Home_Page_Advt
Home_Page_Advt
Home_Page_Advt

ನ.17: ಪಡ್ನೂರು ಶ್ರೀರಾಮ್ ಫ್ರೆಂಡ್ಸ್‌ನಿಂದ 7ನೇ ವರ್ಷದ ಮುಕ್ತ ಕಬಡ್ಡಿ ಪಂದ್ಯಾಟ

  • ತಾಲೂಕು ಕಬಡ್ಡಿ ಅಮೆಚ್ಚೂರ್ ಅಸೋಸಿಯೇಷನ್‌ನ ಸಹಕಾರ
  • ಹಿಂದೂ ಬಾಂಧವರಿಗಾಗಿ ಪುರುಷರ ವಿಭಾಗದ ಪ್ರೋ ಮಾದರಿಯ ಕರುಣೋದಯ ಮ್ಯಾಟ್ ಅಂಕಣ
  • ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೆನಪಿನಲ್ಲಿ ಟ್ರೋಫಿ
  • ರಾತ್ರಿ ಸುಡ್ಡು ಮದ್ದು ಪ್ರದರ್ಶನ
  • ಅಂತಿಮ ಪಂದ್ಯಾಟ ಹೊನಲು ಬೆಳಕಿನಲ್ಲಿ
  • ಆಟಗಾರರಿಗೆ ಆಧಾರ್ ಕಾರ್ಡ್ ಕಡ್ಡಾಯ
  • ಸಮಾರೋಪದ ಬಳಿಕ ತುಳು ಪೌರಾಣಿಕ ನಾಟಕ
  • ಸುದ್ದಿ ಯು ಟ್ಯೂಬ್‌ನಲ್ಲಿ ಲೈವ್

ಪುತ್ತೂರು: ಸಾಮಾಜಿಕ, ಧಾರ್ಮಿಕ, ಕ್ರೀಡಾಚುಟುವಟಿಕೆಯ ಮೂಲಕ ಸಮಾಜವನ್ನು ಸೇರಿಸಿಕೊಂಡು ಹಿಂದೂ ಧರ್ಮದ ಏಳಿಗಾಗಿ ಶ್ರಮಿಸುತ್ತಾ ಬರುತ್ತಿರುವ ಪಡ್ನೂರು ಶ್ರೀರಾಮ್ ಫ್ರೇಂಡ್ಸ್ ವತಿಯಿಂದ ಪಡ್ನೂರಿನ ಮಹಾನ್ ವ್ಯಕ್ತಿಗಳಾಗಿದ್ದ ಕರುಣಾಕರ ಪೆರ್‍ವೋಡಿ ಮತ್ತು ಉದಯ ಕುಮಾರ್ ಪೆರ್‍ವೋಡಿ ಅವರ ಹೆಸರಿನ ಅಂಕಣದೊಂದಿಗೆ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೆನಪಿನಲ್ಲಿ ನ.17ರಂದು ಪಡ್ನೂರು ಶಾಲಾ ವಠಾರದಲ್ಲಿ 7ನೇ ವರ್ಷದ ಪುರುಷರ ವಿಭಾಗದ ಮುಕ್ತ ಕಬಡ್ಡಿ ಪಂದ್ಯಾಟ ಜರುಗಲಿದೆ ಎಂದು ಶ್ರೀರಾಮ್ ಫ್ರೇಂಡ್ಸ್‌ನ ಗೌರವಾಧ್ಯಕ್ಷ ನವೀನ್ ಪಡ್ನೂರು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಪುತ್ತೂರು ತಾಲೂಕು ಕಬಡ್ಡಿ ಅಮೆಚ್ಚೂರ್ ಅಸೋಸಿಯೇಶಷನ್‌ನ ಸಹಕಾರದೊಂದಿಗೆ ಹಿಂದೂ ಬಾಂಧವರಿಗಾಗಿ ನಡೆಯುವ ಈ ಪಂದ್ಯಾಟವು ಪ್ರೋ ಮಾದರಿಯ ಕರುಣೋದಯ ಮ್ಯಾಟ್ ಅಂಕಣದಲ್ಲಿ ಜರುಗಲಿದೆ. ವಿಜೇತರಿಗೆ ನಗದು ಬಹುಮಾನ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಟ್ರೋಪಿ -2019  ನೀಡಲಾಗುವುದು. ಮೊದಲು ನೋಂದಾವಣೆ ಮಾಡಿದ 30 ತಂಡಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ರಾತ್ರಿ ಫೈನಲ್ ಪಂದ್ಯಾಟ ಹೊನಲು ಬೆಳಕಿನಲ್ಲಿ ನಡೆಯಲಿದೆ.

