ಕಾಲೇಜು ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಪ್ರಕರಣ:ಪ್ರಜ್ವಲ್ ಗೆ ಹೈಕೋರ್ಟ್ ಜಾಮೀನು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬೆಳ್ಳಿಪ್ಪಾಡಿಯ ಕಠಾರದ ನಿರ್ಜನ ಪ್ರದೇಶದಲ್ಲಿ ಪುತ್ತೂರಿನ ಪ್ರತಿಷ್ಠಿತ ಪದವಿ ಕಾಲೇಜೊಂದರ ಮೊದಲ ವರ್ಷದ ವಿದ್ಯಾರ್ಥಿನಿಯೊಬ್ಬಳ ಮೇಲೆ ಅದೇ ಕಾಲೇಜ್‌ನ ಐವರು ವಿದ್ಯಾರ್ಥಿಗಳಿಂದ ಕಾರಿನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಂದ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಐವರು ವಿದ್ಯಾರ್ಥಿಗಳ ಪೈಕಿ ಓರ್ವನಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ವ್ಯಾಪಕವಾಗಿ ತಲ್ಲಣ ಮೂಡಿಸಿದ್ದ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳಾಗಿರುವ ಬಜತ್ತೂರು ಗ್ರಾಮದ ಗಾಣದಮೂಲೆ ನಿವಾಸಿ ರಾಧಾಕೃಷ್ಣ ಎಂಬವರ ಪುತ್ರ ಗುರುನಂದನ್ (೧೯ವ), ಪೆರ್ನೆ `ರಾಜಶ್ರೀ’ ಕೃಪದ ನಾಗೇಶ್ ನಾಯ್ಕ್ ಎಂಬವರ ಪುತ್ರ ಪ್ರಜ್ವಲ್ (೧೯ವ), ಪೆರ್ನೆ ಕಡಂಬು ನಿವಾಸಿ ಸದಾಶಿವ ಎಂಬವರ ಪುತ್ರ ಕಿಶನ್ (೧೯ವ), ಆರ್ಯಾಪು ಗ್ರಾಮದ ಪಿಲಿಗುಂಡ ನಿವಾಸಿ ಕಾಂತಪ್ಪ ಗೌಡರವರ ಪುತ್ರ ಸುನಿಲ್ (೧೯ವ) ಮತ್ತು ಬಂಟ್ವಾಳ ಬರಿಮಾರು ಗ್ರಾಮದ ಬಲ್ಯ ನಿವಾಸಿ ಸುಬ್ಬಣ್ಣ ಶೆಟ್ಟಿ ಎಂಬವರ ಪುತ್ರ ಪ್ರಖ್ಯಾತ್ (೧೯ವ)ರವರ ಪೈಕಿ ಪ್ರಜ್ವಲ್ ಗೆ ರಾಜ್ಯ ಉಚ್ಛ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆರೋಪಿ ಪ್ರಜ್ವಲ್ ಪರ ಹೈಕೋರ್ಟ್ ನಲ್ಲಿ ವಕೀಲರಾದ ಅರುಣ್ ಶ್ಯಾಮ್ ಪುತ್ತೂರು ಮತ್ತು ಮಹೇಶ್ ಕಜೆ ವಾದಿಸಿದ್ದರು. ಉಳಿದ ನಾಲ್ವರು ವಿದ್ಯಾರ್ಥಿಗಳ ಜಾಮೀನು ಅರ್ಜಿಯ ವಿಚಾರಣೆ ಮುಂದಿನ ವಾರ ಹೈಕೋರ್ಟ್ ನಲ್ಲಿ ನಡೆಯಲಿದೆ.

