HomePage_Banner
HomePage_Banner
HomePage_Banner
HomePage_Banner

ಡಿ.7: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ‘ದೀನ ದಯಾಳು’ ರೈತ ಸಭಾಭವನ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ಆಲಂಕಾರು: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಛೇರಿ ಪ್ರಾಂಗಣದಲ್ಲಿ ನಿರ್ಮಾಣಗೊಂಡ ದೀನ ದಯಾಳು ರೈತ ಸಭಾಭವನದ ಉದ್ಘಾಟನಾ ಸಮಾರಂಭವು ಡಿ.೭ರಂದು ಪೂರ್ವಹ್ನ ಗಂಟೆ ೧೦.೦೦ಕ್ಕೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ರಮೇಶ ಭಟ್ಟ ಉಪ್ಪಂಗಳರವರು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ ಯೋಜನೆಯಡಿಯಲ್ಲಿ ಸ್ಥಾಪಿಸಲಾದ ಮಣ್ಣು ಪರೀಕ್ಷಾ ಕೇಂದ್ರದ ಉದ್ಘಾಟನೆಯನ್ನು ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದು ಸೋಲಾರ್ ಘಟಕದ ಉದ್ಘಾಟನೆಯನ್ನು ವಿಧಾನ ಪರಿಷತ್ ಸಭಾನಾಯಕರು, ಮುಜರಾಯಿ, ಮೀನುಗಾರಿಕಾ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ.

ಪ್ರಧಾನ ಕಚೇರಿಯ ಹವಾನಿಯಂತ್ರಕ ವ್ಯವಸ್ಥೆಯನ್ನು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ.ಎನ್, ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದು, ದೀನ ದಯಾಳು “ರೈತ ಸಭಾಭವನಕ್ಕೆ ಸಹಾಯಧನ ನೀಡಿದ ಮಹನೀಯರುಗಳ ಮತ್ತು ಸಂಸ್ಥೆಗಳ ಫಲಕದ ಅನಾವರಣ ಸಹಕಾರ ಭಾರತೀಯ ರಾಷ್ಟ್ರೀಯ ಅಧ್ಯಕ್ಷರಾದ ರಮೇಶ ವೈದ್ಯ ಫಲಕದ ಅನಾವರಣ ಮಾಡಲಿದ್ದಾರೆ.

ಇದೇ ಸಂದರ್ಭದಲ್ಲಿ ರೈತ ವಿಶ್ರಾಂತಿ ಮತ್ತು ಸಮಾಲೋಚನ ಕೊಠಡಿಯನ್ನು ಕೂಡ ಉದ್ಘಾಟನೆಗೊಳ್ಳಲಿದೆ. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಅಂಗಾರವರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ವಿಧಾನಸಭಾ ಕ್ಷೇತ್ರದ ಶಾಸಕರಾದ ಸಂಜೀವ ಮಠಂದೂರು, ಕ್ಯಾಂಪ್ಕೋ ಮಂಗಳೂರು ಇದರ ಅಧ್ಯಕ್ಷ ಸತೀಶ್ಚಂದ್ರ ಯಸ್.ಆರ್., ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು, ಸಹಕಾರ ಭಾರತೀಯ ರಾಷ್ಟ್ರೀಯ ಸಹ ಸಂಘಟನಾ ಪ್ರಮುಖ್ ಕೊಂಕೋಡಿ ಪದ್ಮನಾಭ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ದ.ಕ ಜಿಲ್ಲೆಯ ಸಹಕಾರ ಸಂಘಗಳ ಉಪನಿರ್ಬಂಧಕ ಪ್ರವೀಣ್.ಬಿ ನಾಯಕ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಜಿ.ಪಂ ಸದಸ್ಯರಾದ ಸರ್ವೋತ್ತಮ ಗೌಡ, ಪ್ರಮೀಳಾ ಜನಾರ್ಧನ, ತಾ.ಪಂ ಸದಸ್ಯರಾದ ಜಯಂತಿ.ಆರ್ ಗೌಡ, ತಾರಾ ತಿಮ್ಮಪ್ಪ ಪೂಜಾರಿ, ಗ್ರಾ.ಪಂ ಅಧ್ಯಕ್ಷರಾದ ಪ್ರಶಾಂತ ಆರ್.ಕೆ, ಸುನಂದ ಬಾರ್ಕುಳಿ, ಹೇಮಾ ಮೋಹನದಾಸ್ ಶೆಟ್ಟಿ, ಸುಗುಣ, ಹಾಗೂ ಇನ್ನಿತರ ಪ್ರಮುಖರು ಗೌರವ ಉಪಸ್ಥಿತರಿರಲಿದ್ದಾರೆ. ಮಧ್ಯಾಹ್ನ ಭೋಜನ ಬಳಿಕ ಭೀಷ್ಮವಿಜಯ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ತಿಳಿಸಿದರು.

