‘ಸಲಾಲಾ ಮೊಬೈಲ್ಸ್’ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಧಮಾಕಾ ಆಫರ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಮೆಗಾ ಎಕ್ಸ್ ಚೇಂಜ್ ಮತ್ತು ಸಾಲ ಮೇಳ…!
  • ಪ್ರತೀ ಖರೀದಿಗೂ ಖಚಿತ ಉಡುಗೊರೆ…!

ಪುತ್ತೂರು: ಇಲ್ಲಿನ ಏಳ್ಮುಡಿ ಬಳಿ ಕಾರ್ಯಾಚರಿಸುತ್ತಿರುವ ಹೆಸರಾಂತ ಮೊಬೈಲ್ ಫೋನುಗಳ ಮಾರಾಟ ಮತ್ತು ಸೇವಾ ಮಳಿಗೆಯಾದ ‘ಸಲಾಲಾ ಮೊಬೈಲ್ಸ್’ ಈ ಬಾರಿ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದೆ.

ಹೊಸ ಮೊಬೈಲ್ ಖರೀದಿಸುವ ಗ್ರಾಹಕರಿಗೆ ‘ಸ್ಕ್ರ್ಯಾಚ್ ಆಂಡ್ ವಿನ್’ ಆಫರ್, ಕ್ಯಾಶ್ ಬ್ಯಾಕ್ ಆಫರ್, ಗಿಫ್ಟ್ ಹ್ಯಾಂಪರ್ ಮೊದಲಾದ ಹಲವಾರು ಕೊಡುಗೆಗಳನ್ನು ಪರಿಚಯಿಸಲಾಗುತ್ತಿದೆ. ಹಳೆಯ ಮೊಬೈಲ್ ಫೋನುಗಳನ್ನು ಹೊಸ ವಿನ್ಯಾಸದ ಮೊಬೈಲುಗಳಿಗೆ ಬದಲಾಯಿಸಿಕೊಳ್ಳಲು ಬಯಸುವ ಗ್ರಾಹಕರಿಗೆ ‘ಮೆಗಾ ಎಕ್ಸ್ ಚೇಂಜ್ ಮೇಳ’ದ ಮೂಲಕ ಅತ್ಯಧಿಕ ಬೆಲೆಯ ಭರವಸೆಯನ್ನು ನೀಡಲಾಗುತ್ತಿದೆ.

ಎಲ್ಲಾ ಕಂಪೆನಿಗಳ ಮೊಬೈಲ್ ಫೋನುಗಳನ್ನು ಆನ್ಲೈನ್ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಹೊಸ ಮೊಬೈಲ್ ಖರೀದಿಸಿದರೆ ಉಚಿತ ಸ್ಕ್ರೀನ್ ಗಾರ್ಡ್, ಪೌಚ್, ಹೆಡ್ ಫೋನ್ ಮುಂತಾದ ಉಡುಗೊರೆಗಳನ್ನು ನೀಡಲಾಗುತ್ತಿದೆ. ಸುಲಭ ಕಂತುಗಳಲ್ಲಿ ಮೊಬೈಲ್ ಖರೀದಿಸಲು ಬಯಸುವ ಗ್ರಾಹಕರು ಸರಳ ದಾಖಲೆಗಳನ್ನು ಹಾಜರುಪಡಿಸಿದರೆ ಬಜಾಜ್ ಫಿನ್ಸೆರ್ವ್, ಟಿವಿಎಸ್ ಕ್ರೆಡಿಟ್, ಎಚ್ಡಿಬಿಐ ಫೈನಾನ್ಸ್ ಕಂಪೆನಿಗಳ ಮೂಲಕ ತಕ್ಷಣವೇ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಅಷ್ಟೇ ಅಲ್ಲದೆ ಎಲ್ಲಾ ಕಂಪೆನಿಗಳ ಮೊಬೈಲ್ ಫೋನುಗಳನ್ನು ನುರಿತ ತಜ್ಞರಿಂದ ತ್ವರಿತಗತಿಯಲ್ಲಿ ದುರಸ್ತಿ ಮಾಡಿಕೊಡಲಾಗುತ್ತದೆ.ಮೊಬೈಲ್ ಫೋನುಗಳ ಬಿಡಿಭಾಗಗಳು, ಕಸ್ಟಮ್ ಪ್ರಿಂಟೆಡ್ ಬ್ಯಾಕ್ ಕವರ್ ಹಾಗೂ ಎಲ್ಲಾ ಕಂಪೆನಿಗಳ ಸಿಮ್ ಕಾರ್ಡುಗಳು ಸ್ಪರ್ಧಾತ್ಮಕ ಬೆಲೆಯಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.