ಆಲಂಕಾರು: ಒಕ್ಕಲಿಗ ಗೌಡ ಸೇವಾ ಸಂಘದ ‘ಕ್ರೀಡಾ ಸಂಭ್ರಮ’

Puttur_Advt_NewsUnder_1
Puttur_Advt_NewsUnder_1


ಆಲಂಕಾರು: ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ‘ಕ್ರೀಡಾ ಸಂಭ್ರಮ-೨೦೧೯’ಆಲಂಕಾರು ಶ್ರೀ ದುರ್ಗಾಂಬಾ ಕ್ರೀಡಾಂಗಣದಲ್ಲಿ ದ.8ರಂದು ನಡೆಯಿತು. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಉಪ್ಪಿನಂಗಡಿ ಇದರ ಸಲಹೆಗಾರ ಲಿಂಗಪ್ಪ ಗೌಡ ಕಡೆಂಬ್ಯಾಲ್‌ರವರು ಧ್ವಜಾರೋಹಣ ನೆರವೇರಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಬೆಂಗಳೂರಿನಲ್ಲಿ ವಿಜಯ ಬ್ಯಾಂಕ್ ಉದ್ಯೋಗಿಯಾಗಿರುವ, ಖ್ಯಾತ ಕಬಡ್ಡಿ ಆಟಗಾರ ಸತೀಶ್ ಎ.,ರವರು ಕ್ರೀಡಾಕೂಟ ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಹಿರಿಯರ ಸಮಿತಿ ಅಧ್ಯಕ್ಷ ನಾಗಪ್ಪ ಗೌಡ ಮರುವಂತಿಲರವರು ಮಾತನಾಡಿ, ಮಾನಸಿಕ ಹಾಗೂ ದೇಹದ ಬೆಳವಣಿಗೆಗೆ ಕ್ರೀಡೆ ಟಾನಿಕ್ ಇದ್ದಂತೆ. ಇಂತಹ ಕ್ರೀಡಾಕೂಟಗಳ ಮೂಲಕ ಸಮಾಜದ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ಕೊಡುವ ಕೆಲಸ ಆಗಬೇಕು. ಕ್ರೀಡಾಪಟುಗಳು ಇದರ ಸದುಪಯೋಗ ಪಡೆದುಕೊಂಡು ಮುಂದೆ ರಾಜ್ಯ, ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಮಿಂಚುವಂತಾಗಲಿ ಎಂದು ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿದ್ದ ನೋಟರಿ ವಕೀಲ ಸುಂದರ ಗೌಡ ನೆಕ್ಕಿಲಾಡಿ, ನಿವೃತ್ತ ಮುಖ್ಯಶಿಕ್ಷಕ ಗುಮ್ಮಣ್ಣ ಗೌಡ ರಾಮಕುಂಜ, ವಿಜಯ ಬ್ಯಾಂಕ್‌ನ ನಿವೃತ್ತ ಮೇನೇಜರ್ ಬಾಲಕೃಷ್ಣ ಗೌಡ ಕತ್ಲಡ್ಕ, ಪುತ್ತೂರು ಶ್ರೀ ಮಹಾಲಿಂಗೇಶ್ವರ ಐಟಿಐ ಪ್ರಾಂಶುಪಾಲ ಭವಾನಿ ಗೌಡ ಪರಂಗಾಜೆಯವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಕೆಪಿಸಿಎಲ್ ನಿವೃತ್ತ ಜೆ.ಇ. ಮೋನಪ್ಪ ಗೌಡ ಅಗತ್ತಾಡಿ, ಪ್ರಗತಿಪರ ಕೃಷಿಕ ಮಾಯಿಲಪ್ಪ ಗೌಡ ಅಲೆಪ್ಪಾಡಿ, ಕೆಎಸ್‌ಆರ್‌ಟಿಸಿ ನಿವೃತ್ತ ಸಂಚಾರ ನಿಯಂತ್ರಣಾಧಿಕಾರಿ ದೇವಪ್ಪ ಗೌಡ ಬರೆಂಬೆಟ್ಟು, ಒಕ್ಕಲಿಗ ಗೌಡ ಸೇವಾ ಸಂಘ ಆಲಂಕಾರು ವಲಯದ ಹಿರಿಯರ ಸಮಿತಿ ಗೌರವ ಸಲಹೆಗಾರ ಈಶ್ವರ ಗೌಡ ಪಜ್ಜಡ್ಕ, ವಲಯ ಉಸ್ತುವಾರಿ ಪದ್ಮಪ್ಪ ಗೌಡ ರಾಮಕುಂಜ ವೇದಿಕೆಯಲ್ಲಿ ಉಪಸ್ಥಿತದಿದ್ದರು. ಯೋಗೀಶ್ ಕೆದ್ದೊಟ್ಟೆ, ಬಾಲಕೃಷ್ಣ ಸಂಪ್ಯಾಡಿ, ರಾಮಣ್ಣ ಗೌಡ ಸುರುಳಿ, ಸುಧೀಶ್ ಪಟ್ಟೆ, ದಾಮೋದರ ಗೌಡ ಮಾಯಿಲ್ಗ, ಹರೀಶ್ ಎಣಿತ್ತಡ್ಕ, ಪ್ರಕಾಶ್ ಬಾಕಿಲ, ಜಗದೀಶ್ ಪಟ್ಟೆ, ದಯಾನಂದ ಬಡ್ಡಮೆ, ಲಕ್ಷ್ಮೀನಾರಾಯಣ ಅಲೆಪ್ಪಾಡಿ, ಹರೀಶ್ ಆಲಡ್ಕ, ವಿಶ್ವನಾಥ ಗೌಡ ಹಳೆನೇರೆಂಕಿಯವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು.

