ಮೇದಿನಿ ಜನಸೇವಾ ಕೇಂದ್ರದಲ್ಲಿ ಉತ್ಪನ್ನ ಡಿಸ್ಪೊಬ್ಲೂ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ತಾಲೂಕು ಕಛೇರಿ ರಸ್ತೆಯಲ್ಲಿನ ನಗರಸಭಾ ಕಟ್ಟಡದಲ್ಲಿ ವ್ಯವಹರಿಸುತ್ತಿರುವ ಮೇದಿನಿ ಜನಸೇವಾ ಕೇಂದ್ರವು ಮೂರನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಈ ಸಂದರ್ಭದಲ್ಲಿ ಸಂಸ್ಥೆಯು ನೂತನ ಉತ್ಪನ್ನವಾಗಿರುವ `ಡಿಸ್ಪೊಬ್ಲೂ(DISPOBLUE) ಇದರ ಬಿಡುಗಡೆ ಸಮಾರಂಭವು ಡಿ.3 ರಂದು ಮೇದಿನಿ ಜನಸೇವಾ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.

ಮಹಾ ವಾಸ್ತು ಮತ್ತು ಜ್ಯೋತಿಷ್ಯ ತಜ್ಞರಾದ ವಿಜಯನ್ ಕಟಪಾಡಿಯವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮತ್ತು ನೂತನ ಉತ್ಪನ್ನವಾದ `ಡಿಸ್ಪೊಬ್ಲೂ’ ಅನ್ನು ಬಿಡುಗಡೆಗೊಳಿಸಿ ಮಾತನಾಡಿ, ವೈದ್ಯಕೀಯ ರಂಗಕ್ಕೆ ಅತೀ ಅವಶ್ಯವಾಗಿರುವ ಮತ್ತು ಅತ್ಯಂತ ಅಪರೂಪವೆನಿಸಿದ ಈ ಡಿಸ್ಪೊಬ್ಲೂ ಉತ್ಪನ್ನವು ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಪರಿಚಯಿಸಿದ ಕೀರ್ತಿ ಮೇದಿನಿ ಜನಸೇವಾ ಕೇಂದ್ರಕ್ಕೆ ಲಭಿಸಿದೆ. ಯಾರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಾರೋ ಅವರಿಗೆ ದೇವರ ಆಶೀರ್ವಾದ ಖಂಡಿತಾ ಇದೆ ಅನ್ನುವುದಕ್ಕೆ ಮೇದಿನಿ ಜನಸೇವಾ ಸಂಸ್ಥೆ ಸಾಕ್ಷಿಯಾಗಿದೆ. ಈ ನೂತನ ಉತ್ಪನ್ನದ ಬಳಕೆ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಾ ಕರ್ನಾಟಕದಲ್ಲಿ ನಂಬರ್ ವನ್ ಎನಿಸಲಿ ಎಂದರು.

ನಗರಸಭಾ ಸದಸ್ಯ ಭಾಮಿ ಅಶೋಕ್ ಶೆಣೈ ಮಾತನಾಡಿ, ಯಾವುದೇ ವ್ಯವಹಾರ ಹಣ ಗಳಿಸುವ ಉದ್ಧೇಶವನ್ನು ಮಾತ್ರ ಇಟ್ಟುಕೊಳ್ಳದೆ ಪ್ರಾಮಾಣಿಕ ಸೇವೆಯನ್ನು ನೀಡುವುದಾಗಿದೆ. ಮನುಷ್ಯನ ಅವಶ್ಯಕತೆಗಳಿಗೆ ಅನುಗುಣವಾಗಿ ಮೇದಿನಿ ಜನಸೇವಾ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ ಮಾತ್ರವಲ್ಲದೆ ಎಲ್ಲಾ ಜಾತಿಯ ಧರ್ಮಕೇಂದ್ರಗಳ ನಡುವೆ ಈ ಸಂಸ್ಥೆ ಇರುವುದು ಶ್ಲಾಘನೀಯ. ಮೇದಿನಿ ಜನಸೇವಾ ಕೇಂದ್ರವು ಈ ನೂತನ ಉತ್ಪನ್ನದ ಮೂಲಕ ಸೇವೆ ನೀಡುತ್ತಾ ಉತ್ತಮ ಹೆಸರನ್ನು ಗಳಿಸಲಿ ಎಂದರು.

ಅಳಿಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜಯಪ್ರಕಾಶ್ ಕೆ.ರವರು ಮಾತನಾಡಿ, ಡಿಸ್ಪೊಬ್ಲೂ ಉತ್ಪನ್ನದ ಬಗ್ಗೆ ಜನಸಾಮಾನ್ಯರಿಗೆ ಅರಿವು ಬಹಳ ಕಡಿಮೆ. ಆದರೂ ಇದನ್ನು ಗುರುತಿಸಿ ಪುತ್ತೂರಿನಲ್ಲಿ ಮೇದಿನಿ ಜನಸೇವಾ ಸಂಸ್ಥೆಯು ಬಿಡುಗಡೆ ಮಾಡಿರುವುದು ಶ್ಲಾಘನೀಯ. ವೈದ್ಯಕೀಯ ರಂಗಕ್ಕೆ ಇದು ಬಹಳ ಉಪಯುಕ್ತವಾದ ಉತ್ಪನ್ನವಾಗಿದೆ. ಪೊಲ್ಯುಶನ್ ಕಂಟ್ರೋಲ್ ಬೋರ್ಡ್‌ನ ಹಾಗೂ ಬಯೋ ಮೆಡಿಕಲ್ ಸೈನ್ಸ್ ಮ್ಯಾನೇಜ್‌ಮೆಂಟ್ ಗೈಡ್‌ಲೈನ್ಸ್‌ನಲ್ಲಿ ಈ ನೂತನ ಉತ್ಪನ್ನ ಕಾರ್ಯನಿರ್ವಹಿಸುತ್ತಿದ್ದು, ಸ್ವಚ್ಛಭಾರತ ಅಭಿಯಾನಕ್ಕೆ ಇದು ಪೂರಕವಾಗಿದೆ. ಸರಕಾರಿ ವಲಯದಲ್ಲಿ ಇಂತಹ ಉತ್ಪನ್ನಗಳ ಬಗ್ಗೆ ವೈದ್ಯರುಗಳು ಆಪ್‌ಡೇಟ್ ಆಗಿರುತ್ತಾರೆ ಆದರೆ ಖಾಸಗಿ ವಲಯದಲ್ಲಿ ಆಪ್‌ಡೇಟ್ ಆಗಬೇಕಿದೆ ಎಂದರು.

ಪುತ್ತೂರು ಕೈಗಾರಿಕಾ ಸಂಘದ ಅಧ್ಯಕ್ಷ ಶಿವಶಂಕರ್ ಭಟ್‌ರವರು ಮಾತನಾಡಿ, ಡಿಸ್ಪೊಬ್ಲೂ ಉತ್ಪನ್ನ ಸ್ವಚ್ಚಭಾರತ ಅಭಿಯಾನಕ್ಕೆ ಮಹತ್ತರ ಕೊಡುಗೆ ಎನಿಸಿದೆ. ಮೇದಿನಿ ಜನಸೇವಾ ಕೇಂದ್ರವು ಇಂತಹ ಉತ್ಪನ್ನವನ್ನು ಪರಿಚಯಿಸಿ ಸಮಾಜದಲ್ಲಿ ದೊಡ್ಡ ಉದ್ಯಮವಾಗಿನ ಗುರುತಿಸಿಕೊಂಡಿದೆ ಮಾತ್ರವಲ್ಲ ಕೈಗಾರಿಕಾ ಸಂಘಕ್ಕೆ ಹೆಮ್ಮೆಯ ವಿಷಯವಾಗಿದ್ದು, ನೂತನ ಉದ್ಯಮವು ಮುಂದಿನ ದಿನಗಳಲ್ಲಿ ಮುಂಚೂಣಿಯಲ್ಲಿ ಬರಲಿ ಎಂದು ಹೇಳಿ ಶುಭಹಾರೈಸಿದರು.

