HomePage_Banner
HomePage_Banner
HomePage_Banner
HomePage_Banner

ಒಡಿಯೂರಿನಲ್ಲಿ ಗುಡ್ಡ‌ ಕುಸಿದು ಮೂವರು ಕಾರ್ಮಿಕರು ಮೃತ್ಯು: ಓರ್ವ ಅಪಾಯದಿಂದ ಪಾರು

Puttur_Advt_NewsUnder_1
Puttur_Advt_NewsUnder_1

ವಿಟ್ಲ: ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಪಿಲ್ಲರ್ ಗುಂಡಿ ಯಲ್ಲಿ ಕೆಲಸ ಮಾಡಿಕೊಂಡಿದ್ದ ಸಂದರ್ಭ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿ ಮೂವರು ಕಾರ್ಮಿಕರು ಮೃತಪಟ್ಟು, ಓರ್ವನನ್ನು ರಕ್ಷಿಸಲಾದ ಘಟನೆ ಡಿ.೭ರಂದು ಒಡಿಯೂರಿನಲ್ಲಿ ನಡೆದಿದೆ.
ವಿಟ್ಲ ಕಸಬಾ ಗ್ರಾಮದ ಆಲಂಗಾರು ನಿವಾಸಿ ಕೃಷ್ಣ ನಾಯ್ಕ್‌ರವರ ಪುತ್ರ ಬಾಳಪ್ಪ ನಾಯ್ಕ (೫೬ ವ.), ವಿಟ್ಲ ಪಡ್ನೂರು ಗ್ರಾಮದ ಕಾಪುಮಜಲು ನಿವಾಸಿ ಕೃಷ್ಣ ಮಡಿವಾಳರವರ ಪುತ್ರ ರಮೇಶ್ (೫೦ ವ.) ಹಾಗೂ ಮಾಣಿಲ ಗ್ರಾಮದ ಮುರುವ ನಿವಾಸಿ ಪ್ರಕಾಶ್ (೪೮ ವ.) ಮೃತಪಟ್ಟ ದುರ್ದೈವಿಗಳು. ಕುತ್ತಾರು ಸುಭಾಶ್‌ನಗರ ನಿವಾಸಿ ಪ್ರಭಾಕರ್ ಗಾಯಗೊಂಡವರಾಗಿದ್ದಾರೆ. ಮೃತದೇಹಗಳನ್ನು ಮೇಲಕ್ಕೆತ್ತಿ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಗಾಯಾಳು ಪ್ರಭಾಕರ್‌ರವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಳಪ್ಪ ನಾಯ್ಕ್, ರಮೇಶ್ ಹಾಗೂ ಪ್ರಕಾಶ್‌ರವರು ಪಿಲ್ಲರ್ ಹೊಂಡದ ಒಳಗೆ ನಿಂತು ಕೆಲಸ ಮಾಡಿಕೊಂಡಿದ್ದರು. ಪ್ರಭಾಕರ್‌ರವರು ಹೊಂಡದ ಮೇಲ್ಬಾಗದಲ್ಲಿ ನಿಂತು ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಮೇಲ್ಭಾಗದಲ್ಲಿದ್ದ ಸುಮಾರು ೨೫ ಅಡಿ ಎತ್ತರದ ಗುಡ್ಡ ಕುಸಿದು ಈ ನಾಲ್ವರ ಮೇಲೆ ಬಿದ್ದು ಘಟನೆ ಸಂಭವಿಸಿದೆ. ಈ ವೇಳೆ ಓರ್ವನನ್ನು ಮಾತ್ರ ರಕ್ಷಿಸಲು ಸಾಧ್ಯವಾಗಿದ್ದು ಉಳಿದ ಮೂವರು ಮಣ್ಣಿನಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಘಟನೆ ನಡೆದ ಕೂಡಲೇ ಬಂಟ್ವಾಳ ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಲಾಗಿದ್ದು ಅವರು ಬಂದು ಸಾರ್ವಜನಿಕರ ಸಹಕಾರದಲ್ಲಿ ಮಣ್ಣಿನಡಿಯಲ್ಲಿ ಹೂತು ಹೋಗಿದ್ದ ಮೃತದೇಹಗಳನ್ನು ಮೇಲಕ್ಕೆ ತೆಗೆದಿದ್ದಾರೆ.
ಕಟ್ಟಡ ನಿರ್ಮಾಣ ವೇಳೆ ನಡೆಯಿತು ದುರ್ಘಟನೆ….: ಒಡಿಯೂರು ಕ್ಷೇತ್ರಕ್ಕೆ ಸಂಬಂಧಿಸಿ ಕಳೆದ ಕೆಲದಿನಗಳಿಂದ ಇಲ್ಲಿ ಕಟ್ಟಡ ನಿರ್ಮಾಣದ ಕೆಲಸ ನಡೆಯುತ್ತಿತ್ತು. ದ.೭ರಂದು ಬೆಳಗ್ಗಿನಿಂದ ಇಲ್ಲಿ ಕೆಲ ಕಾರ್ಮಿಕರು ಕಟ್ಟಡ ನಿರ್ಮಾಣದ ಕೆಲಸದಲ್ಲಿ ತಲ್ಲೀನ ರಾಗಿದ್ದರು. ನೂತನ ಕಟ್ಟಡ ನಿರ್ಮಾಣಕ್ಕಾಗಿ ಪಿಲ್ಲರ್ ಅಳವಡಿಸಲು ಜೆ.ಸಿ.ಬಿ. ಸಹಾಯದಿಂದ ಬೃಹತ್ ಹೊಂಡವನ್ನು ತೆಗೆಯಲಾಗಿತ್ತು. ಸಾಯಂಕಾಲದ ವೇಳೆ ಅ ಹೊಂಡದೊಳಗೆ ಇಳಿದು ಮೂವರು ಕೆಲಸ ಮಾಡುತ್ತಿದ್ದರು. ಪ್ರಭಾಕರ್‌ರವರು ಹೊಂಡದ ಮೇಲ್ಭಾಗದಲ್ಲಿ ಕೆಲಸ ಮಾಡಿಕೊಂಡಿದ್ದ ವೇಳೆ ಇದ್ದಕ್ಕಿದ್ದಂತೆ ಮೇಲ್ಭಾಗದ ಗುಡ್ಡ ಕುಸಿದು ನೋಡನೋಡುತ್ತಿದ್ದಂತೆ ನಾಲ್ವರು ಮಣ್ಣಿನಡಿಯಲ್ಲಿ ಹೋತು ಹೋದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಸಿ.ಐ. ತಹಶೀಲ್ದಾರ್ ಭೇಟಿ: ಬಂಟ್ವಾಳ ವೃತ್ತನಿರೀಕ್ಷಕರಾದ ಟಿ.ಡಿ.ನಾಗರಾಜ್, ವಿಟ್ಲ ಪೊಲೀಸ್ ಠಾಣೆಯ ಪ್ರೊಬೆಷನರಿ ಎಸ್.ಐಗಳಾದ ವಿನೋದ್ ರೆಡ್ಡಿ, ರಾಜೇಶ್, ಕಂದಾಯ ನಿರೀಕ್ಷಕ ದಿವಾಕರ್ , ಗ್ರಾಮಕರಣಿಕ ಅನಿಲ್ ಕುಮಾರ್, ಸಹಾಯಕ ಗಿರೀಶ್, ಜಗನ್ನಾಥ, ಮಹಾಬಲ, ಶಿವಪ್ರಸಾದ್ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಡಿಯೂರು ಶ್ರೀ ಸಂತಾಪ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಈ ಘಟನೆ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ದೇವರು ಅನುಗ್ರಹಿಸಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.