Home_Page_Advt
Home_Page_Advt
Home_Page_Advt
Breaking News

ಕಡಬ: ಅಪಾಯಕಾರಿಯಾಗಿ ಚಲಿಸಿದ ದನ ಸಾಗಾಟದ ಪಿಕಪ್! ಅದೃಷ್ಟವಶಾತ್ ಪಾರಾದ ಪಾದಚಾರಿಗಳು

 

ಕಡಬ: ದನ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವೊಂದು ಕೋಡಿಂಬಾಳದಿಂದ ಕಡಬದವರೆಗೆ ಅತೀ ವೇಗದಲ್ಲಿ ಅಪಾಯಕಾರಿಯಾಗಿ ಚಲಿಸಿದ್ದು ಈ ಸಂದರ್ಭದಲ್ಲಿ  ಪಾದಚಾರಿಗಳು ಕೆಲವೇ ಅಂತರದಲ್ಲಿ ಅಪಾಯದಿಂದ ಪಾರಾದ ಘಟನೆ ನ.19ರ ಬೆಳಿಗ್ಗೆ ನಡೆದಿದೆ. ಅದೃಷ್ಟವಶಾತ್ ರಸ್ತೆಯಲ್ಲಿ ಕಡಿಮೆ ಜನಸಂಖ್ಯೆ ಇದ್ದುದರಿಂದ ಸಂಭಾವ್ಯ ಅಪಾಯಗಳು ತಪ್ಪಿದೆ.

ಘಟನೆಯ ವಿವರ:
ನೆಲ್ಯಾಡಿ, ಇಚ್ಲಂಪಾಡಿ ಭಾಗದಿಂದ ಪಿಕಪ್ ವಾಹನದಲ್ಲಿ (ಕೆ.ಎ.21.ಎ.3694) ದನಗಳನ್ನು ಮುಳ್ಳೇರಿಯಕ್ಕೆ ಸಾಗಿಸಲಾಗುತಿತ್ತು. ಈ ವಾಹನದಲ್ಲಿ ಅಕ್ರಮ ದನ ಸಾಗಾಟ ಮಾಡಲಾಗುತ್ತಿದೆ ಎಂಬ ಗುಮಾನಿಯಲ್ಲಿ ಬೆಳ್ಳಾರೆ ಠಾಣಾ ವ್ಯಾಪ್ತಿಯ ನಿಂತಿಕಲ್ ಭಾಗದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ತಡೆದಿದ್ದು, ತಕ್ಷಣ ಪಿಕಪ್ ಚಾಲಕ ತನ್ನ ಪಿಕಪ್‌ನ್ನು ಕಡಬ ಕಡೆಗೆ ತಿರುಗಿಸಿ ಕಡಬ ಠಾಣೆಗೆ ಆಗಮಿಸಿದರು. ಈ ವೇಳೆ ಪ್ರಕರಣ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ನಡೆದುದರಿಂದ ಜಾನುವಾರು ಸಮೇತ ಪಿಕಪ್‌ನ್ನು ಬೆಳ್ಳಾರೆ  ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಅತೀ ವೇಗ ಅಪಾಯಕಾರಿ ಚಾಲನೆ- ಅದೃಷ್ಟವಶಾತ್ ಪಾರಾದ ಪಾದಚಾರಿ 
ನಿಂತಿಕಲ್ ಭಾಗದಿಂದ ದನ ಸಾಗಾಟದ ಪಿಕಪ್ ಹಿಂದಿರುಗಿ ಬರುವಾಗ ಅತೀ ವೇಗದಿಂದ ಬಂದಿದ್ದು ಕೋಡಿಂಬಾಳದಿಂದ ಕಡಬಕ್ಕೆ ಬರುವಾಗ ಅತೀ ವೇಗ ಹಾಗೂ ಅಪಾಯಕಾರಿ ರೀತಿಯಲ್ಲಿ ಚಲಿಸಿದೆ ಎಂದು ಹಲವಾರು ಸಾರ್ವಜನಿಕರು ದೂರಿಕೊಂಡಿದ್ದಾರೆ. ಕೆಲವು ಅಟೋ ರಿಕ್ಷಾ, ಬೈಕ್ ಸವಾರರು ಕೂಡ ನಾವು ಅದೃಷ್ಟವಶಾತ್ ಪಾರಾದೆವು ಎಂದು ಹೇಳಿಕೊಂಡಿದ್ದಾರೆ.

ಅಕ್ರಮ ದನ ಸಾಗಾಟದ ಗುಮಾನಿ, ಸೂಕ್ತ ಕ್ರಮ ಕೈಗೊಳ್ಳಿ-ವಿ.ಹಿಂ.ಪ ಆಗ್ರಹ
ಈ ಬಗ್ಗೆ ವಿ.ಹಿಂ.ಪ. ಕಡಬ ಪ್ರಖಂಡದ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ ಪ್ರತಿಕ್ರಿಯೆ ನೀಡಿ, ಕೆ.ಎ.21.ಎ.3694 ವಾಹನದಲ್ಲಿ ವಾರದಲ್ಲಿ ಮೂರು ನಾಲ್ಕು ಬಾರಿ ಬೆಳಿಗ್ಗಿನ ಜಾವ ದನವನ್ನು ಸಾಗಾಟ ಮಾಡಲಾಗುತ್ತಿದೆ. ಈ ಬಗ್ಗೆ ಕಡಬ ಪೊಲೀಸರಿಗೆ ಮಾಹಿತಿ ಈ ಹಿಂದೆಯೇ ನೀಡಿದ್ದೇವೆ. ಇಂದು ಬೆಳಿಗ್ಗೆ ದನ ಸಾಗಾಟ ಮಾಡಲಾಗಿದೆ, ಮೇಲ್ನೋಟಕ್ಕೆ ಇವರು ದಾಖಲೆಗಳನ್ನು ಸಿದ್ದಪಡಿಸಿಕೊಂಡಿದ್ದರೂ ಇವರು ಸಾಗಾಟ ಮಾಡುತ್ತಿರುವುದು ಕೇರಳದ ಅಕ್ರಮ ಕಸಾಯಿಖಾನೆಗಳಿಗೆ ಇಂತಹ ಸಾಗಾಟ ನಿರಂತರವಾಗಿ ನಡೆಯುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಇವರ ಬಗ್ಗೆ ತನಿಖೆ ನಡೆಸಬೇಕು. ಗೋಹತ್ಯೆ ನಿಷೇಧ ಕಾನೂನು ಶೀಘ್ರ ಬರದಿದ್ದರೆ ಕೋಮು ಸಾಮರಸ್ಯಕ್ಕೆ ದಕ್ಕೆ ಬರಬಹುದು ಎಂದು ರಾಧಾಕೃಷ್ಣ ಕೋಲ್ಪೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.