HomePage_Banner
HomePage_Banner
HomePage_Banner
HomePage_Banner

ಚತುಷ್ಪಥ ರಸ್ತೆ ನಿರ್ಮಾಣ-ಪರಿಸರ ಸಂರಕ್ಷಣೆ ಆಧ್ಯತೆ ಕೊಡಿ: ಸಮಾನಮನಸ್ಕ ಸಂಘಟನೆಗಳಿಂದ ಆಗ್ರಹ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಉಪ್ಪಿನಂಗಡಿ ಪುತ್ತೂರು ನಡುವಣ ರಸ್ತೆಯನ್ನು ಚತುಷ್ಪಥಗೊಳಿಸುವ ಕಾಮಗಾರಿ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು. ಮನುಷ್ಯನ ಸಹಜೀವಿಯಾಗಿರುವ ಪುರಾತನ ಕಾಲದ ಮರಗಳನ್ನು ಉಳಿಸಿಕೊಂಡು ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಪ್ರಜಾ ಸೇವಾ ವೇದಿಕೆ, ಕರ್ನಾಟಕ ರಾಜ್ಯ ರೈತ ಸಂಘ-ಹಸಿರುಸೇನೆ, ಪ್ರತಿಪರ ಕೃಷಿಕರು ಹಾಗೂ ಪರಿಸರ ಚಿಂತಕರು ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪುತ್ತೂರು ಪ್ರಜಾ ಸೇವಾ ವೇದಿಕೆಯ ಅಧ್ಯಕ್ಷ ಮುರಳೀಧರ್ ರೈ ಮಠಂತಬೆಟ್ಟು, ಕರ್ನಾಟಕ ರಾಜ್ಯ ರೈತಸಂಘ-ಹಸಿರುಸೇನೆ ಕಾರ್ಯಾಧ್ಯಕ್ಷ ರೂಪೇಶ್ ರೈ ಅಲಿಮಾರ, ಪ್ರಧಾನ ಕಾರ್ಯದರ್ಶಿ ವಿನೋದ್ ಭಟ್ ಪಾದೆಕಲ್ಲು ಪರಿಸರ ಚಿಂತಕ ಕೆ.ಭಾಸ್ಕರ ಕೋಡಿಂಬಾಳ, ಪ್ರಗತಿಪರ ಕೃಷಿಕ ಸೀತಾರಾಮ ಶೆಟ್ಟಿ ಅವರು ಪುತ್ತೂರು ಉಪ್ಪಿನಂಗಡಿ ರಸ್ತೆಯ ಹಾರಾಡಿಯಿಂದ ಕೇಪುಳು ತನಕ ರಸ್ತೆಯನ್ನು ಎರಡು ವರ್ಷಗಳ ಹಿಂದೆ ಚತುಷ್ಪಥ ಗೊಳಿಸಲಾಗಿತ್ತು. ಇದೀಗ ಕೇಪುಳು ಎಂಬಲ್ಲಿಂದ ಸೇಡಿಯಾಪು ತನಕದ ರಸ್ತೆಯನ್ನು ಚತುಷ್ಪಥಗೊಳಿಸುವ ಕೆಲಸ ಆರಂಭವಾಗಿದೆ. ಈ ಭಾಗದಲ್ಲಿ ನೂರಾರು ಮರಗಳು ರಸ್ತೆ ಕಾಮಗಾರಿ ಹಿನ್ನಲೆಯಲ್ಲಿ ನಾಶವಾಗಲಿದೆ. ಆದರೆ ಪರ್ಯಾಯವಾಗಿ ಮರಗಳನ್ನು ನೆಡಲು ಯಾರೂ ಮುಂದಾಗುತ್ತಿಲ್ಲ ಎಂದವರು ದೂರಿದರು.

ಪುತ್ತೂರು ಉಪ್ಪಿನಂಗಡಿ ರಸ್ತೆಯ ಇಕ್ಕೆಲಗಳಲ್ಲಿಯೂ ಫಲವತ್ತಾದ ಹಣ್ಣಿನ ಮರಗಳಾದ ಹಲಸು, ಮಾವು, ಆಲ ಮುಂತಾದ ಪುರಾತನ ಮರಗಳಿದ್ದವು. ಈ ಮರಗಳನ್ನು ಕಡಿದು ಪ್ರಕೃತಿ ವಿನಾಶಕ್ಕೆ ಮುನ್ನುಡಿ ಬರೆಯಲಾಗಿದೆ. ಮರಗಳ ನಾಶದಿಂದಲೇ ಪ್ರಕೃತಿ ಅವಘಡಗಳು ನಡೆಯುತ್ತಿರುವುದು ಎರಡು ವರ್ಷಗಳಿಂದ ಕಂಡುಬರುತ್ತಿದೆ. ಇದಕ್ಕೆ ಪರಿಹಾರವಾಗಿರುವ ಪರಿಸರ ಸಂರಕ್ಷಣೆಯತ್ತ ಯಾವುದೇ ಜನಪ್ರತಿನಿಧಿಗಳಾಗಲೀ, ಇಲಾಖೆಗಳಾಗಲೀ ಕಾಳಜಿ ವಹಿಸುತ್ತಿಲ್ಲ ಎಂದವರು ಆರೋಪಿಸಿದರು.

