Home_Page_Advt
Home_Page_Advt
Home_Page_Advt
Breaking News

ಡಿವೈಎಸ್ಪಿ ವಿಶೇಷ ತಂಡದ ಮಿಂಚಿನ ಕಾರ್ಯಾಚರಣೆ: ಕಳವಾಗಿದ್ದ ಗೂಡ್ಸ್ ಟೆಂಪೋ 20 ಗಂಟೆಯೊಳಗೆ ಪತ್ತೆ

ಪುತ್ತೂರು: ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿಯಲ್ಲಿ ನಿಲ್ಲಿಸಿದ್ದ ಗೂಡ್ಸ್ ಟೆಂಪೋ ಕಳವು ಪ್ರಕರಣವನ್ನು ಭೇದಿಸಿರುವ ಪುತ್ತೂರು ಡಿವೈಎಸ್ಪಿ ನೇತೃತ್ವದ ವಿಶೇಷ ತಂಡದ ಮಿಂಚಿನ ಕಾರ್ಯಾಚರಣೆ ನಡೆಸಿ ಗೂಡ್ಸ್ ಟೆಂಪೋವನ್ನು ಪತ್ತೆ ಮಾಡಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಡಬ ಬಿಳಿನೆಲೆ ನೆಟ್ಟಣಿಗೆಯ ಚೆಂಡೆ ಹಿತ್ತಿಲು ನಿವಾಸಿ ಕುಶಾಲಪ್ಪ ಗೌಡ ಅವರ ಪುತ್ರ ಪ್ರತೀಕ್ ಬಂಧಿತ ಆರೋಪಿ. ಕಳವಾದ ಗೂಡ್ಸ್ ಟೆಂಪೋವನ್ನು ಬಂಧಿತನಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ.

ಘಟನೆ ವಿವರ: ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿಯಿರುವ ಮಂಜುನಾಥ ರೋಡ್‌ಲೈನ್ಸ್ ಸಂಸ್ಥೆಗೆ ಸೇರಿದ ಅಶೋಕ್ ಲೈಲ್ಯಾಂಡ್ ಗೂಡ್ಸ್ ಟೆಂಪೊ(ಕೆ.ಎ.೨೧ ಬಿ ೭೪೧೫) ವನ್ನು ಅದರ ಚಾಲಕ ಶ್ರೀಕಾಂತ್ ಎಂಬವರು ಮಧ್ಯಾಹ್ನ ವೇಳೆ ಸಂಸ್ಥೆಯ ಬಳಿ ನ.20ರಂದು ನಿಲ್ಲಿಸಿ ಊಟಕ್ಕೆ ತೆರಳಿದ್ದರು. ಊಟ ಮಾಡಿ ಬಂದು ನೋಡಿದಾಗ ತಾನು ನಿಲ್ಲಿಸಿದ್ದ ಗೂಡ್ಸ್ ಟೆಂಪೋ ಕಳವಾಗಿರುವುದು ಬೆಳಕಿಗೆ ಬಂದಿತ್ತು. ಘಟನೆಗೆ ಸಂಬಂಧಿಸಿ ಸಂಸ್ಥೆಯ ಮಾಲಕ ಬೊಳುವಾರು ಮಿಶನ್‌ಗುಡ್ಡೆ ನಿವಾಸಿ ಹಾಲಯ್ಯ ಎಂಬವರು ಪುತ್ತೂರು ನಗರ ಪೊಲೀಸ್ ಠಾಣೆಗೆ ಅದೇ ದಿನ ಸಂಜೆ ಗಂಟೆ ೫ಕ್ಕೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೆತ್ತಿಕೊಂಡು ತಕ್ಷಣ ಸ್ಥಳೀಯ ಸಿ.ಸಿ. ಕ್ಯಾಮರವನ್ನು ಪರಿಶೀಲಿಸಿದರು. ಬಳಿಕ ಖಚಿತ ಮಾಹಿತಿ ಮೇರೆಗೆ ನ.೨೧ರಂದು ಮಧ್ಯಾಹ್ನ ನರಿಮೊಗ್ರು ಗ್ರಾಮದ ವೀರಮಂಗಲ ದೇವಸ್ಥಾನದ ರಸ್ತೆ ಕ್ರಾಸ್ ಬಳಿ ವಾಹನವನ್ನು ಪತ್ತೆ ಮಾಡಿದ್ದಾರೆ. ಈ ವೇಳೆ ಆರೋಪಿ ಪ್ರತೀಕ್ ಕೂಡಾ ವಾಹನದಲ್ಲಿದ್ದು ಆತನನ್ನು ಬಂಧಿಸಿದ್ದಾರೆ. ಎಸ್ಪಿ ಲಕ್ಷ್ಮೀಪ್ರಸಾದ್ ಅವರ ಮಾರ್ಗದರ್ಶನದಂತೆ ನಡೆದ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ವಿಶೇಷ ತಂಡದಲ್ಲಿದ್ದ ಪುತ್ತೂರು ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ನೇತೃತ್ವ ವಹಿಸಿದ್ದು, ಎ.ಎಸ್.ಐ ವೆಂಕಟ್ರಮಣ ಗೌಡ, ಎಎಸ್‌ಐ ಚಿದಾನಂದ, ಶ್ರೀಧರ್ ಮಣಿಯಾಣಿ, ಹೆಡ್‌ಕಾನ್‌ಸ್ಟೇಬಲ್‌ಗಳಾದ ಸ್ಕರೀಯ, ಜಯರಾಮ, ಜಗದೀಶ್, ಮಂಜುನಾಥ್, ಕೃಷ್ಣಪ್ಪ, ಕಿರಣ ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.