Home_Page_Advt
Home_Page_Advt
Home_Page_Advt

ಅಪಾಯ ಆಹ್ವಾನಿಸುತ್ತಿದೆ ಕಾಪೆಜಾಲಿನ ರಸ್ತೆ ಸನಿಹದ ತೋಡು..!ನಾಲ್ಕು ಗ್ರಾಮದ ಸಂಪರ್ಕ ಬರೆಪ್ಪಾಡಿ -ನಾಣಿಲ-ಕಾಣಿಯೂರು ರಸ್ತೆ

Puttur_Advt_NewsUnder_1
Puttur_Advt_NewsUnder_1

@ಸುಧಾಕರ ಆಚಾರ್ಯ ಕಾಣಿಯೂರು

ಕಾಣಿಯೂರು: ಕಡಬ ತಾಲೂಕಿನ ನಾಲ್ಕು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಬರೆಪ್ಪಾಡಿ – ನಾಣಿಲ – ಕಾಣಿಯೂರು ರಸ್ತೆಯ ಕಾಪೆಜಾಲಿನ ತಿರುವು ರಸ್ತೆ ಸನಿಹದಲ್ಲೇ ದೊಡ್ಡ ತೋಡು ಹರಿಯುತ್ತಿದ್ದು ಅಪಾಯ ಅಹ್ವಾನಿಸುವಂತಿದೆ.

ಮಾಣಿ-ಮೈಸೂರು ಹೆದ್ದಾರಿಯ ಮಡ್ಯಂಗಳ ಎಂಬಲ್ಲಿ ರಸ್ತೆ ಬದಿಯ ಕೆರೆಗೆ ಕಾರೊಂದು ಬಿದ್ದು ನಾಲ್ವರು ಬಲಿಯಾದ ಘಟನೆ ನೆನೆಪಿಸಿಕೊಳ್ಳುವ ಇಲ್ಲಿನ ಮಂದಿ ಇದೀಗ ಅಪಾಯಕಾರಿ ಸ್ಥಳದಲ್ಲಿದ ಬಗ್ಗೆ ಭೀತಿಗೊಂಡಿದ್ದಾರೆ.

ಲೋಕಪಯೋಗಿ ಇಲಾಖಾ  ಬರೆಪ್ಪಾಡಿ -ನಾಣಿಲ -ಕಾಣಿಯೂರು ಸುಮಾರು 9.5 ಕಿಮೀ ನಷ್ಟು ಉದ್ದದ ರಸ್ತೆಯ ಬರೆಪ್ಪಾಡಿಯಿಂದ ಮುಂದುವರಿದಾಗ ಕಾಪೆಜಾಲಿನ ತಿರುವು ಜಾಗದ ಇಳಿಜಾರು ಭಾಗದಲ್ಲೆ ಈ ಅಪಾಯಕಾರಿ ಸ್ಥಳವಿದೆ. ಇಲ್ಲಿ ಹರಿಯುವ ತೋಡಿಗೂ ರಸ್ತೆಯ ಅಂತರ ಬಹಳಷ್ಟು ಕಡಿಮೆಯಿದೆ. ಅಗಲವಾದ ತೋಡಿನಲ್ಲಿ ಮಳೆಗಾಲದಲ್ಲಿ ನೀರಿನ ಅರಿವು ಹೆಚ್ಚಾಗುತ್ತದೆ. ಮಳೆಗಾಲದಲ್ಲಿ ಹಲವು ಭಾರಿ ಈ ತೋಡಿನ ನೀರು ರಸ್ತೆಗೆ ಬಂದು ಸಂಚಾರ ಬಂದ್ ಘಟನೆಯೂ ನಡೆಯುತ್ತದೆ. ವರ್ಷಂಪ್ರತಿ ತೋಡಿನ ಧರೆಕುಸಿಯುತ್ತ ಬರುತ್ತಿದ್ದು ರಸ್ತೆಯ ಸನಿಹಕ್ಕೆ ಬರುವ ಮುನ್ನ ಸಂಬಂದಪಟ್ಟವರು ಎಚ್ಚೆತ್ತೆಕೊಳ್ಳಬೇಕು ಎನ್ನುವುದು ಸ್ಥಳಿಯರ ಆಗ್ರಹವಾಗಿದೆ.

