ಕಾವು ನವೋದಯ ಒಕ್ಕೂಟದ ನೇತೃತ್ವದಲ್ಲಿ ಅಪರಾಧ ಮುಕ್ತ ಸಮಾಜ-ರಸ್ತೆ ಸುರಕ್ಷತೆಯ ಜಾಗೃತಿಯ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

ಕಾವು: ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಪ್ರವರ್ತಿತ ನವೋದಯ ಸ್ವಸಹಾಯ ಸಂಘಗಳ ಒಕ್ಕೂಟ ಕಾವು, ಮಾಡ್ನೂರು ಇದರ ವತಿಯಿಂದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಸಂಪ್ಯ ಇವರ ಸಹಕಾರದೊಂದಿಗೆ ಅಪರಾಧ ಮುಕ್ತ ಸಮಾಜ ಮತ್ತು ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಕಾರ್ಯಕ್ರಮವು ದ.5ರಂದು ಬೆಳಿಗ್ಗೆ ಕಾವು ಪ್ರಾ.ಕೃ.ಪ.ಸ.ಸಂಘದ ಶಿವಸದನ ಸಭಾಭವನದಲ್ಲಿ ನಡೆಯಿತು.

ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ಸಭಾಧ್ಯಕ್ಷತೆ ವಹಿಸಿದರು. 

ವೇದಿಕೆಯಲ್ಲಿ ಈಶ್ವರಮಂಗಲ ಪೊಲೀಸ್ ಹೊರಠಾಣೆಯ ಎಎಸ್‌ಐ ಸುರೇಶ್ ರೈ, ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೇಶವ ಮೂರ್ತಿ, ನವೋದಯ ಟ್ರಸ್ಟ್‌ನ ಪುತ್ತೂರು ವಲಯದ ಮೇಲ್ವಿಚಾರಕ ಚಂದ್ರಶೇಖರ್, ಕಾವು ನವೋದಯ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಚಿದಾನಂದ ಆಚಾರ್ಯರವರು ಉಪಸ್ಥಿತರಿದ್ದರು.

ಮಾಡ್ನೂರು ಗ್ರಾಮದ ಬೀಟ್ ಪೊಲೀಸ್ ಗಿರೀಶ್ ಕೆ.ರವರು ಸಹಕಾರ ನೀಡಿದರು.

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.