HomePage_Banner
HomePage_Banner
HomePage_Banner
HomePage_Banner

ವಿವೇಕಾನಂದ ಕೃಷಿ ಅನ್ವೇಷಣಾದಲ್ಲಿ ಮೂಡಿಬಂದ ಹಲವು ಸಂಶೋಧನೆಗಳು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಲ್ಲಿನ ವಿವೆಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ತೆಂಕಿಲದ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ನ.30 ರಂದು ಉದ್ಘಾಟನೆಗೊಂಡ ಅನ್ವೇಷಣಾ 2019 ಅನೇಕ ನೂತನ ಆವಿಷ್ಕಾರಗಳಿಗೆ ಸಾಕ್ಷಿಯಾಯಿತು. ರಾಷ್ಟ್ರದಲ್ಲೇ ಮೊಟ್ಟ ಮೊದಲ ಬಾರಿಗೆ ನಡೆದ ಈ ಕೃಷಿ ಪರಿಕರಗಳ ಮಾದರಿ ಪ್ರದರ್ಶನ ಮೇಳದಲ್ಲಿ ರಾಜ್ಯದ ಸುಮಾರು ಆರುನೂರು ಮಂದಿ ತಮ್ಮ ಸರಿಸುಮಾರು ಮುನ್ನೂರೈವತ್ತು ಮಾದರಿಗಳೊಂದಿಗೆ ಆಗಮಿಸಿ ಕುತೂಹಲ ಮೂಡಿಸಿದರು.

ಕೃಷಿಯಲ್ಲಿ ಆವಿಷ್ಕಾರ, ಹೊಸಬಗೆಯ ಕೃಷಿ ಯಂತ್ರೋಪಕರಣಗಳು, ಮಣ್ಣು ಮತ್ತು ನೀರಿನ ನಿರ್ವಹಣೆ, ಕೃಷಿಯಲ್ಲಿ ಪಶುಸಂಗೋಪನೆ, ನವೀನ ಕೃಷಿ ಉತ್ಪನ್ನಗಳು ಎಂಬ ಐದು ವಿಭಾಗಗಳಲ್ಲಿ ಈ ಪ್ರದರ್ಶಿನಿ ಏರ್ಪಾಡಾಗಿತ್ತು. ಎಂಟನೆಯ ತರಗತಿಯ ಕೆಳಗಿನವು, ಒಂಬತ್ತರಿಂದ ಪಿಯುಸಿವರೆಗಿನವರು, ಐಟಿಐ ಹಾಗೂ ವೃತ್ತಿಪರಕಾಲೇಜಿನವರು ಹಾಗೂ ಸಾರ್ವಜನಿಕರು/ಕೃಷಿಕರು ಎಂಬ ಐದುವರ್ಗದಲ್ಲಿ ಈ ಅನ್ವೇಷಣಾ 2019 ಪ್ರತ್ಯೇಕ ಪ್ರತ್ಯೇಕವಾಗಿ ಸಿದ್ಧಗೊಂಡಿತ್ತು.

ಎಳೆಯರಿಂದ ತೊಡಗಿಕೃಷಿಕರ ವರೆಗೆರೈತಪರ ಉತ್ಪನ್ನಗಳ ಆದರಿ ಸಿದ್ಧವಾಗಿ ನಿಂತು ನೋಡುಗರ ಅಚ್ಚರಿಗೆ ಕಾರಣವಾಯಿತು.ಪಾಪಸ್ ಕಳ್ಳಿ, ಗೇರುಬೀಜದಂತಹ ವಸ್ತುಗಳಿಂದ ತಯಾರಿಸಿದ ಸಾವಯವಕೀಟನಾಶಕ, ನೀರಿನ ಮರುಬಳಕೆಯ ಮಾದರಿ, ಉಳುವಿಕೆ ಮತ್ತು ಬಿತ್ತನೆ ಮಾಡುವುದಕ್ಕೆ ರೂಪಿಸಿದ ನವೀನ ಯಂತ್ರದ ಮಾದರಿ,, ಹೈಡ್ರೋಫಾರ್ಮಿಂಗ್ ಮಾದರಿ, ಲಂಭ ಮಾದರಿಯಗಾರ್ಡನ್, ಒಣ ಅಡಿಕೆಯನ್ನು ಅಂಗಳದಿಂದ ನೇರವಗಿಗೋಣಿಚೀಲಕ್ಕೆತುಂಬಿಸುವ ಸಾಧನ, ನಿಟಿಲೆ ಮಹಾಬಲೇಶ್ವರ ಭಟ್ಟರ ನಿರ್ಗುಣ ಮಾದರಿ, ತೆಂಕಿಲದ ವಿವೇಕಾಣಂದಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಲಕ್ಷ್ಮೀಶ್ ಮತ್ತು ಮನ್ವಿತ್ ರೂಪಿಸಿದದ ಗಿಡಗಳಿಗೆ ಔಷಧಸಿಂಪಡಣಾ ಮಾದರಿಮೊದಲಾದವುಗಳು ವಿಶೇಷವಾಗಿ ಮನಸೆಳೆದವು.

ನೀರು ಉಳಿತಾಯ ಮಾದರಿ:
ವಿಟಲ್‌ರಿಸೋರ್ಸ್ ಸೇವರ್ ಎಂಬ ಹೆಸರಿನಲ್ಲಿರಾಮಕುಂಜಕನ್ನಡ ಮಾಧ್ಯಮ ಹೈಸ್ಕೂಲಿನ ಪ್ರಜ್ವಲ್ ರೂಪಿಸಿದ ನೀರಿನ ಉಳಿತಾಯ ಮಾದರಿಅನೇಕರ ಮೆಚ್ಚುಗೆ ಗಳಿಸಿತು.ದಿನನಿತ್ಯ ಮನೆಗಳಲ್ಲಿ, ಕಛೇರಿಗಳಲ್ಲಿ ನಳ್ಳಿಗಳಲ್ಲಿ ಲೀಟರ್‌ಗಟ್ಟಳೆ ನೀರು ವ್ಯರ್ಥವಾಗುವುದನ್ನುತಡೆಯವಯೋಜನೆಯೇ ಈ ಮಾದರಿ.ಇದರಲ್ಲಿ ಪ್ರತಿಯೊಂದು ನಳ್ಳಿಗೂ ಒಂದು ಮೀಟರ್ ಅಳವಡಿಸಲಾಗುತ್ತದೆ.ಅದರಲ್ಲಿ ನಮಗೆ ಎಷ್ಟು ಸೆಕೆಂಡ್ ನೀರು ಬರಬೇಕೆನ್ನುವುದನ್ನು ಮೊದಲೇ ನಿರ್ಧರಿಸಿಡಲಾಗುತ್ತದೆ. ಹಾಗಾಗಿ ಒಮ್ಮೆ ನಳ್ಳಿ ತಿರುಗಿಸಿದಾಗ ನಿಗದಿಪಡಿಸಲಾದಷ್ಟು ಹೊತ್ತು ಮಾತ್ರ ನೀರು ಬರುತ್ತದೆ. ಉದಾಹರಣೆಗೆ ಕೈ ತೊಳೆಯಲು ಐದು ಸೆಕುಂಡ್ ನೀರನ್ನು ನಿಗದಿಪಡಿಸಿದರೆ ಅಷ್ಟು ಹೊತ್ತು ನೀರು ಬಂದಾಗತಾನೇಗೇ ನೀರು ನಿಂತು ಹೋಗುತ್ತದೆ.ಈ ಮಾದರಿಯಲ್ಲಿ ನೀರು ನಳ್ಳಿಯಿಂದ ಬರಬೇಕಾದ ಸಮಯವನ್ನು ಹೆಚ್ಚು ಅಥವಕಡಿಮೆಂಆಡುವುದಕ್ಕೂಅವಕಾಶವಿದೆ.