ಬೆಳಿಗ್ಗೆ ಕಬಡ್ಡಿ ಪಂದ್ಯಾಟ ಉದ್ಘಾಟನೆ ಕಾರ್ಯಕ್ರಮ ಜರುಗಲಿದ್ದು ಮದಗ ಶ್ರೀ ಜನಾರ್ದನ ದೇವಸ್ಥಾನದ ವ್ಯವಸ್ಥಪನಾ ಸಮಿತಿ ಮಾಜಿ ಅಧ್ಯಕ್ಷ ವೆಂಕಟ್ರಮಣ ಭಟ್ ಹಾರಕರೆಯವರು ಪಂದ್ಯಾಟವನ್ನು ಉದ್ಘಾಟಿಸಲಿದ್ದಾರೆ. ರೈ ಎಸ್ಟೇಟ್ ಕೋಡಿಂಬಾಡಿಯ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ರೈತ ಮೋರ್ಛಾದ ಪುತ್ತೂರು ಮಂಡಲದ ಅಧ್ಯಕ್ಷ ರಾಜರಾಮ ಶೆಟ್ಟಿ ಕೋಲ್ಪೆ ಅವರು ಕ್ರೀಡಾಂಗಣ ಉದ್ಘಾಟಿಸಲಿದ್ದಾರೆ. ಅನೇಕ ಮಂದಿ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದ ಅವರು ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ವಿ.ಹಿಂ.ಪ ಜಿಲ್ಲಾಧ್ಯಕ್ಷರಾಗಿದ್ದ ಡೀಕಯ್ಯ ಪೆರ್‍ವೋಡಿ ಅವರಿಗೆ ಶ್ರದ್ಧಾಂಜಲಿ ಸಭೆ ನಡೆಯಲಿದೆ.

ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ವೃತ್ತ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಜನಮನ್ನಣೆ ಪಡೆದು ಇದೀಗ ಕಾಪು ಠಾಣೆಯಲ್ಲಿ ವೃತ್ತ ನಿರೀಕ್ಷಕರಾಗಿರುವ ಮಹೇಶ್ ಪ್ರಸಾದ್ ಮತ್ತು ಅನಾಥರಿಗೆ ಆಶ್ರಯದಾತರಾಗಿ ಮುಂಬೈಯಲ್ಲಿ ಗಿರಿಜಾ ವೆಲ್ಫೇರ್ ಅಸೋಸಿಯೇಷನ್ ಸಂಸ್ಥೆಯ ಅಧ್ಯಕ್ಷ ವಸಂತ ಸಪಲ್ಯ ಕುಂಜಾರು ಅವರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರ ಇದರ ಗೌರವಾಧ್ಯಕ್ಷ ಡಾ. ಎಂ.ಕೆ.ಪ್ರಸಾದ್ ವಹಿಸಲಿದ್ದಾರೆ. ಶಾಸಕ ಸಂಜೀವ ಮಠಂದೂರು ಸೇರಿದಂತೆ ಅನೇಕ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ನವೀನ್ ಪಡ್ನೂರು ಹೇಳಿದರು.

