HomePage_Banner
HomePage_Banner
HomePage_Banner

ಒಡಿಯೂರಿನಲ್ಲಿ ಗುಡ್ಡ ಕುಸಿತ ಪ್ರಕರಣ ಮೃತರ ಕುಟುಂಬಗಳಿಗೆ ಮುಖ್ಯ ಮಂತ್ರಿಯವರಿಂದ ಪರಿಹಾರ ಘೋಷಣೆ

Puttur_Advt_NewsUnder_1
Puttur_Advt_NewsUnder_1

ವಿಟ್ಲ: ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಒಡಿಯೂರು ಎಂಬಲ್ಲಿ ಕೆಲಸ ಮಾಡುತ್ತಿದ್ದ ವೇಳೆ  ಗುಡ್ಡ ಕುಸಿದು ಮಣ್ಣಿನಡಿಯಲ್ಲಿ ಸಿಲುಕಿ ಮೃತಪಟ್ಟ ಮೂವರು ಕಾರ್ಮಿಕರ ಕುಟುಂಬಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪರವರು ತಲಾ ಮೂರು ಲಕ್ಷ ರೂಪಾಯಿ ಪರಿಹಾರ ಧನ ಘೋಷಿಸಿದ್ದಾರೆ.

ಅವರು ಡಿ.8ರಂದು ಉಜಿರೆಯ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆದ ಬೆಳ್ತಂಗಡಿ ತಾಲೂಕಿನಲ್ಲಿ ನಡೆಯಲಿರುವ 347 ಕೋಟಿ ರೂಪಾಯಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದ ಸಂದರ್ಭ ಈ ವಿಚಾರವನ್ನು ತಿಳಿಸಿದರು. ನಿನ್ನೆ ಒಡಿಯೂರಿನಲ್ಲಿ ನಡೆದಂತಹ ಘಟನೆ ತುಂಬಾ ದುಃಖ ದ ವಿಚಾರವಾಗಿದೆ. ಘಟನೆಯ ವೇಳೆ ಮೃತಪಟ್ಟ ಮೂವರು ಕಾರ್ಮಿಕರ ಕುಟುಂಬ ಗಳಿಗೆ ಸರಕಾರದಿಂದ ತಲಾ ಮೂರು ಲಕ್ಷರೂಪಾಯಿ ಪರಿಹಾರ ನೀಡಲಾಗುವುದು ಎಂದರು.

ಡಿ.7ರಂದು ಸಾಯಂಕಾಲ ಘಟನೆ ಸಂಭವಿಸಿತ್ತು. ಹೊಸ ಕಟ್ಟಡ ನಿರ್ಮಾಣಕ್ಕಾಗಿ ಜೆಸಿಬಿ ಮುಂಖಾಂತರ ತೆರೆಯಲಾಗಿದ್ದ ಪಿಲ್ಲರ್ ಹೊಂಡದಲ್ಲಿ ವಿಟ್ಲ ಕಸಬಾ ಗ್ರಾಮದ ಆಲಂಗಾರು ನಿವಾಸಿ ಕೃಷ್ಣ ನಾಯ್ಕ್ ರವರ ಪುತ್ರ ಬಾಳಪ್ಪ ನಾಯ್ಕ (56 ವ.), ವಿಟ್ಲ‌ ಪಡ್ನೂರು ಗ್ರಾಮದ  ಕಾಪುಮಜಲು ನಿವಾಸಿ ಕೃಷ್ಣ ಮಡಿವಾಳರವರ ಪುತ್ರ ರಮೇಶ್ (50 ವ.) ಹಾಗೂ ಮಾಣಿಲ ಗ್ರಾಮದ ಮುರುವ ನಿವಾಸಿ ಪ್ರಕಾಶ್ (48 ವ.)ರವರು ಕೆಲಸ‌ ಮಾಡಿಕೊಂಡಿದ್ದರು. ಕುತ್ತಾರು ಸುಭಾಶ್ ನಗರ ನಿವಾಸಿ ಪ್ರಭಾಕರ್ ಹೊಂಡದ ಮೇಲ್ಭಾಗದಲ್ಲಿ ಕೆಲಸ ಮಾಡಿಕೊಂಡಿದ್ದರು.

ಈ ವೇಳೆ ಮೇಲ್ಭಾಗದ ೩೦ಅಡಿ ಎತ್ತರದ ಗುಡ್ಡ ಕುಸಿದು ಬಿದ್ದಿತ್ತು. ಘಟನೆಯಿಂದಾಗಿ ಬಾಳಪ್ಪ ನಾಯ್ಕ, ರಮೇಶ್,ಪ್ರಕಾಶ್ ಮಣ್ಣಿನ ಅಡಿಯಲ್ಲಿ ಸಿಲುಕಿ ಮೃತಪಟ್ಟಿದ್ದರು.ಪ್ರಭಾಕರ್ ರವರನ್ನು‌ ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.