ಬಾಳೆಗೊನೆ ಸಂರಕ್ಷಣಾ ಮಾದರಿ:
ಕೃಷಿಕರಿಗೆ ಮಂಗನ ಕಾಟ ಹೇಳತೀರದು.ಕೋತಿಗಳ ಉಪಟಳ ತಾಳಲಾರದೆ ಬಾಳೆ ಕೃಷಿಯನ್ನೇಕೈಬಿಟ್ಟವರಿದ್ದಾರೆ.ಆದರೆಇಲ್ಲೊಂದು ಮಾದರಿಯಿದೆ.ಇದನ್ನು ಬಳಸಿ ಬಾಳೆಗೊನೆ ರಕ್ಷಿಸಬಹುದು.ಇದೊಂದು ವೃತ್ತಾಕಾರದಕಬ್ಬಣದಸರಿಗೆಗಳಿಂದ ರೂಪಿಸಿದ ಪೆಟ್ಟಿಗೆ.ಮಧ್ಯ ಭಾಗದಿಂದಇದನ್ನುತೆರೆಯುವುದಕ್ಕೆ ಸಾಧ್ಯ.ಈ ಪೆಟ್ಟಿಗೆಯನ್ನು ಬಾಳೆಕಾಯಿಯನ್ನು ಸುತ್ತುವರಿದುಕಟ್ಟಿಡಲು ಸಾಧ್ಯ.ಬಾಳೆಗೊನೆ ಎಳವೆಯಲ್ಲಿರುವಗಲೇ ಕಟ್ಟಿಟ್ಟರೆ, ಅದು ಬೆಳೆದ ನಂತರವಷ್ಟೇ ಈ ಪೆಟ್ಟಿಗೆತೆರೆದರಾಯಿತು.ಅಕಸ್ಮಾತ್ ಕಪಿಗಳು ಬಂದರೂ ಬಾಳೆಗೊನೆಯನ್ನು ನೋಡಬೇಕಾದೀತೇ ವಿನಃ ಕೈ ಹಾಕುವಂತಿಲ್ಲ!ಈ ಮಾದರಿ ರೂಪಿಸಿದವರು ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದ ಮಾತಾಜಿಯಾದಗಾಯತ್ರಿ.

ಪ್ಲಾಸ್ಟಿಕ್ ನಿಂದಗ್ಯಾಸ್, ಆಯಿಲ್‌ತಯಾರಿ:
ಪುತ್ತೂರಿನ ವಿವೇಕಾನಂದ ಪದವಿಪೂರ್ವಕಾಲೇಜಿನ ವಿದ್ಯಾರ್ಥಿನಿಯರಾದ ಹೇಮಸ್ವಾತಿ ಮತ್ತು ಖುಷಿ ರೂಪಿಸಿದ ಪ್ಲಾಸ್ಟಿಕ್ ತ್ಯಾಜ್ಯದಿಂದಗ್ಯಾಸ್‌ತಯಾರಿಕಾ ನೋಗರನ್ನುತಡೆದು ನಿಲ್ಲಿಸುವಂತಿತ್ತು.ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಮುಕ್ತಿ  ಎಂಬ ಚಿಂತೆಯಲ್ಲಿರುವ ಸಂದರ್ಭದಲ್ಲಿ ಪುತ್ತೂರಿನ ಈ ವಿದ್ಯಾರ್ಥಿನಿಯರು ಪರಿಹಾರ ಕಂಡುಕೊಂಡಿದ್ದಾಳೆ.ಪ್ಲಾಸ್ಟಿಕ್ ಅನ್ನು ನಿಗದಿತ ಶಾಖದಲ್ಲಿ ದ್ರವರೂಪಕ್ಕಿಳಿಸಿ ಅದರಿಂದಗ್ಯಾಸ್, ಪೆಟ್ರೋಲ್ ಪಡೆಯಬಹುದಾದ ಈ ಹುಡುಗಿಯರ ಮಾದರಿ ಮುಂದಿನ ದಿನಗಳಲ್ಲಿ ಜನಪ್ರಿಯವಾದರೆ ಅಚ್ಚರಿಯೇನೂ ಅಲ್ಲ.

ಹೀಗೆ ಇನ್ನೂ ಹಲವು ಉಪಯುಕ್ತ ಮಾದರಿಗಳು ಪ್ರದರ್ಶಿನಿಯಲ್ಲಿ ಮೂಡಿಬಂದುಜನರನ್ನು ಸೆಳೆಯುತ್ತಿವೆ. ಡಿ.1 ರಂದು ಈ ಪ್ರದರ್ಶನ ತೆರೆದಿದ್ದುಆಸಕ್ತರು ವೀಕ್ಷಿಸಬಹುದು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.