ಡಿ.11-12: ಹಾರಾಡಿ ಶಾಲೆಯಲ್ಲಿ 2 ದಿನಗಳ ಕಾಲ ಮಕ್ಕಳ ವಿಜ್ಞಾನ ಹಬ್ಬ -2019

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಹಾರಾಡಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ವಿನೂತನ ಚಟುವಟಿಕೆ ಮಕ್ಕಳ ವಿಜ್ಞಾನ ಹಬ್ಬ -2019 ಡಿ.11 ಮತ್ತು 12ರಂದು ನಡೆಯಲಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ, ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ, ದ.ಕ.ಜಿ.ಪಂ.ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ ಹಾರಾಡಿ ಹಾಗೂ ಹಾರಾಡಿ ಶಾಲೆ ಇವುಗಳ ಜಂಟಿ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಸಂಜೀವ ಮಠಂದೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಹಬ್ಬದ ವಿವಿಧ ಕಾರ್ನರ್ ಗಳ ಪೈಕಿ ಚುಕ್ಕಿ ಚಂದ್ರಮಗೆ ಚುಕ್ಕಿ ಸೇರಿಸುವ ಕಾರ್ಯವನ್ನು ತಾ.ಪಂ ಸ್ಥಾಯಿ ಸಮಿತಿಯ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ನೆರವೇರಿಸಲಿದ್ದಾರೆ. ಊರು ತಿಳಿಯೋಣಗೆ ಜೊತೆಯಾಗುವಲ್ಲಿ ನಗರಸಭೆ ಸದಸ್ಯೆ ಶ್ರೀಮತಿ ಪ್ರೇಮಲತಾ ಜಿ., ಕಾಗದ ಕತ್ತರಿ ಪ್ರಯೋಗಿಸುವಲ್ಲಿ ಶ್ರೀಮತಿ ಮಂಜುಳಾ, ಡಿ.ವೈ. ಪಿ.ಸಿ. ಮಂಗಳೂರು, ಹಾಡು ಆಡು ಪ್ರಾರಂಭಿಸುವಲ್ಲಿ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಸಿ., ಗ್ರಹಣ ದರ್ಶನ ಅನಾವರಣ ಮಾಡುವಲ್ಲಿ ಪುತ್ತೂರು ಬಿ.ಆರ್.ಸಿ.ಕ್ಷೇತ್ರ ಸಮನ್ವಯಾಧಿಕಾರಿ ಮೋನಪ್ಪ ಪೂಜಾರಿ ಇವರುಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ವಿದ್ಯಾರ್ಥಿ ವಿಜ್ಞಾನಿ ಸ್ವಸ್ತಿಕ್ ಪದ್ಮ ಭಾಗವಹಿಸಲಿದ್ದಾರೆ. ಹಾರಾಡಿ ಕ್ಲಸ್ಟರ್ ಸಿ.ಆರ್.ಪಿ. ನಾರಾಯಣ ಪುಣಚ ಉಪಸ್ಥಿತರಿರಲಿದ್ದಾರೆ.

ಡಿ. ೧೨ರಂದು ಸಂಜೆ ಮುಕ್ತಾಯದ ಹಬ್ಬದಲ್ಲಿ ರಂಗಕರ್ಮಿ ಐ.ಕೆ.ಬೊಳುವಾರು ಮುಕ್ತಾಯದ ಮಾತುಗಳನ್ನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಕನ್ನಡ ನಾಟಕ ಗ್ರಹಣ ಕಂಕಣ ಪ್ರದರ್ಶನ ನಡೆಯಲಿದೆ. ಎರಡು ದಿನಗಳ ಕಾಲದ ಚಟುವಟಿಕೆಗಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಜಗನ್ನಾಥ್ ಅರಿಯಡ್ಕ, ಲತಾ ಕಬಕ, ರಾಣಿ ಕಬಕ, ಸುರೇಖಾ ಅರ್ಕ, ಮಂಜಪ್ಪ ಬಲ್ನಾಡು, ಅರವಿಂದ ಕುಡ್ಲ, ಪ್ರದೀಪ್ ಬಂಟ್ವಾಳ ಭಾಗವಹಿಸಲಿದ್ದಾರೆ. ವಿಜ್ಞಾನ ಹಬ್ಬದಲ್ಲಿ ಹಾರಾಡಿ ಕ್ಲಸ್ಟರ್ ವ್ಯಾಪ್ತಿಯ ಸರಕಾರಿ ಶಾಲೆಗಳ ೬ ರಿಂದ ೮ ನೇ ತರಗತಿಗಳ ೧೫೦ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಹಾರಾಡಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಪ್ರಿಯಾ ಕುಮಾರಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಪ್ರತಿಮಾ ಯು.ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೊಟೋ: ಹಾರಾಡಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.