ಒಂದೇ ಒಂದು ಗಿಡ ನೆಟ್ಟಿಲ್ಲ: ಹಾರಾಡಿಯಿಂದ ಕೇಪುಳು ತನಕ ಚತುಷ್ಪಥ ರಸ್ತೆಯಾಗಿ ಎರಡು ವರ್ಷವಾಗಿದೆ. ಈ ರಸ್ತೆಯ ವಿಭಾಗಕವಾಗಿ 3 ಅಡಿ ಸ್ಥಳ ಬಿಡಲಾಗಿದೆ. ಈ ರಸ್ತೆಯ ಬದಿಯಲ್ಲಿ ಸರ್ಕಾರಿ ಸ್ಥಳವಿದೆ. ಆದರೆ ಅರಣ್ಯ ಇಲಾಖೆಯಾಗಲೀ, ಲೋಕೋಪಯೋಗಿ ಇಲಾಖೆಯಾಗಲೀ ಈ ಭಾಗದಲ್ಲಿ ಯಾವುದೇ ಒಂದು ಗಿಡ ನೆಡುವ ಕಾರ್ಯ ಮಾಡಿಲ್ಲ. ಅಭಿವೃದ್ಧಿ ಕಾರ್ಯಕ್ಕೆ ಮರ ಕಡಿಯುವುದು ತಪ್ಪಲ್ಲ. ಆದರೆ ಇದಕ್ಕೆ ಪರ್ಯಾಯವಾಗಿ ಗಿಡ ನೆಡುವ ಕಾರ್ಯ ನಡೆಸುವ ಜವಾಬ್ದಾರಿ ಇಲಾಖೆಗಳಲ್ಲವೇ ಎಂದು ಅವರು ಪ್ರಶ್ನಿಸಿದರು.

ಹೊಸ ಚಿಂತನೆ ಯಾಕಿಲ್ಲ: ಚತುಷ್ಪಥ ರಸ್ತೆ ಸಂದರ್ಭದಲ್ಲಿ ಮರಗಳನ್ನು ಮಧ್ಯಭಾಗದಲ್ಲಿ ರಸ್ತೆ ವಿಭಾಜಕ ಬಳಸಿಕೊಂಡು ಚತುಷ್ಪಥ ರಸ್ತೆ ನಿರ್ಮಾಣ ಮಾಡಲು ಅವಕಾಶ ಇದೆ. ರಸ್ತೆ ಅಗಲೀಕರಣ ಸಂದರ್ಭದಲ್ಲಿಯೂ ಅನಗತ್ಯವಾಗಿ ಮರಗಳನ್ನು ನಾಶ ಮಾಡುವ ಬದಲು ಅನಿವಾರ್ಯವಾದ ಮರಗಳನ್ನು ಮಾತ್ರ ಕಡಿಯಬೇಕು. ರಸ್ತೆ ವಿಭಾಜಕಕ್ಕೆ ಕೇವಲ ಮೂರು ಅಡಿ ಸ್ಥಳಕ್ಕೆ ಬದಲು 5 ಅಡಿ ಸ್ಥಳ ಬಿಟ್ಟು ಅಲ್ಲಿ ಅಶೋಕಮರಗಳನ್ನು ನೆಟ್ಟು ಪರಿಸರ ಸಂರಕ್ಷಣೆ ಮಾಡಬಹುದಾಗಿದೆ. ಇದರಿಂದ ರಸ್ತೆ ಸೌಂದರ್ಯವೂ ಹೆಚ್ಚಾಗುತ್ತದೆ. ರಸ್ತೆ ಬದಿಗಳಲ್ಲಿ ವಿದ್ಯುತ್ ತಂತಿ ಎಳೆಯುವ ಬದಲಿಗೆ ಭೂಗತ ಸಂಪರ್ಕದ ಮೂಲಕ ವಿದ್ಯುತ್ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದ ಅವರು ಪ್ರಸ್ತುತ ಹಾರಾಡಿಯಿಂದ ಕೇಪುಳು ತನಕ ಚತುಷ್ಫಥ ರಸ್ತೆಯ ವಿಭಾಜಕದಲ್ಲಿ ಅನಗತ್ಯವಾಗಿ ಹತ್ತಿರ ಹತ್ತಿರವಾಗಿ ದಾರಿದೀಪ ಹಾಕಲಾಗಿದ್ದು, ಇದರಿಂದ ವೃಥಾ ವಿದ್ಯುತ್ ಪೋಲಾಗುತ್ತಿದೆ. ಅದರ ಬದಲಿಗೆ ವಿಭಾಜಕ್ಕೆ ಹೆಚ್ಚು ಸ್ಥಳ ಬಿಟ್ಟು ಹೆಚ್ಚು ಅಂತರದಲ್ಲಿ ದಾರಿದೀಪ ಅಳವಡಿಸುವುದು ಉತ್ತಮ ಎಂದು ಅವರು ತಿಳಿಸಿದರು.