ಫೈನಲ್ ಪಂದ್ಯಾಟ ಹೊನಲು ಬೆಳಕಿನಲ್ಲಿ:
ಸಂಜೆ ಅಂತಿಮ ಫೈನಲ್ ಪಂದ್ಯಾಟದ ಮುಂದೆ ಸಭಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಫೈನಲ್ ಪಂದ್ಯಾಟ ಹೊನಲು ಬೆಳಕಿನಲ್ಲಿ ನಡೆಸಲಾಗುವುದು. ಇದರ ಜೊತೆಗೆ ರಾತ್ರಿ ಗಂಟೆ ೮ಕ್ಕೆ ವಿಶೇಷ ಸುಡುಮದ್ದು ಪ್ರದರ್ಶನ ಮತ್ತು ಅನ್ನಸಂತರ್ಪಣೆ ಜರುಗಲಿದ್ದು, ರಾತ್ರಿ ಗಂಟೆ ೯ಕ್ಕೆ ಲಯನ್ ಡಿ ಕಿಶೋರ್ ಶೆಟ್ಟಿ ಸಾರಥ್ಯದ ಶ್ರೀ ಲಲಿತೆ ಕಲಾವಿದರಿಂದ ತುಳು ಪೌರಾಣಿಕ ನಾಟಕ ಕಟೀಲ್ದಪ್ಪೆ ಉಳ್ಳಾಲ್ತಿ ಪ್ರದರ್ಶನಗೊಳ್ಳಲಿದೆ ಎಂದು ನವೀನ್ ಪಡ್ನೂರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮ್ ಫ್ರೇಂಡ್ಸ್‌ನ ಅಧ್ಯಕ್ಷ ಯತೀಶ್ ಪಂಜಿಗುಡ್ಡೆ, ಸಹ ಸಂಚಾಲಕ ಲೋಕೇಶ್ ಕುಂಡಾಜೆ, ಜೊತೆ ಕಾರ್ಯದರ್ಶಿ ಶಿಶಿರ್ ಪೆರ್‍ವೋಡಿ, ಸಂಘಟನಾ ಕಾರ್ಯದರ್ಶಿ ನಾಗರಾಜ್ ಕುಂಜಾರು, ನಿಕಟಪೂರ್ವ ಅಧ್ಯಕ್ಷ ಮೋಹನ್ ದಾಸ್ ರಾಮನಗರ ಉಪಸ್ಥಿತರಿದ್ದರು.

ಪ್ರತಿ ಭಾರಿ ಆಟದಲ್ಲಿ ಪ್ರಾಯೋಜಿತ ತಂಡಗಳು ಭಾಗವಹಿಸುತ್ತಾರೆ. ಪ್ರಾಯೋಜಿತರು ಎಲ್ಲಿಂದಲೋ ಒಬ್ಬ ಇಬ್ಬರು ಉತ್ತಮ ಆಟಗಾರರನ್ನು ತರಿಸಿ ಪಂದ್ಯಾಟವನ್ನು ಗೆಲ್ಲಿಸುವುದು ಸಹಜವಾಗಿ ಕಾಣುತ್ತಿದ್ದು, ಗ್ರಾಮ ಹೆಸರಿನಲ್ಲಿ ಹೊರಗಿನ ತಂಡ ಗೆಲುವು ಸಾಧಿಸುತ್ತಿದೆ. ಈ ರೀತಿ ಆಗಬಾರದು ಎಂಬ ನಿಟ್ಟಿನಲ್ಲಿ ಪಂದ್ಯಾಟಕ್ಕೆ ಕೆಲವೊಂದು ಚೌಕಟ್ಟು ನೀಡಲಾಗಿದೆ. ಆಟಗಾರರು ಒಂದೇ ಗ್ರಾಮದವರಾಗಿರಬೇಕು, ಆಟಗಾರರಿಗೆ ಆಧಾರ್ ಕಾರ್ಡ್ ಕಡ್ಡಾಯ, ಶೂ ಕಡ್ಡಾಯ, ಪ್ರಾಯೋಜಿತ ತಂಡಗಳಿಗೆ ಅವಕಾಶವಿಲ್ಲ ಮತ್ತು ಮೊದಲು ಬಂದ ೩೦ ತಂಡಗಳಿಗೆ ಮಾತ್ರ ಪಂದ್ಯಾಟದಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ – ನವೀನ್ ಪಡ್ನೂರು ಗೌರವಾಧ್ಯಕ್ಷರು ಶ್ರೀರಾಮ್ ಫ್ರೆಂಡ್ಸ್ ಪಡ್ನೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.