HomePage_Banner
HomePage_Banner
HomePage_Banner
HomePage_Banner

ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಾರ್ಷಿಕೋತ್ಸವ `ವಿವೇಕೋತ್ಸವ’

Puttur_Advt_NewsUnder_1
Puttur_Advt_NewsUnder_1

ಕನ್ನಡ ಮಾಧ್ಯಮ ಶಾಲೆಗಳಿಂದ ವಿದ್ಯಾರ್ಥಿಗಳಿಗೆ ಬದುಕಿನ ಶಿಕ್ಷಣ-ಶಾಸಕ ಮಠಂದೂರು

ಪುತ್ತೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ಶಿಕ್ಷಣದ ಜೊತೆಗೆ ಬದುಕಿನ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದ.೮ರಂದು ನಡೆದ ಶಾಲಾ ವಾರ್ಷಿಕೋತ್ಸವ `ವಿವೇಕೋತ್ಸವ’ದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಭಾಷೆಗಳು ನಾಶವಾದಾಗ ಸಂಸ್ಕೃತಿಗಳು ನಾಶವಾದಂತೆ. ನಮ್ಮ ತನವನ್ನು ಉಳಿಸಿಕೊಳ್ಳಲು ನಾವು ಪ್ರಯತ್ನಿಸಬೇಕು. ಪ್ರಜ್ಞಾವಂತ ಹಳ್ಳಿಯ ನಾಗರಿಕರಿಂದಾಗಿ ನಮ್ಮ ಸಂಸ್ಕೃತಿಯು ಉಳಿದಿದೆ. ಇಂದಿನ ಆಂಗ್ಲ ಮಾಧ್ಯಮ ಶಿಕ್ಷಣದ ವ್ಯಾಮೋಹದ ಮಧ್ಯೆಯೂ ಸಮಾಜ ಸಮರ್ಪಿತ ಬದುಕಿಗೆ ಪ್ರೇರಣೆ ನೀಡುವ ಕೆಲಸವು ವಿವೇಕಾನಂದ ವಿದ್ಯಾವರ್ಧಕ ಸಂಘದ ಮುಖಾಂತರ ನಡೆಯುತ್ತಿದ್ದು ವಿವೇಕಾನಂದದ ಮೂಲಕ ಕನ್ನಡದ ಕಂಪು ರಾಷ್ಟ್ರ,

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸುವಂತಾಗಲಿ ಎಂದು ಹೇಳಿದ ಶಾಸಕರು ತಡೆಗೋಡೆ, ಆಟದ ಮೈದಾನ ಸೇರಿದಂತೆ ಮೂಲಭೂತ ಸೌಲಭ್ಯಗಳಿಗಾಗಿ ಅನುದಾನ ಒದಗಿಸುವ ಭರವಸೆ ನೀಡಿದರು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಹಿರಿಯ ವಿದ್ಯಾರ್ಥಿ, ಕರ್ನಾಟಕ ಬ್ಯಾಂಕ್ ಉದ್ಯೋಗಿ ಕೃಪಾ ಶಂಕರಿ ಮಾತನಾಡಿ, ಕನ್ನದ ಮಾಧ್ಯಮದ ಬಗ್ಗೆ ಯಾರಿಗೂ ಹಿಂಜರಿಕೆ ಬೇಡ. ಭಾಷಾ ಮಾಧ್ಯಮ ಎಲ್ಲಿಯೂ ಅಡ್ಡಿ ಬರುವುದಿಲ್ಲ. ಕನ್ನಡ ಮಾಧ್ಯಮದ ಬಗ್ಗೆ ಭಯ ಬೇಡ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತಾ ಪಡೆಯಬಹುದು. ನಾವು ಕನ್ನಡ ಮಾಧ್ಯಮದಲ್ಲಿ ಕಲಿತವರು ಎಂದು ಹೇಳಬಹುದು ಎಂದು ಹೇಳಿದ ಅವರು ತಮ್ಮ ವಿದ್ಯಾರ್ಥಿ ಜೀವನದ ಸಿಹಿ ಅನುಭವಗಳನ್ನು ಹಂಚಿಕೊಂಡರು.