ಚತುಷ್ಪಥ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಗೆ ಆಧ್ಯತೆ ನೀಡುವಂತೆ ರಾಜ್ಯದ ಮುಖ್ಯಮಂತ್ರಿ, ಪುತ್ತೂರು ಶಾಸಕರು, ಜಿಲ್ಲಾಧಿಕಾರಿ, ವಿಭಾಗೀಯ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು, ಪುತ್ತೂರು ಉಪವಿಭಾಗಾಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪುತ್ತೂರು, ಸಹಾಯಕ ಕಾರ್ಯಕಾರಿ ಅಭಿಯಂತರ ಲೋಕೋಪಯೋಗಿ ಇಲಾಖೆ ಪುತ್ತೂರು ಮತ್ತು ವಲಯ ಅರಣ್ಯಾಧಿಕಾರಿ ಪುತ್ತೂರು ಇವರಿಗೆ ಮನವಿ ಸಲ್ಲಿಸಲಾಯಿತು.

ಪುತ್ತೂರು ಉಪ್ಪಿನಂಗಡಿ ರಸ್ತೆಯಲ್ಲಿ ಆಗಿರುವ ಮತ್ತು ಪ್ರಸ್ತುತ ಆರಂಭವಾಗಿರುವ ಚತುಷ್ಪಥ ಕಾಮಗಾರಿಗೆ ರಸ್ತೆ ಬದಿಯಲ್ಲಿರುವ ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಅನುಮತಿ ನೀಡಿದೆಯಾ.. ಮರ ಕಡಿದ ನಂತರ ಕಾಮಗಾರಿ ಪಡೆದುಕೊಂಡಿರುವ ಗುತ್ತಿಗೆದಾರರಿಗೆ ಗಿಡ ನೆಟ್ಟುಕೊಡುವಂತೆ ಶರತ್ತು ವಿಧಿಸಲಾಗಿದೆಯಾ.. ಒಂದು ಮರದ ಬದಲಿಗೆ ಎಷ್ಟು ಗಿಡ ನೆಡಲು ಸರ್ಕಾರದ ನಿಯಮದಲ್ಲಿ ಸೂಚಿಸಲಾಗಿದೆ ಎನ್ನುವ ಪ್ರಶ್ನೆಗಳಿಗೆ ಲೊಕೋಪಯೋಗಿ ಇಲಾಖೆ ಮತ್ತು ಅರಣ್ಯ ಇಲಾಖೆ ಉತ್ತರ ನೀಡುವಂತೆ ಅವರು ಆಗ್ರಹಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

 1. Team Young Brigade Puttur

  ಮರ ಕಡಿದು ಒಂದೊಳ್ಳೆ ರಸ್ತೆ ಮಾಡಿಕೊಟ್ಟರೂ ಸಾಕಿತ್ತು 🙏
  ನೂತನವಾಗಿ ನಿರ್ಮಿಸಿರುವ ಕೇಪೂಲು – ಪಡೀಲ್ ಚತುಷ್ಪಥ ದಾರಿಯುದ್ದಕ್ಕೂ ಎತ್ತರ ತಗ್ಗುಗಳು..
  ಬನ್ನೂರು ಚರ್ಚ್ ಮುಂಭಾಗ ಹೋಗುವ ದಾರಿಯಲ್ಲಂತೂ ವಂಡರ್ ಲಾ ದಲ್ಲಿ ಹೋಗುವಂತಹ ಅನುಭವ ಆಗುತ್ತದೆ 😭
  ಯಾರು ಈ ರಸ್ತೆ ಕಾಮಗಾರಿ ಮಾಡಿದ್ದೀರಾ ಅವರಿಗೊಂದು ನಮ್ಮ ಸೆಲ್ಯೂಟ್🤬
  ರಸ್ತೆ ನೇ ಸರಿಯಾಗಿ ಮಾಡಿಲ್ಲ ಇನ್ನು ಮರ ನೆಡುವುದು ಡೌಟೇ ಬಿಡಿ..

  Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.