Home_Page_Advt
Home_Page_Advt
Home_Page_Advt

ಕುರಿಯ ಜೋಡಿ ಕೊಲೆ ಪ್ರಕರಣದ ಸಮಗ್ರ ತನಿಖೆ: ಎಸ್ಪಿ

ಪುತ್ತೂರು:ಕುರಿಯದಲ್ಲಿ ನಡೆದಿರುವ ಜೋಡಿ ಕೊಲೆ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದು ಹೇಳಿರುವ ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಂ.ಲಕ್ಷ್ಮೀಪ್ರಸಾದ್ ಅವರು, ಪ್ರಕರಣದ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಕೇಳಲಾಗುವುದು ಎಂದು ಹೇಳಿದ್ದಾರೆ.

ಮಂಗಳೂರಿನಲ್ಲಿ ‘ಸುದ್ದಿ’ಯೊಂದಿಗೆ ಮಾತನಾಡಿದ ಎಸ್ಪಿಯವರು, ಆರೋಪಿಯ ಕೈಗೆ ಗಾಯಗಳಾಗಿರುವುದರಿಂದ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.ಪ್ರಕರಣದ ಕುರಿತು ಆತನನ್ನು ಇನ್ನಷ್ಟು ತನಿಖೆಗೊಳಪಡಿಸುವ ಅಗತ್ಯವಿರುವುದರಿಂದ ಪೊಲೀಸ್ ಕಸ್ಟಡಿಗೆ ಕೇಳಲಾಗುವುದು ಎಂದು ಹೇಳಿದ್ದಾರೆ.

ಬೀಟ್ ಪೊಲೀಸ್ ಮಾಹಿತಿ ನೀಡಿದ್ದರು: ಘಟನೆ ಬೆಳಕಿಗೆ ಬಂದ ಬಳಿಕ ನಾನಾ ಆಯಾಮಗಳಲ್ಲಿ ನಾವು ತನಿಖೆ ಆರಂಭಿಸಿದ್ದೆವು.ಈ ಸಂದರ್ಭ, ಕರೀಂ ಎಂಬಾತ ಅಲ್ಲಿ ತಿರುಗಾಡುತ್ತಿದ್ದುದು, ಆತನ ಕೈಗೂ ಗಾಯವಾಗಿದ್ದು ತನಗೆ ಐವರ ತಂಡ ಹಲ್ಲೆ ನಡೆಸಿದೆ ಎಂದು ಹೇಳಿಕೊಂಡಿದ್ದರೂ ಪೊಲೀಸ್ ದೂರು ನೀಡದೇ ಇರುವ ಕುರಿತು ಅಲ್ಲಿನ ಜನ ಮಾತನಾಡಿಕೊಂಡಿದ್ದ ಕುರಿತು ನಮ್ಮ ಬೀಟ್ ಪೊಲೀಸ್ ಓರ್ವರು ಮಾಹಿತಿ ನೀಡಿದ್ದರು.ಈ ಮಾಹಿತಿಯಾಧಾರದಲ್ಲಿ ನಾವು ತನಿಖೆ ಮುಂದುವರಿಸಿ ಪ್ರಕರಣ ಭೇದಿಸಿರುವುದಾಗಿ ಅವರು ತಿಳಿಸಿದರು.

