HomePage_Banner
HomePage_Banner
HomePage_Banner
HomePage_Banner

ಸುಪ್ರಿಂ ಕೋರ್ಟ್‌ನಿಂದ ಅಯೋಧ್ಯೆ ತೀರ್ಪು ಹಿನ್ನೆಲೆ ಸಾಮಾಜಿಕ ತಾಣಗಳ ಮೇಲೆ ಹದ್ದಿಣ ಕಣ್ಣಿಟ್ಟಿರುವ ಪೊಲೀಸರು

Puttur_Advt_NewsUnder_1
Puttur_Advt_NewsUnder_1
  • ಪ್ರಚೋದನಕಾರಿ ಸಂದೇಶಗಳಿಗೆ ಕಡಿವಾಣ ಹಾಕುವ ಉದ್ದೇಶ
    `ಓನ್ಲಿ ಅಡ್ಮಿನ್ಸ್’ ಆಗಿ ಬದಲಾಗಿವೆ ನೂರಾರು ವಾಟ್ಸಾಪ್ ಗ್ರೂಪ್‌ಗಳು…!

@ಯೂಸುಫ್ ರೆಂಜಲಾಡಿ

ಪುತ್ತೂರು: ಅಯೋಧ್ಯೆ ವಿವಾದದ ಕುರಿತು ಐತಿಹಾಸಿಕ ತೀರ್ಪು ಸುಪ್ರೀಂ ಕೋರ್ಟ್ ನೀಡಲಿರುವುದರಿಂದ ದೇಶದೆಲ್ಲೆಡೆ ಹೈ ಅಲರ್ಟ್ ಘೋಷಿಸಲಾಗಿದ್ದು ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆ ಕೂಡಾ ಸಾಕಷ್ಟು ಸಿದ್ದತೆಗಳನ್ನು ಮಾಡಿಕೊಂಡಿದೆ. ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ ಇರಿಸಿದ್ದು ವಾಟ್ಸಾಪ್, ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ ಸೇರಿದಂತೆ ಜಾಲತಾಣಗಳಲ್ಲಿ ಯಾವುದೇ ಸುಳ್ಳು ಸಂದೇಶ, ವದಂತಿಗಳನ್ನು ಹರಡಿದ್ದೇ ಆದಲ್ಲಿ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದು ಹೀಗಾಗಿ ಜಾಲತಾಣಗಳ ಸಂದೇಶಗಳ ಮೇಲೆ ಹದ್ದಿನ ಕಣ್ಣಿರಿಸಿದೆ.
ಅಯೋಧ್ಯೆ ತೀರ್ಪು ಪ್ರಕಟ ವಿಚಾರದಲ್ಲಿ ಸೋಶಿಯಲ್ ಮೀಡಿಯಾಗಳ ಮೇಲೆ ಪೊಲೀಸ್ ಇಲಾಖೆ ನಿಗಾ ಇಟ್ಟಿರುವುದೇ ತಡ ನೂರಾರು ವಾಟ್ಸಾಪ್ ಗ್ರೂಪ್‌ಗಳು ಓನ್ಲಿ ಅಡ್ಮಿನ್ಸ್ ಆಗಿ ಹಠಾತ್ ಆಗಿ ಬದಲಾಗಿದೆ. ಸಾಮಾನ್ಯವಾಗಿ ವಾಟ್ಸಾಪ್ ಗ್ರೂಪಲ್ಲಿ ಎಷ್ಟು ಮಂದಿ ಇರುತ್ತಾರೋ ಅವರೆಲ್ಲರಿಗೂ ಆ ಗ್ರೂಪ್‌ಗಳಿಗೆ ಸಂದೇಶ ಕಳುಹಿಸಲು ಅವಕಾಶ ಇರುತ್ತದೆ. ಆದರೆ ಓನ್ಲಿ ಅಡ್ಮಿನ್ಸ್ ಮಾಡುವುದರಿಂದ ಸಂಬಂಧಪಟ್ಟ ವಾಟ್ಸಾಪ್ ಗ್ರೂಪಲ್ಲಿ ಯಾರು ಎಡ್ಮಿನ್‌ಗಳಾಗಿರುತ್ತಾರೋ ಅಂತವರಿಗೆ ಮಾತ್ರ ಗ್ರೂಪ್‌ಗೆ ಸಂದೇಶ ಕಳುಹಿಸಲು ಅವಕಾಶವಿರುತ್ತದೆ. ಈ ಹಿಂದೆ ಕೆಲವು ಘಟನೆಗಳಿಗೆ ಸಂಬಂಧಪಟ್ಟು ಗ್ರೂಪಿನ ಯಾವುದೋ ಸದಸ್ಯ ಮಾಡಿರುವ ಪ್ರಚೋದನಕಾರಿ ಸಂದೇಶಗಳಿಗೆ ಗ್ರೂಪ್‌ನ ಅಡ್ಮಿನ್ ಬಲಿಪಶುವಾಗಿರುವ ಪ್ರಸಂಗ ನಡೆದಿರುವುದರಿಂದ ಮತ್ತು ಅಯೋಧ್ಯೆ ತೀರ್ಪು ಅತ್ಯಂತ ಸೂಕ್ಮ್ಷ ವಿಚಾರವೂ ಆಗಿರುವುದರಿಂದ ಇತರ ಸದಸ್ಯರು ಪ್ರಚೋದನಕಾರಿ ಸಂದೇಶಗಳನ್ನು ಕಳುಹಿಸಿ ನಾವು ಜೈಲು ಕಂಬಿ ಎಣಿಸುವ ಹಾಗಾಗದಿರಲಿ ಎಂದು ಮುನ್ನಚ್ಚರಿಕೆ ಕ್ರಮವಾಗಿ ನೂರಾರು ವಾಟ್ಸಾಪ್ ಗ್ರೂಪ್‌ಗಳ ಅಡ್ಮಿನ್‌ಗಳು ಗ್ರೂಪ್‌ನಲ್ಲಿ ಮೊದಲಿಗೆ ಸೂಚನೆ ನೀಡಿ ಆ ಬಳಿಕ ಓನ್ಲಿ ಅಡ್ಮಿನ್ಸ್ ಆಗಿ ಗ್ರೂಪನ್ನು ಪರಿವರ್ತಿಸಿಕೊಂಡಿದ್ದಾರೆ. ಅಡ್ಮಿನ್‌ಗಳ ಈ ಕ್ರಮಕ್ಕೆ ಬಹುತೇಕ ನೆಟ್ಟಿಗರು ಬೆಂಬಲ ಸೂಚಿಸಿದ್ದರೆ ಇನ್ನೂ ಕೆಲವರು ಆಕ್ಷೇಪ ಸೂಚಿಸಿ ಗ್ರೂಪ್‌ಗಳಿಂದ ಲೆಫ್ಟ್ ಆಗಿರುವ ಪ್ರಸಂಗವೂ ನಡೆದಿದೆ. ಒಟ್ಟಾರೆಯಾಗಿ ಕೋಮುಪ್ರಚೋದನಕಾರಿ ಸಂದೇಶ ಹರಡುವುದು, ವದಂತಿಗಳನ್ನು ಹಬ್ಬುವುದು, ಗಾಳಿ ಸುದ್ದಿಗಳನ್ನು ವೈಭವೀಕರಣಗೊಂಡು ಅನಾಹುತ ಸಂಭವಿಸದಿರಲಿ ಎಂದು ಮನಗಂಡು ವಾಟ್ಸಾಪ್ ಗ್ರೂಪ್ ಅಡ್ಮಿನ್‌ಗಳು ಕೈಗೊಂಡ ಕ್ರಮ ಸೂಕ್ತವಾಗಿದ್ದು ಇದು ಸುಳ್ಳು ಸಂದೇಶ ರವಾನೆಗೆ ಕಡಿವಾಣ ಹಾಕಲಿದೆ ಎಂಬ ಆಶಾವಾದ ವಾಟ್ಸಾಪ್ ಗ್ರೂಪ್ ಅಡ್ಮಿನ್‌ಗಳದ್ದಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.