ಪುತ್ತೂರು: ಕಳೆದ ಒಂದು ವರ್ಷದ ಅವಧಿಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಅಭಿವೃದ್ಧಿ ಕಾಮಗಾರಿಗಳಿಗೆ ರೂ. 100ಕೋಟಿಗೂ ಮಿಕ್ಕಿ ಅನುದಾನ ಮಂಜೂರಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
2018-19ನೇ ಮತ್ತು2019-20ನೇ ಸಾಲಿನಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ತಲಾ ರೂ. ೨ ಕೋಟಿ, ೨೦೧೮-೧೯ನೇ ಸಾಲಿನ ಲೋಕೋಪಯೋಗಿ ಇಲಾಖೆಯ ಅನುಸೂಚಿತ ಜಾತಿ / ಗಿರಿಜನ ಉಪಯೋಜನೆಯಲ್ಲಿ ರೂ ೨.೨೧ ಕೋಟಿ, ೨೦೧೯-೨೦ನೇ ಯೋಜನೆಯಲ್ಲಿ ೬.೨೧ ಕೋಟಿ, ಪುತ್ತೂರು ಉಪ್ಪಿನಂಗಡಿ ಚತುಷ್ಪಥ ರಸ್ತೆಗೆ ರೂ. ೧೨ ಕೋಟಿ, ಜಿಲ್ಲಾ ಮುಖ್ಯ ರಸ್ತೆ ಸೇತುವೆ ಸುಧಾರಣೆ ಯೋಜನೆಯಡಿ ಕುಕ್ಕುಪುಣಿ ಸೇತುವೆಗೆ ರೂ. ೨.೫೦ ಕೋಟಿ, ಮುಡುಪಿನಡ್ಕ ರಸ್ತೆ ಅಭಿವೃದ್ಧಿಗೆ ರೂ. ೮೦ಲಕ್ಷ, ಅಮ್ಚಿನಡ್ಕ ಸೆಂಟ್ಯಾರ್ ಬೆಟ್ಟಂಪಾಡಿ ರಸ್ತೆ ಅಭಿವೃದ್ಧಿಗೆ ರೂ. ೧.೨೦ ಕೋಟಿ, ಕಾಲೇಜು ತರಗತಿ ಕೊಠಡಿ ನಿರ್ಮಾಣಕ್ಕೆ ಎಊ. ೨.೪೭ ಕೋಟಿ, ದೇವಸ್ಯ ಸೇತುವೆಗೆ ರೂ. ೧ ಕೋಟಿ, ಚೆಲ್ಯಡ್ಕ ಸೇತುವೆಗೆ ರೂ. ೧.೪೦ಕೋಟಿ, ಶಾಲಾ ಸಂಪರ್ಕ ಸೇತು ಯೋಜನೆಯಡಿ ಕಾಲು ಸಂಕಕ್ಕೆ ರೂ. ೫೩ಲಕ್ಷ, ಜಿಲ್ಲಾ ಮತ್ತು ಇತರ ರಸ್ತೆ ಸುಧಾರಣೆಗೆ ರೂ. ೨.೨೫ ಕೋಟಿ, ಮಳೆಹಾನಿ ಕಾಮಗಾರಿಗೆ ರೂ. ೧.೧೩ ಕೋಟಿ, ರಾಜ್ಯ ಮತ್ತು ಜಿಲ್ಲಾ ಮುಖ್ಯರಸ್ತೆಗಳ ಇರ್ವಹಣೆ ಅನುದಾನದಡಿ ಮಳೆಹಾನಿ ಕಾಮಗಾರಿಗೆ ರೂ. ೪.೧೫ ಕೋಟಿ, ರಸ್ತೆ ಮತ್ತು ಸೇತುವೆ ಅಭಿವೃದ್ಧಿಗೆ ರೂ. ೧೭ ಕೋಟಿ, ಶಾಲಾ ಕಟ್ಟಡ ದುರಸ್ಥಿಗೆ ರೂ. ೨೧ ಲಕ್ಷ, ಟಾಸ್ಕ್ಪೋರ್ಸ್ ಯೋಜನೆಯಲ್ಲಿ ರೂ. ೭೪ಲಕ್ಷ, ಮಳೆಹಾನಿ ಯೋಜನೆಯಡಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ರೂ. ೭.