ಸಾಹಿತ್ಯ ಮಿತ್ರ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಮಾತನಾಡಿ, ಜಿಲ್ಲೆಯಲ್ಲಿಯೇ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾಗಿ ಬೆಳೆಯುತ್ತಿರುವ ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಇಲಾಖೆಗೆ ಬಹಳಷ್ಟು ಗೌರವ ತರುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಶೈಕ್ಷಣಿಕ, ಕ್ರೀಡೆ, ಸಾಹಿತ್ಯ ಹಾಗೂ ಪ್ರತಿಭಾ ಕಾರಂಜಿಯಲ್ಲಿ ಸಾಧನೆ ಮಾಡುವ ಮೂಲಕ ಜಿಲ್ಲೆಯಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಸಾಹಿತ್ಯಕ್ಕೆ ಸಂಬಂಧಿಸಿದ ಸ್ಮರಣ ಸಂಚಿಕೆಯ ಮುಖಾಂತರ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಬಗ್ಗೆ ಅಭಿರುಚಿ ಮೂಡಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಜತೆಕಾರ್ಯದರ್ಶಿ ಕೃಷ್ಣ ಶೆಟ್ಟಿ ಕಡಬ ಮಾತನಾಡಿ, ಆಂಗ್ಲ ಮಾಧ್ಯಮ ಹಾಗೂ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಲ್ಲಿರುವ ಮನೋಸ್ಥಿತಿ ಭಿನ್ನವಾಗಿರುತ್ತದೆ. ಪೋಷಕರ ದಾರಿ ತಪ್ಪಿದಾಗ ಅವರನ್ನು ತಿದ್ದುವ ಕಾರ್ಯವೂ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಲ್ಲಿ ಕಾಣಬಹುದು. ವಿದ್ಯಾರ್ಥಿಗಳನ್ನು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಪೋಷಕರು ಭಯ ಪಡಬೇಕಾಗಿಲ್ಲ. ಮಕ್ಕಳ ಶಿಕ್ಷಣ ಹಣ ಸಂಪಾದನೆಯ ಉದ್ದೇಶವಾಗಿರಬಾರದು. ಮಕ್ಕಳನ್ನು ಆಸ್ತಿಗಳನ್ನಾಗಿ ಬೆಳೆಸಬೇಕು ಎಂದು ಅವರು ಹೇಳಿದರು.

ಮಾತೃ ಮಂಡಳಿಯ ಅಧ್ಯಕ್ಷೆ ಉಷಾಮಹೇಶ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಕೃಷ್ಣ ಭಟ್, ವಿದ್ಯಾರ್ಥಿ ನಾಯಕರಾದ ಶಿಶಿರ್ ಹಾಗೂ ಅಕ್ಷಯ್, ಪ್ರಾಥಮಿಕ ಶಾಲಾ ಮುಖ್ಯ ಗುರು ನಳಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ಮರಣ ಸಂಚಿಕೆ ಬಿಡುಗಡೆ: ಶಾಲಾ ವಿಶೇಷ ಸಂಚಿಕೆ `ಸಾಹಿತ್ಯ ಮಿತ್ರ’ವನ್ನು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಬಿಡಗಡೆಗೊಳಿಸಿದರು.

ಅಭಿನಂದನೆ: ಶೈಕ್ಷಣಿಕ, ಸಾಹಿತ್ಯ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಸಂಚಾಲಕ ರವಿನಾರಾಯಣ ಸ್ವಾಗತಿಸಿದರು. ಮುಖ್ಯಗುರು ಆಶಾ ಬೆಳ್ಳಾರೆ ವರದಿ ವಾಚಿಸಿದರು. ಆಡಳಿತ ಮಂಡಳಿ ಸದಸ್ಯ ರಮೇಶ್ಚಂದ್ರ ಪ್ರಸ್ತಾವಣೆಗೈದರು. ಅಧ್ಯಕ್ಷ ಅಚ್ಚುತ್ತ ನಾಯಕ್, ಸದಸ್ಯರಾದ ವಸಂತ ಸುವರ್ಣ, ಭಾಗ್ಯಲಕ್ಷ್ಮೀ ಅರ್ತಿಕಜೆ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ವಿದ್ಯಾರ್ಥಿನಿ ಶ್ರೇಯಾ ವೈಯಕ್ತಿಕ ಗೀತೆ ಹಾಡಿದರು. ಶಿಕ್ಷಕರಾದ ಲೀಲಾವತಿ ಹಾಗೂ ಚಂದ್ರಶೇಖರ್‌ರವರು ಕ್ರೀಡೆ, ಶೈಕ್ಷಣಿಕ ಕ್ಷೇತ್ರದ ಸಾಧಕರ ಪಟ್ಟಿಓದಿದರು. ಗೌತಮಿ ಸ್ಮರಣ ಸಂಚಿಕೆಯ ಬಗ್ಗೆ ತಿಳಿಸಿದರು. ಗೀತಾ ಹಾಗೂ ಅಶ್ವಿನಿ ಕಾರ್ಯಕ್ರಮ ನಿರೂಪಿಸಿ, ಆಡಳಿತ ಮಂಡಳಿ ಸದಸ್ಯ ಶೇಖರ್ ನಾರಾವಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಸಾಹಿತ್ಯ ಮಿತ್ರ ಸಂಚಿಕೆ ಬಿಡುಗಡೆ
ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ. ಹಲವು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಸಾಹಿತಿಗಳು ಕರ್ನಾಟಕದವರಾಗಿದ್ದರೂ ರಾಜ್ಯದಲ್ಲಿ ಕನ್ನಡ ಶಾಲೆಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಕನ್ನಡ ರಾಜ್ಯೋತ್ಸವದ ಆಚರಣೆ ಒಂದು ದಿನಕ್ಕೆ ಸೀಮಿತವಾಗಿದೆ ಸಂಜೀವ ಮಠಂದೂರು, ಶಾಸಕರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.