ಹಣಕ್ಕಾಗಿಯೇ ಬಂದಿದ್ದ: ಆರೋಪಿಯು ಆ ಮನೆಯಲ್ಲಿ ಹಣ, ಚಿನ್ನವಿದೆ ಎಂದೇ ಬಂದಿದ್ದ.ಮೃತ ಕೊಗ್ಗು ಸಾಹೇಬ್ ಅವರ ಓರ್ವ ಮಗ ಕತಾರ್‌ನಲ್ಲಿ ಉದ್ಯೋಗದಲ್ಲಿರುವುದರಿಂದ ಮನೆಯಲ್ಲಿ ಹಣವಿರಬಹುದು ಎಂದು ಆರೋಪಿ ಅವರ ಮನೆಗೆ ಬಂದಿದ್ದ.ರೂಫ್‌ಟೈಲ್ ಮತ್ತು ವಾಲ್ ನಡುವಿನ ಗ್ಯಾಪ್ ಮೂಲಕ ಆತ ಒಳಪ್ರವೇಶಿಸಿದ್ದ.ಆ ಸಂದರ್ಭದಲ್ಲಿ ಮನೆಯೊಳಗೆ ಶಬ್ದವಾದಾಗ ಮನೆಯವರು ವಿದ್ಯುತ್ ದೀಪದ ಸ್ವಿಚ್ ಹಾಕಿದರು.ಮೊದಲೇ ತನ್ನ ಪರಿಚಯ ಮನೆಯವರಿಗೆ ಇರುವುದರಿಂದ ಇನ್ನು ನನ್ನ ವಿಚಾರ ಬಹಿರಂಗವಾಗುತ್ತದೆ ಎಂದು ಆತ ಅದೇ ಮನೆಯಲ್ಲಿದ್ದ ಕತ್ತಿಯೊಂದನ್ನು ತೆಗೆದುಕೊಂಡು ಮೊದಲು ಕೊಗ್ಗು ಸಾಹೇಬ್ ಅವರಿಗೆ ಕಡಿಯುತ್ತಾನೆ.ಬಳಿಕ ಅವರ ಪತ್ನಿ ಖದೀಜಾಬಿ ಅವರಿಗೆ ಕಡಿಯುತ್ತಾನೆ.ಕೊನೆಯದಾಗಿ ಕೊಗ್ಗು ಸಾಹೇಬ್ ಅವರ ಮೊಮ್ಮಗಳು ಸಮೀಹಾಬಾನು ಅವರಿಗೆ ಕತ್ತಿಯಿಂದ ಕಡಿಯುತ್ತಾನೆ.ಈ ಸಂದರ್ಭ ಆಕೆ ಪ್ರತಿರೋಧ ವ್ಯಕ್ತಪಡಿಸಿ ಜಗಳವಾಡುತ್ತಾರೆ.ಆ ಸಂದರ್ಭ ಅದೇ ಕತ್ತಿಯಿಂದ ಆರೋಪಿಯ ಕೈಗೂ ತಾಗಿರುತ್ತದೆ. ಮೂವರೂ ಸತ್ತು ಹೋದರೆಂದು ಭಾವಿಸಿ ಆತ ಕತ್ತಿಯನ್ನು ಬಳಿಕ ಅದೇ ಮನೆಯಲ್ಲಿರಿಸಿ ಕೈತೊಳೆದುಕೊಂಡು ಹಿಂಬದಿ ಬಾಗಿಲ ಮೂಲಕ ಹೊರಹೋಗಿದ್ದ.ಬಳಿಕ ಆತನ ಮನೆಗೆ ಹೋಗಿದ್ದ. ಈ ವಿಚಾರ ತಿಳಿದು ಆತನ ಮನೆಗೆ ಹೋಗಿ ನೋಡಿದಾಗ ಆತ ಅಲ್ಲಿರಲಿಲ್ಲ.ನ.೧೭ರಂದು ರಾತ್ರಿ ತನಗೆ ಐವರು ಸೇರಿ ಹಲ್ಲೆ ನಡೆಸಿದ್ದು ಕೈಗೆ ಗಾಯವಾಗಿದೆ ಎಂದು ಆತ ತನ್ನಲ್ಲಿ ಹೇಳಿದ್ದಾಗಿ ಆತನ ಪತ್ನಿ ನಮಗೆ ಮಾಹಿತಿ ನೀಡಿದ್ದರು. ಕೈಗೆ ಗಾಯವಾಗಿದೆ ಎಂದು ಮರುದಿನ ಅಲ್ಲೇ ಖಾಸಗಿ ಕ್ಲಿನಿಕ್ ಒಂದರಲ್ಲಿ ಔಷಧಿ ಪಡೆದುಕೊಂಡ ಕರೀಂ ಬಳಿಕ ಪುತ್ತೂರು ಸರಕಾರಿ ಆಸ್ಪತ್ರೆಗೆ ಹೋಗಿದ್ದ.ಕೈಗೆ ಗಾಯವಾಗಿರುವುದರಿಂದ ಸ್ಟಿಚ್ ಹಾಕಬೇಕು ಎಂದು ಅಲ್ಲಿನ ವೈದ್ಯರು ತಿಳಿಸಿದ್ದರಿಂದ ಆತಂಕಗೊಂಡ ಆತ ಆ ದಿನ ಅಲ್ಲಿಂದ ಹೋಗಿದ್ದ. ಘಟನೆಯಲ್ಲಿ ಮೇಲ್ನೋಟಕ್ಕೆ ಓರ್ವನೇ ಆರೋಪಿ ಇರುವುದು ತಿಳಿದು ಬಂದಿದೆ ಎಂದೂ ಎಸ್ಪಿಯವರು ತಿಳಿಸಿದರು.

ಆ ಮನೆಯವರ ಪರಿಚಯ ಮೊದಲೇ ಅವನಿಗಿತ್ತು ಮತ್ತು ಒಟ್ಟಾರೆ ಅವನಿಗೆ ಹಣ ಬೇಕಿತ್ತು.ಮನೆಯಲ್ಲಿ ಹಣವಿರಬಹುದು ಎಂದೇ ಬಂದಿದ್ದ.ಮರ್ಡರ್ ಮಾಡಬೇಕೆಂದು ಆತ ಬಂದಿಲ್ಲ.ಮರ್ಡರ್ ಆಗುತ್ತದೆಂದು ಆತ ಭಾವಿಸಿರಲಿಲ್ಲ.ಆದರೆ ಮನೆಯವರು ಲೈಟ್ ಹಾಕಿದಾಗ ಇನ್ನೇನು ತನ್ನ ಗುರುತು ಪತ್ತೆಯಾಗುತ್ತದೆಂದು ತಿಳಿದು ಈ ರೀತಿ ಮಾಡಿರುವ ಸಾಧ್ಯತೆಯಿದೆ.ಕೃತ್ಯ ಎಸಗಿ ಬರುವಾಗ ಮೃತ ಕೊಗ್ಗು ಸಾಹೇಬ್ ಅವರ ಅಂಗಿಯ ಕಿಸೆಯಲ್ಲಿದ್ದ ೬ ಸಾವಿರ ರೂ.ನಗದು ಮತ್ತು ಅಲ್ಲೇ ತಲೆದಿಂಬೊಂದರ ಕೆಳಗಡೆಯಿದ್ದ ೩೦ ಗ್ರಾಂ ತೂಕದ ಚಿನ್ನದ ಸರವೊಂದನ್ನು ತೆಗೆದುಕೊಂಡು ಹೋಗಿದ್ದ ವಿಚಾರ ತನಿಖೆಯಿಂದ ತಿಳಿದು ಬಂದಿದೆ.ಏನಿದ್ದರೂ ಈ ಪ್ರಕರಣದ ಸಮಗ್ರ ತನಿಖೆ ನಡೆಸಲಾಗುವುದು ಎಂದು ಎಸ್ಪಿಯವರು ಹೇಳಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.