Home_Page_Advt
Home_Page_Advt
Home_Page_Advt

ರೈತರ ಕೈಸೇರದ ಸಾಲಮನ್ನಾ ಹಣ: ಅ.30 ರ ಒಳಗೆ ದ.ಕ., ಉಡುಪಿ ಜಿಲ್ಲೆಯ ಸೊಸೈಟಿ ಎದುರು ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು:ಸರಕಾರದ ಸಾಲಮನ್ನಾ ಹಣ ನಾಲ್ಕು ತಿಂಗಳ ಹಿಂದೆಯೇ ರೈತನ ಖಾತೆಗೆ ಜಮಾ ಮಾಡಲಾಗಿದ್ದರೂ ಆ ಹಣ ಇನ್ನೂ ರೈತನ ಕೈ ಸೇರಿಲ್ಲ. ಈ ನಿಟ್ಟಿನಲ್ಲಿ ಸಂಬಂಧ ಪಟ್ಟ ಅಧಿಕಾರಿಗಳ ಬೇಜವಾಬ್ದಾರಿಯನ್ನು ಖಂಡಿಸಿ ಅ.30 ರ ಒಳಗೆ ಉಡುಪಿ ಹಾಗೂ ದ.ಕ. ಜಿಲ್ಲೆಯ ಪ್ರತಿ ಸೊಸೈಟಿ ಎದುದು ಪ್ರತಿಭಟಿನೆ ನಡೆಸಿ ಮನವಿ ಸಲ್ಲಿಸಲಾಗುವುದು ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಕಿಶೋರ್ ಶಿರಾಡಿ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ.

ಬ್ಯಾಂಕ್ ಅಧಿಕಾರಿಗಳ ಬೇಜವಾಬ್ದಾರಿ, ತಪ್ಪಿನಿಂದಾಗಿ ಸಾಲಮನ್ನಾ ಹಣ ಇನ್ನೂ ರೈತರ ಕೈಸೇರಿಲ್ಲ. ಜಿಲ್ಲೆಯ ಕೆಲವೊಂದು ಸೊಸೈಟಿ ಅಧ್ಯಕ್ಷರುಗಳು, ಅಧಿಕಾರಿಗಳ ಹೇಳಿಕೆ ಪ್ರಕಾರ ಸಹಕಾರಿ ಸಂಘದ ತಪ್ಪು ಮಾಹಿತಿಯಿಂದ ಈ ಸಮಸ್ಯೆ ಆಗಿದೆ ಎಂದು ಸಹಕಾರಿ ಸಂಘದ ಜಿಲ್ಲಾ ಡಿಆರ್ ತಿಳಿಸಿದ್ದರೂ, ಇತ್ತ ಸ್ಥಳೀಯ ಅಧಿಕಾರಿಗಳು ಮತ್ತು ನಿರ್ದೇಶಕರು ವಿಭಿನ್ನ ಹೇಳಿಕೆ ನೀಡಿ ರೈತರ ಖಾತೆಗೆ ಹಣ ಪಾವತಿಸದೇ ವಿಳಂಬ ಧೋರಣೆ ತಳೆದಿರುತ್ತಾರೆ. ಆದ್ದರಿಂದ ರೈತರ ಬಗ್ಗೆ ಕಾಳಜಿ ಇಲ್ಲದ ಅಧಿಕಾರಿಗಳನ್ನು ಜಿಲ್ಲೆಯಿಂದ ಓಡಿಸಿಬೇಕಾಗಿದೆ ಎಂದು ಎಚ್ಚರಿಕೆ ನೀಡಿದರು.

ಈ ಕುರಿತು ಸ್ಪಷ್ಟ ಮಾಹಿತಿ ರೈತರಿಗಿಲ್ಲದಿರುವುದರಿಂದ ಸೊಸೈಟಿ ಗೊಂದಲವನ್ನುಂಟು ಮಾಡುತ್ತಿದೆ. ಈಗಾಗಲೇ ಬಂದಿರುವ ಸಾಲಮನ್ನಾ ಹಣ ನೀಡುವಿಕೆಯಲ್ಲಿ ವಿಳಂಬವಾದ್ದರಿಂದ ವಾಪಾಸ್ಸಾಗುವುದೆಂದರೆ ಅದು ಬೇಜವಾಬ್ದಾರಿಯ ಪರಮಾವಧಿ. ಒಟ್ಟು ವ್ಯವಸ್ಥೆಗೆ ರೈತರ ಬಗ್ಗೆ ಕಾಳಜಿ ಇಲ್ಲ. ಸರಕಾರ ನೀಡಿದ ಹಣವನ್ನು ಸಹಕಾರಿ ಸಂಘಗಳು ನಿರ್ಲಕ್ಷ್ಯ ಮಾಡದೆ ರೈತರಿಗೆ ನೀಡಬೇಕು. ಇಲ್ಲದಿದ್ದಲ್ಲಿ ಮಲೆನಾಡು ಹಿತರಕ್ಷಣಾ ವೇದಿಕೆ ಮತ್ತು ಸಹಕಾರ ಭಾರತಿ ಸಂಸ್ಥೆ ಜಂಟಿಯಾಗಿ ಪ್ರತಿಭಟಿಸಿ ಮನವಿ ಸಲ್ಲಿಸಲಿವೆ ಎಂದು ಎಚ್ಚರಿಕೆ ನೀಡಿದರು. ಎಲ್ಲಾ ರೈತರ ಖಾತೆಗೆ ಹಣ ಪಾವತಿಸುವ ತನಕ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಅವರು ಎಚ್ಚರಿಸಿದರು.ವೇದಿಕೆ ಕಾರ್ಯದರ್ಶಿ ಸುದರ್ಶನ ಪಾತಿಕಲ್ಲು, ಸದಸ್ಯ ಪಾಂಡುರಂಗ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.