`ಕಳೆದ ಮಾರ್ಚ್ ತಿಂಗಳಿನಲ್ಲಿ ಆರೋಪಿ ವಿದ್ಯಾರ್ಥಿಗಳು ವಿದ್ಯಾರ್ಥಿನಿಯನ್ನು ಮನೆಗೆ ತಲುಪಿಸುವುದಾಗಿ ನಂಬಿಸಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು. ಬೆಳ್ಳಿಪ್ಪಾಡಿಯ ಕಠಾರ ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿ ಕಾರಿನಲ್ಲಿಯೇ ವಿದ್ಯಾರ್ಥಿನಿಯನ್ನು ಸಾಮೂಹಿಕವಾಗಿ ಐವರು ವಿದ್ಯಾರ್ಥಿಗಳು ಅತ್ಯಾಚಾರಗೈದಿದ್ದರು. ಮೊಬೈಲ್ ಫೋನ್‌ನಲ್ಲಿ ಘಟನೆಯ ಚಿತ್ರೀಕರಣ ಮಾಡಿದ್ದರು. ಅತ್ಯಾಚಾರ ನಡೆದಿರುವ ಬಗ್ಗೆ ಯಾರಿಗಾದರೂ ತಿಳಿಸಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ವಿದ್ಯಾರ್ಥಿನಿಗೆ ಬೆದರಿಕೆ ಒಡ್ಡಿದ್ದರು’ ಎಂದು ತನಿಖೆ ಮುಕ್ತಾಯಗೊಳಿಸಿದ ಬಳಿಕ ಪೊಲೀಸರು ಪುತ್ತೂರು ನ್ಯಾಯಾಲಯಕ್ಕೆ ಚಾರ್ಚ್ ಶೀಟ್ ಸಲ್ಲಿಸಿದ್ದರು.