೭೭ ಕೋಟಿ, ೨೦೧೯-೨೦ನೇ ಸಾಲಿನ ಯೋಜನೆಯಲ್ಲಿ ೧೦ ಕೋಟಿ, ಗ್ರಾಮೀಣ ರಸ್ತೆಗೆ ವಿಶೇಷ ಅನುದಾನ ರೂ. ೩ಕೋಟಿ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಲ್ಲಿ ರೂ. ೧ ಕೋಟಿ, ಸಣ್ಣ ನೀರಾವರಿ ಇಲಾಖೆಯ ಅನುದಾನಡಿ ೫ ಸ್ಥಳಗಳ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ರೂ. ೨.೯೦ ಕೋಟಿ, ಕೃಷಿ ಭೂಮಿ ಸಂರಕ್ಷಣಾ ಕಾಮಗಾರಿಗೆ ರೂ. ೬.೬೫ ಕೋಟಿ, ನಗರಸಭೆ ಎಸ್ಎಫ್ಸಿ ವಿಶೇಷ ಅನುದಾನದಲ್ಲಿ ರೂ. ೫ ಕೋಟಿ, ೨೦೧೮-೧೯ನೇ ಸಾಲಿನ ಧಾರ್ಮಿಕ ದತ್ತಿ ಇಲಾಖೆಯ ಸಾಮಾನ್ಯ ಆರಾಧನಾ, ರುದ್ರಭೂಮಿ, ಪ.ಜಾತಿ, ಗಿರಿಜನ ಉಪಯೋಜನೆಯಲ್ಲಿ ೧೧ಲಕ್ಷ ಮತ್ತು ೨೦೧೯-೨೦ನೇ ಸಾಲಿನ ಯೋಜನೆಯಲ್ಲಿ ೩.೭೨ ಲಕ್ಷ , ಮಹಿಳಾ ಕಾಲೇಜಿಗೆ ರೂ. ೪.೫ ಕೋಟಿ, ಆನೆಮಜಲಿನಲ್ಲಿ ನಡೆಯುವ ನ್ಯಾಯಾಲಯ ಸಮುಚ್ಚಾಯಕ್ಕೆ ರೂ. ೨೫ ಕೋಟಿ ಸೇರಿದಂತೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ರೂ. ೨೫ ಕೋಟಿ ಅನುದಾನಗಳು ಸೇರಿ ಸುಮಾರು ನೂರಕ್ಕೂ ಅಧಿಕ ಅನುದಾನ ಒಂದು ವರ್ಷದ ಅವಧಿಯಲ್ಲಿ ಮಂಜೂರುಗೊಂಡಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಿಜೆಪಿ ಮಂಡಲದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲದ ಅಧ್ಯಕ್ಷ ಜೀವಂಧರ್ ಜೈನ್, ಜಿಲ್ಲಾ ವಕ್ತಾರ ಆರ್.ಸಿ.ನಾರಾಯಣ್, ಪ್ರಧಾನ ಕಾರ್ಯದರ್ಶಿ ರಾಮ್ದಾಸ್ ಹಾರಾಡಿ ಉಪಸ್ಥಿತರಿದ್ದರು.
ಅನುದಾನ ಬರುತ್ತದೆ, ಆದರೆ ರಸ್ತೆಗಳ ಅಭಿವೃದ್ಧಿ ಆಗುವ ಲಕ್ಷಣ ಕಾಣಿಸುತ್ತಾ ಇಲ್ಲ