ಈ ರಸ್ತೆಯು ಕುದ್ಮಾರು , ಚಾರ್ವಾಕ, ಕಾಮಣ, ಕಾಣಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾದು ಹೋಗಿದೆ. ಬರೆಪ್ಪಾಡಿ ಸಮೀಪದ ನೂಜಲತ್ತಡ್ಕ ಎಂಬಲ್ಲಿಂದ ಕಾಣಿಯೂರು ಪೇಟೆ ಸಮೀಪದ ಕೂಡು ರಸ್ತೆ ತನಕ ಸಂರ್ಪದಲ್ಲಿರುವ ಈ ರಸ್ತೆಯಲ್ಲಿ ದಿನ ನಿತ್ಯ ಶಾಲಾ ವಿದ್ಯಾರ್ಥಿಗಳನ್ನು ಹೊತ್ತ ವಾಹನಗಳು ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತವೆ. ಕಾರಣಿಕ ದೈವಸ್ಥಾನ ದೈಪಿಲ ಕ್ಷೇತ್ರ ಸೇರಿದಂತೆ ಹಲವು ಪೂಜಾ ಮಂದಿರಗಳು, ಮಸೀದಿಗಳು, ಅಂಗನವಾಡಿ, ಶಾಲಾ ಸಂಪರ್ಕಕಕ್ಕೆ ಈ ರಸ್ತೆ ಅಗತ್ಯವಾಗಿದೆ. ಸಾವಿರಾರು ಮಂದಿ ಪ್ರಯಾಣಿಸುವ ಈ ರಸ್ತೆಯ ಅಪಾಯಕಾರಿ ಸ್ಥಳದಲ್ಲಿ ಸವಾರರು ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟಬುತ್ತಿ. ಸದ್ಯ ಈ ಅಪಾಯಕಾರಿ ಸ್ಥಳದಲ್ಲಿ ಯಾವುದೆ ಮುನ್ಸೂಚನೆ ಇಲ್ಲದಿರುವುದು ಸಾರ್ವಜನಿಕರ ತೀವ್ರ ಅಸಮಾದಾನಕ್ಕೂ ಕಾರಣವಾಗಿದೆ. ಇಲ್ಲಿ ತಿರುವನ್ನು ತೆರವುಗೊಳಿಸಿ ನೇರ ರಸ್ತೆ ಮಾಡಬೇಕು ಅಲ್ಲದೆ ರಸ್ತೆಯನ್ನು ಎತ್ತರಿಸಿಕರಿಸಬೇಕು ಆಗಾದಾಗ ಮಾತ್ರ ಸಮಸ್ಯೆ ಪರಿಹಾರವಾದಿತು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಅಪಾಯ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಿ
ಮಾಣಿ-ಮೈಸೂರು ಹೆದ್ದಾರಿಯ ಪುತ್ತೂರು ಸಮೀಪದ ಮಡ್ಯಂಗಳದಲ್ಲಿ ರಸ್ತೆ ಬದಿಯ ಅಪಾಯಕಾರಿ ಕೆರೆಯನ್ನು ಮುಚ್ಚಿಸುವಂತೆ ಹಲವಾರು ಬಾರಿ ಸಂಬಂದಪಟ್ಟವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ, ಮಾಧ್ಯಮಗಳು ವರದಿ ಮಾಡಿ ಎಚ್ಚರಿಸುವ ಪ್ರಯತ್ನ ನಡೆದಿತ್ತು. ಆದರೂ ಸೂಕ್ತ ಕ್ರಮಕೈಗೊಳ್ಳದ ಪರಿಣಾಮ ನಾಲ್ಕು ಜೀವ ಬಲಿಯಾಯಿತು ಬಳಿಕ ಎಚ್ಚೆತ್ತುಕೊಂಡ ಇಲಾಖೆ ಕ್ರಮಕೈಗೊಂಡಿತ್ತಾದರೂ ಇದಕ್ಕೆ ಸಾರ್ವಜನಿಕವಾಗಿ ಟೀಕೆಗಳು ವ್ಯಕ್ತವಾಗಿತ್ತು. ಅಪಾಯ ಸಂಭವಿಸುವ ಮುನ್ನ ಎಚ್ಚೆತ್ತುಕೊಂಡರೆ ಮಾತ್ರ ಸಂಭವಿಸುವ ದುರಂತ ತಪ್ಪಿಸಬಹುದು ತಕ್ಷಣ ಕ್ರಮಕೈಗೊಳ್ಳಿ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

ರಸ್ತೆ ಬದಿಯಲ್ಲಿನ ಕೆರೆ, ತೋಡು ಮುಂತಾದ ನೀರಿನ ಮೂಲಗಳಿಂದ ಹಲವಾರು ದುರ್ಘಟನೆಗಳು ನಡೆಯುತ್ತಿದೆ. ಎಡಮಂಗಲದಿಂದ ಆರಂಭಗೊಂಡು ಕೊಪ್ಪ ಸಮೀಪದ ತೀರ್ಥಕೇರಿ ಎಂಬಲ್ಲಿ ಕುಮಾರಧಾರ ನದಿಯನ್ನು ಸಂಪರ್ಕಿಸುವ ತೋಡು ಕಾಪೆಜಾಲು ಎಂಬಲ್ಲಿ ರಸ್ತೆ ಬದಿಯಲ್ಲಿ ಹರಿಯುತ್ತದೆ. ಈ ಬೃಹದಾಕಾರಾದ ತೋಡಿರುವ ಜಾಗವನ್ನು ಅಪಾಯಕಾರಿ ಸ್ಥಳವೆಂದು ಗುರುತಿಸಿ ಸಂಬಂದಪಟ್ಟವರು ಕ್ರಮಕೈಗೊಳ್ಳಬೇಕು ಮೋಹನಚಂದ್ರ ಖಂಡಿಗ, ಸ್ಥಳೀಯರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.