ಜ.24, 25, 26: ಬೊಳುವಾರು ಕ್ಷೇತ್ರದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ, ದೈವಗಳಿಗೆ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬೊಳುವಾರು ಶ್ರೀ ದುರ್ಗಾಪರಮೇಶ್ವರೀ ಉಳ್ಳಾಳ್ತಿ ಮಲರಾಯ ಸಪರಿವಾರ ಕ್ಷೇತ್ರದಲ್ಲಿ 2020ರ ಜ.24ರಂದು ಚತುರ್ಥ ಪ್ರತಿಷ್ಠಾ ವಾರ್ಷಿಕೋತ್ಸವ, ಚಂಡಿಕಾಯಾಗ ಹಾಗೂ ಜ.25, 26ರಂದು ದೈವಗಳಿಗೆ ನೇಮೋತ್ಸವ ಕುರಿತಂತೆ ಆಮಂತ್ರಣ ಪತ್ರ ಬಿಡುಗಡೆಯು ಡಿ.6ರಂದು ರಾತ್ರಿ ಕ್ಷೇತ್ರದಲ್ಲಿ ನಡೆಯಿತು.

ಕ್ಷೇತ್ರದ ಅರ್ಚಕ ಶ್ರೀಧರ ಭಟ್ ಕಬಕರವರ ನೇತೃತ್ವದಲ್ಲಿ ಡಿ.6ರಂದು ರಾತ್ರಿ ಸರ್ವಾಲಂಕಾರ ಸಹಿತ ದುರ್ಗಾಪೂಜೆ, ರಂಗಪೂಜೆ ನಡೆದು ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್, ಉತ್ಸವ ಸಮಿತಿ ಅಧ್ಯಕ್ಷ ನಾಯಿಲ ಧನಂಜಯ ರೈ, ಕ್ಷೇತ್ರಾಭಿವೃದ್ಧಿ ವಿಶ್ವಸ್ಥ ಮಂಡಳಿ ಟ್ರಸ್ಟ್‌ನ ಕೋಶಾಧಿಕಾರಿ ನಾಗರಾಜ ಹೆಗ್ಡೆ, ಟ್ರಸ್ಟಿಗಳಾದ ಮನೋಹರ್ ರೈ, ವಿ.ಕೆ. ಶೆಟ್ಟಿ, ಸುಂದರ ನಾಯ್ಕ, ದಿನೇಶ್ ಕರ್ಮಲ, ಜಲಜಾಕ್ಷಿ ಹೆಗ್ಡೆ, ನಗರಸಭಾ ಸದಸ್ಯ ಸಂತೋಷ್‌ಕುಮಾರ್ ಕರ್ಮಲ, ಮಾಜಿ ನಗರಸಭಾ ಸದಸ್ಯ ಸುಜೀಂದ್ರ ಪ್ರಭು, ಅನಂತಕೃಷ್ಣ, ಬೇಬಿ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಪೂಜೆಯ ನಂತರ ನಾಯಿಲ ಧನಂಜಯ ರೈ ಮನೆಯವರಿಂದ ಪ್ರಸಾದ ಭೋಜನ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.