Home_Page_Advt
Home_Page_Advt
Home_Page_Advt
Breaking News

ಅ.27: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೀಪಾವಳಿ ಅಮಾವಾಸ್ಯೆಗೆ ವಾರ್ಷಿಕ ಉತ್ಸವ ಆರಂಭ


ಪುತ್ತೂರು: ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವ ಅ. 27ರಂದು ನರಕ ಚತುರ್ದಶಿಯಂದು ಆರಂಭವಾಗಲಿದೆ. ಪತ್ತನಾಜೆಯಂದು ಒಳಗಾದ ಶ್ರೀ ದೇವರ ಉತ್ಸವ ಮೂರ್ತಿ ಅ. 27ರಂದು ಮತ್ತೆ ಉತ್ಸವಗಳಿಗೆ ಚಾಲನೆ ಸಿಗಲಿದೆ.

ಪ್ರತೀವರ್ಷ ದೀಪಾವಳಿ ಅಮಾವಾಸ್ಯೆಯಂದು ಶ್ರೀ ದೇವಾಲಯದಲ್ಲಿ ದೇವರ ವಾರ್ಷಿಕ ಉತ್ಸವ ಆರಂಭವಾಗುತ್ತಿತ್ತು. ಈ ವರ್ಷ ಅ. 28ರಂದು ಬೆಳಗ್ಗೆ ಮಾತ್ರ ಅಮಾವಾಸ್ಯೆ ಇದೆ. ಅ. 27 ನರಕ ಚತುರ್ದಶಿಯಂದು ಸಂಜೆ ಅಮಾವಾಸ್ಯೆಯ ಘಳಿಗೆ ಇರುವುದರಿಂದ ಸಂಜೆಯ ವೇಳೆಗೆ ದೇವರ ಬಲಿ ಹೊರಡುವ ಸಂಪ್ರದಾಯ ಶ್ರೀ ದೇವಾಲಯದಲ್ಲಿ ಇದೆ. ಈ ಬಾರಿ ಅಮಾವಾಸ್ಯೆಯ ದಿನ ಸಂಜೆ ಅಮಾವಾಸ್ಯೆಯ ಘಳಿಗೆ ಇರದ ಕಾರಣ ನರಕ ಚತುರ್ದಶಿಯಂದು ಸಂಜೆ ಶ್ರೀ ದೇವರ ಉತ್ಸವ ಹೊರಡುವುದು ವಿಶೇಷತೆಯಾಗಿದೆ.

ನಡೆ ತೆರೆಯುವುದು
ಪತ್ತನಾಜೆಯಂದು ಹಾಕಲಾಗಿದ್ದ ಶ್ರೀ ದೇವಾಲಯದ ಗೋಪುರದಲ್ಲಿರುವ ಉಳ್ಳಾಲ್ತಿಯ ನಡೆಯ ಬಾಗಿಲನ್ನು ಅ. 27ರಂದು ಸಂಜೆ ಶ್ರೀ ದೇವರು ಬಲಿ ಹೊರಡುವ ಮೊದಲು ತೆರೆದು ಶ್ರೀ ದೇವರ ಉತ್ಸವ ಆರಂಭವಾಗುವ ಕುರಿತು ದೈವಕ್ಕೆ ಬ್ರಹ್ಮವಾಹಕರು ಸೂಚನೆ ನೀಡುತ್ತಾರೆ. ಬಳಿಕ ಶ್ರೀ ದೇವಾಲಯದ ನಂದಿ ಮಂಟಪದ ಮುಂದೆ ಬಲೀಂದ್ರ ಮರ ನೆಟ್ಟು ಬಲೀಂದ್ರಪೂಜೆ ನಡೆಯುತ್ತದೆ. ಬಲೀಂದ್ರ ಪೂಜೆಯ ಬಳಿಕ ಶ್ರೀ ದೇವರ ಉತ್ಸವ ಹೊರಡುತ್ತದೆ.

ಅವಲಕ್ಕಿ ತೆಂಗಿನ ಕಾಯಿ ಪ್ರಸಾದ ವಿತರಣೆ
ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಶ್ರೀ ದೇವರ ಬಲಿ ಹೊರಟ ದಿನ ಉತ್ಸವದಲ್ಲಿ ಪಾಲ್ಗೊಂಡ ಸೀಮೆಯ ಭಕ್ತಾಧಿಗಳಿಗೆ ಅವಲಕ್ಕಿ, ತೆಂಗಿನಕಾಯಿಯ ಪ್ರಸಾದವನ್ನು ವಿತರಿಸಲಾಗುತ್ತದೆ. ಶ್ರೀ ದೇವಾಲಯದಲ್ಲಿ ಸಂಪ್ರದಾಯದಂತೆ ದೀಪಾವಳಿಯ ಅಮಾವಾಸ್ಯೆಯಂದು ಶ್ರೀ ದೇವರ ಬಲಿ ಉತ್ಸವ ಮುಗಿದ ಬಳಿಕ ಪ್ರಸಾದ ವಿತರಣೆಯ ಕಾರ್ಯಕ್ರಮ ವಸಂತ ಮಂಟಪದಲ್ಲಿ ನಡೆಯುತ್ತದೆ. ದೇವಾಲಯದಲ್ಲಿ ನಡೆಯುವ ಪ್ರಥಮ ಉತ್ಸವದ ಪ್ರಸಾದ ಸ್ವೀಕರಿಸಲು ನೂರಾರು ಭಕ್ತರು ಆಗಮಿಸುತ್ತಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.