ಅತ್ಯಾಚಾರದ ವೀಡಿಯೋ ತುಣುಕು ಜುಲೈಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಕೂಡಲೇ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಸುಮೊಟೋ ಕೇಸು ದಾಖಲಾಗಿತ್ತು. ನಂತರ ಸಂತ್ರಸ್ತ ವಿದ್ಯಾರ್ಥಿನಿ ನೀಡಿದ್ದ ದೂರಿನಂತೆ ಕಲಂ ೩೪೧, ೩೭೬, (ಡಿ) ಆರ್/ಡಬ್ಲ್ಯೂ ೩೪ ಐಪಿಸಿ ಮತ್ತು ೩(೧)ಡಬ್ಲ್ಯೂ (೧)(೧೧), ೩(೨)ವಿ ಎಸ್ಸಿ/ಎಸ್ಟಿ ಪಿ.ಎ ಎಮೆಂಡ್‌ಮೆಂಟ್ ಆಕ್ಟ್ ೨೦೧೫ರಂತೆ ಮತ್ತು ಆರ್‌ಡಬ್ಲ್ಯೂ ೬೬ ಇ, ೬೭ ಎ, ಐಟಿ ಆಕ್ಟ್‌ನಂತೆ ಕೇಸು ದಾಖಲಿಸಿಕೊಂಡಿದ್ದ ಮಹಿಳಾ ಠಾಣಾ ಪೊಲೀಸರು ಆರೋಪಿಗಳಾದ ಐವರು ವಿದ್ಯಾರ್ಥಿಗಳನ್ನು ಬಂಧಿಸಿದ್ದರು. ಅತ್ಯಾಚಾರದ ವೀಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಆರೋಪದಡಿ ಪ್ರತ್ಯೇಕವಾಗಿ ಅ.ಕ್ರ:೬೬/೨೦೧೯ ಕಲಂ:೬೬ ಇ, ೬೭ ಎ, ಐಟಿ ಆಕ್ಟ್ ೨೦೦೦ ಆಂಡ್ ಕಲಂ: ೪,೬ ಇನ್‌ಸಿಡೆಂಟ್ ರೆಪ್ರಸೆಂಟೇಷನ್ ಆಫ್ ವುಮನ್ (ಪ್ರೊಹಿಬಿಷನ್) ಆಕ್ಟ್-೧೯೮೬ರಡಿ ಸುಮೋಟೊ ಕೇಸು ದಾಖಲಿಸಿಕೊಂಡಿದ್ದ ಪುತ್ತೂರು ನಗರ ಠಾಣಾ ಪೊಲೀಸರು ಪರ್ಲಡ್ಕದ ಹೇಮಂತ್ ಎಂಬವರ ಪುತ್ರ ಮುರಳೀಧರ(೩೩ವ), ಕಬಕ ನೆಹರುನಗರ ದಿ.ಗಣಪತಿ ಮಯ್ಯ ಎಂಬವರ ಪುತ್ರ ಚಂದ್ರಶೇಖರ ಮಯ್ಯ(೪೭ವ), ಕಡಬದ ಸುರೇಶ್ ಶೆಟ್ಟಿ ಅವರ ಪುತ್ರ ಶ್ರೇಯಾನ್ಸ್ ಎಸ್. (೨೦ವ), ಆರ್ಯಾಪು ಗ್ರಾಮದ ಕಲ್ಲರ್ಪೆ ನಿವಾಸಿ ಸೇಸಪ್ಪ ಗೌಡರವರ ಪುತ್ರ ಪೂವಪ್ಪ ಕೆ (೨೬ವ), ಆರ್ಯಾಪು ಗ್ರಾಮದ ದೇವಸ್ಯ ನಿವಾಸಿ ದೇವಯ್ಯ ಗೌಡರವರ ಪುತ್ರ ಪವನ್ ಕುಮಾರ್ (೧೯ವ), ಬೊಳುವಾರುಬೈಲು ನಿವಾಸಿ ಗಣೇಶ್ ಎಂಬವರ ಪುತ್ರ ಮೋಹಿತ್ ಪಿ.ಜಿ.(೧೮ವ), ಕೊಳ್ತಿಗೆ ನೂಜಿ ನಿವಾಸಿ ಆನಂದ ಧ್ಯಾನ್ ಎ.ಎನ್.(೧೮ವ) ಪುತ್ತೂರು ಪಾಂಗ್ಲಾಯಿ ನಿವಾಸಿ ಪದ್ಮನಾಭರವರ ಪುತ್ರ ಅದ್ವಿತ್ ಕುಮಾರ್ ನಾಯ್ಕ್ ಎನ್.(೧೯ವ), ಕಡಬ ತಾಲೂಕು ಬೆಳಂದೂರು ಗ್ರಾಮದ ದೇವಸ್ಯ ಮೊಹಮ್ಮದ್‌ರವರ ಪುತ್ರ ಬೆಳಂದೂರು ಗ್ರಾ.ಪಂ. ಸದಸ್ಯ ನಝೀರ್ ಡಿ.(೩೨.ವ), ಕಾಮಣ ಗ್ರಾಮದ ಬೆಳಂದೂರು ಕೆ.ಪಿ ಅಬ್ದುಲ್ಲಾರವರ ಪುತ್ರ ಚಾಲಕ ಕೆ.ಶೌಕತ್ ಅಲಿ(೩೪.ವ) ಹಾಗೂ ಬೆಳಂದೂರು ಗ್ರಾಮದ ಪಲ್ಲತ್ತಾರು ಇಬ್ರಾಹಿಂರವರ ಪುತ್ರ ಪೈಂಟಿಂಗ್ ಕೆಲಸ ಮಾಡುತ್ತಿರುವ ಜಾಬೀರ್(೨೬.ವ) ಎಂಬವರನ್ನು ಬಂಧಿಸಿದ್ದರು. ಬಳಿಕ ಈ ೧೧ ಮಂದಿ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು. ನಂತರ ಈ ಹನ್ನೊಂದು ಮಂದಿಯ ವಿರುದ್ಧ ಪುತ್ತೂರು ನ್ಯಾಯಾಲಯಕ್ಕೆ ಪ್ರತ್ಯೇಕವಾಗಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿತ್ತು. ಅತ್ಯಾಚಾರಗೈದ ಆರೋಪದಡಿ ಬಂಧಿತರಾಗಿರುವ ಐವರು ವಿದ್ಯಾರ್ಥಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಇದೀಗ ಓರ್ವನಿಗೆ ಜಾಮೀನು ಮಂಜೂರಾಗಿದ್ದು ನಾಲ್ವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

About The Author

Related posts

2 Comments

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.