ಕಳೆದ ಸಾಲಿನಲ್ಲಿ ೪ ಕೋಟಿ ರೂ. ಪಾಲು ಬಂಡವಾಳ ಹೊಂದಿದ್ದು ೪೪ ಕೋಟಿ ರೂ. ಠೇವಣಾತಿ ಪಡೆದು ೬೪ ಕೋಟಿ ಸಾಲ ವಿತರಿಸಿ ವಾರ್ಷಿಕ ೪೩೮ ಕೋಟಿ ರೂ. ವ್ಯವಹಾರ ನಡೆಸಿ ೧.೧೨ಕೋಟಿ ರೂ. ಲಾಭ ಗಳಿಸಲು ಶಕ್ತವಾಗಿದೆ. ಅಂದಾಜು ೧.೫೦ ಕೋಟಿ ವೆಚ್ಚದಲ್ಲಿ ಸುಸಜ್ಜಿತ, ಆಧುನಿಕ ಶೈಲಿಗೆ ಹೊಂದಿಕೊಳ್ಳುವಂತೆ ನಿರ್ಮಿಸಲಾಗಿರುವ ದೀನ ದಯಾಳು ರೈತ ಸಭಾಭವನ, ಪ್ರಧಾನ ಕಛೇರಿಗೆ ಸಂಪೂರ್ಣ ಸೋಲಾರ್ ಘಟಕ, ಸೋಲಾರ್ ಚಾಲಿತ ಹವಾನಿಯಂತ್ರಕ, ಗ್ರಾಮೀಣ ಭಾಗದಲ್ಲಿ ಪ್ರಪ್ರಥಮ ಬಾರಿಗೆ ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ ಯೋಜನೆಯಲ್ಲಿ ಮಣ್ಣು ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದೆ. ಸಂಘದ ಮುಖ್ಯಕಾರ್‍ಯನಿರ್ವಹಣಾಧಿಕಾರಿ ಪ್ರಶಾಂತ ರೈ ಮನವಳಿಕೆ ವಂದಿಸಿದರು. ಸಂಘದ ಉಪಾಧ್ಯಕ್ಷ ರಮೇಶ ಎನ್.ಸಿ, ನಿರ್ದೇಶಕರಾದ, ಸುಧಾಕರ ರೈ ಮನವಳಿಕೆ, ಪೂವಪ್ಪ ನಾಕ ಶಾಂತಿಗುರಿ, ಮಧುಕುಮಾರ ಶಾಂತಿಗುಂಡಿ, ಜಯಕರ ಪೂಜಾರಿ ಕಲ್ಲೇರಿ, ಮೋನಪ್ಪ ಬೊಳ್ಳರೋಡಿ, ಕುಂಞ ಮುಗೇರ ಕಮ್ಮಿತ್ತಿಲು, ಮಮತಾ ಆನೆಗುಂಡಿ, ಪೂರ್ಣಿಮಾ ಹಿರಿಂಜ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.