ಮೇದಿನಿ ಸೇವಾಕೇಂದ್ರದ ಸರಿತಾ ನವೀನ್ ಕುಮಾರ್ ಸ್ವಾಗತಿಸಿ, ನವೀನ್ ಕುಮಾರ್‌ರವರು ಅತಿಥಿಗಳಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಶಶಿಧರ್ ಕಿನ್ನಿಮಜಲು ಕಾರ್ಯಕ್ರಮ ನಿರೂಪಿಸಿದರು. ಸಿಎಸ್‌ಸಿ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲೆಯ ವ್ಯವಸ್ಥಾಪಕರಾದ ಸವಿನ್ ಬಿ.ಎಸ್, ಪ್ರಶಾಂತ್ ಕೆ.ಬಿ ಹಾಗೂ ಮೇದಿನಿ ಜನಸೇವಾ ಕೇಂದ್ರದ ಸಿಬ್ಬಂದಿಗಳು ಸಹಕರಿಸಿದರು.

ಮನೆಯಲ್ಲಿ ಹಸಿ ಕಸ ಹಾಗೂ ಒಣ ಕಸ ಹೇಗೆ ವಿಂಗಡಿಸುತ್ತೇವೆಯೋ ಹಾಗೆಯೇ ಆಸ್ಪತ್ರೆ ತ್ಯಾಜ್ಯವೂ ಬೇರೆಯಾಗಿದ್ದು ವಿಲೇವಾರಿಯ ರೀತಿಯು ಬೇರೆನೇ ಆಗಿದೆ. ಆಸ್ಪತ್ರೆಯಲ್ಲಿ ಬಳಸಲಾದ ತ್ಯಾಜ್ಯ ವಸ್ತುಗಳಲ್ಲಿ ರೋಗಾಣುಗಳು ಇದ್ದು ಎಲ್ಲವನ್ನೂ ಒಂದರಲ್ಲಿಯೇ ತುಂಬಿಸಲಾಗದು ಅಲ್ಲದೆ ಇದನ್ನು ಎಲ್ಲೆಂದರಲ್ಲಿ ಬಿಸಾಡಲಾಗದು. ಅದಕ್ಕೆ ನೀಲಿ, ಬಿಳಿ, ಕೆಂಪು, ಹಳದಿ ಹೀಗೆ ನಾಲ್ಕು ವಿಭಾಗಗಳನ್ನಾಗಿ ತಯಾರಿಕಾ ಹಂತದಲ್ಲಿಯೇ ವಿಂಗಡಿಸಲಾಗುತ್ತಿದೆ. ಯಾಕೆಂದರೆ ಅಂತಿಮ ವಿಲೇವಾರಿ ಮಾಡಿದಾಗ ಅವುಗಳು ಯಾವ ವಸ್ತುಗಳು ಎಂಬುದನ್ನು ಮೊದಲೇ ಗ್ರಹಿಸಬಹುದಾಗಿದೆ. ನೂತನ ಉತ್ಪನ್ನವೆನಿಸಿದ ಡಿಸ್ಪೊಬ್ಲೂ ಇದೊಂದು ನೀಲಿ ಬಣ್ಣದ ರಟ್ಟಿನ ಡಬ್ಬವಾಗಿದೆ. ಇದರಲ್ಲಿ ಗಾಜು, ಶಾರ್ಪ್‌ಗಳನ್ನು ತುಂಬಿಸಬಹುದಾಗಿದ್ದು, ಇದು ತುಂಬಿದೊಡನೆ ಇಡೀ ಡಬ್ಬವನ್ನೇ ವಿಲೇವಾರಿ ಮಾಡಲು ವಿಲೇವಾರಿ ಏಜೆನ್ಸಿಗಳಿಗೆ ಸುಲಭವಾಗಿರುತ್ತದೆ ಡಾ.ಬಸವರಾಜು, ಮೆಡಿಕಲ್ ಆಫೀಸರ್, ಬೆಳಗಾವಿ

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.