ಆಲಂಕಾರು ವಲಯ ಒಕ್ಕಲಿ ಗೌಡ ಸೇವಾ ಸಂಘದ ಯುವ ಸಮಿತಿ ಅಧ್ಯಕ್ಷ ಚಕ್ರಪಾಣಿ ಎ.ವಿ.,ಯವರು ಸ್ವಾಗತಿಸಿ, ಕ್ರೀಡಾ ಕಾರ್ಯದರ್ಶಿ ರವಿಕುಮಾರ್ ನೆಕ್ಕಿಲಾಡಿ ವಂದಿಸಿದರು. ಯುವ ಸಮಿತಿ ಸಾಂಸ್ಕೃತಿಕ ಕಾರ್ಯದರ್ಶಿ ಪ್ರದೀಪ್ ಬಾಕಿಲ ಕಾರ್‍ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ಕ್ರೀಡಾಸ್ಪರ್ಧೆಗಳು ನಡೆಯಿತು.

ಆಕರ್ಷಕ ಪಥಸಂಚಲನ:
ಆರಂಭದಲ್ಲಿ ಆಲಂಕಾರು ವಲಯ ವ್ಯಾಪ್ತಿಯ ಆಲಂಕಾರು, ಪೆರಾಬೆ, ಕುಂತೂರು, ಹಳೆನೇರೆಂಕಿ,ರಾಮಕುಂಜ, ಕೊಲ ಗ್ರಾಮಗಳ ಕ್ರೀಡಾಪಟುಗಳಿದ್ದ ಗ್ರಾಮವಾರು ತಂಡದವರಿಂದ ಆಕರ್ಷಕ ಪಥಸಂಚಲನಾ ನಡೆಯಿತು. ಬಳಿಕ ಧ್ವಜಾರೋಹಣ ನಡೆಯಿತು. ಕ್ರೀಡಾಪಟುಗಳಾದ ರಿವಾನ್, ಗೌತಮ್, ಕಿರಣ್, ಪೂಜಾ ಹಾಗೂ ಹರ್ಷಿತಾರವರು ಕ್ರೀಡಾಜ್ಯೋತಿ ಬೆಳಗಿಸಿದರು. ಯುವ ಸಮಿತಿ ಕಾರ್ಯದರ್ಶಿ ರಾಮಣ್ಣ ಗೌಡ ದೋಳಿ ಪ್ರತಿಜ್ಞಾ ವಿಧಿ ಬೋಧಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.