶ್ ರೈ ರವರು ತನ್ನ ತೋಟದಲ್ಲಿ 60ಕ್ಕಿಂತಲೂ ಹೆಚ್ಚು ಫಸಲು ಬರುವ ಅಡಿಕೆ ಮರ ಗಾಳಿಯ ರಭಸಕ್ಕೆ ತುಂಡಾಗಿ ಬಿದ್ದಿದೆ ಹಾಗೂ ಕಳೆದ ವರ್ಷ ಕೊಳೆ ರೋಗದಿಂದ ಕಂಗಳಾಗಿದ್ದ ರೈತರಿಗೆ ಈ ವರ್ಷ ಈ ತರದ ಸುಂಟರ ಗಾಳಿಯಿಂದ ಆಘಾತ ತಂದಿದೆ ಎಂದು ತಿಳಿಸಿದ್ದಾರೆ.

 ಸುರುಳಿ, ಪೂಂಜ, ಮರುವಂತಿಲ, ಕೆಮ್ಮಿಂಜೆ ಹಾಗೂ ಇನ್ನಿತರ ಕಡೆಗಳಲ್ಲಿ ಸುಂಟರ ಗಾಳಿ ಹಾಗೂ ಮಳೆಗೆ ಸುಮಾರು 500ರಷ್ಟು ಅಡಿಕೆ, ತೆಂಗು, ಬಾಳೆ ಕೃಷಿ ನಾಶವಾದ ಬಗ್ಗೆ ವರದಿಯಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.