ಪುತ್ತೂರು: ಜಿಲ್ಲೆಯಲ್ಲೇ ‘ಎ’ ಗ್ರೇಡ್ ಜೇನನ್ನು ಮಾರುಕಟ್ಟೆಗೆ ಕೊಡುತ್ತಿರುವ ದ.ಕ.ಜಿಲ್ಲಾ ಜೇನು ವ್ಯವಸಾಯ ಸಹಕಾರ ಸಂಘದ ಪುತ್ತೂರು ಪ್ರಧಾನ ಕಚೇರಿಗೆ ತುಮಕೂರಿನ ಜೇನು ಸಾಕಣಿಕೆದಾರರ ಸಹಕಾರ ಸಂಘದ ಆಡಳಿತ ಮಂಡಳಿ ಭೇಟಿ ನೀಡಿ ಜೇನು ಸಂಸ್ಕರಣಾ ಘಟಕದ ಕುರಿತು ಮಾಹಿತಿ ಪಡೆದುಕೊಂಡರು.
ತುಮಕೂರು ಜೇನು ಸಾಕಣಿಕೆದಾರರ ಸಹಕಾರ ಸಂಘದ ಅಧ್ಯಕ್ಷ ಪರಮೇಶ್ವರ, ಉಪಾಧ್ಯಕ್ಷ ತಿಪ್ಪೆಸ್ವಾಮಿ, ನಿರ್ದೇಶಕರಾದ ಚಂದ್ರಶೇಖರ್, ಆರ್ ಉಮೇಶ್, ರವೀಶ್, ಅನಂತಮೂರ್ತಿ ಅವರು ಜೇನು ಸಂಸ್ಕರಣ ಘಟಕ ಮತ್ತು ಸಂಸ್ಕರಿಸಿದ ಜೇನಿನ ಕ್ಯಾಲಿಟಿ ಕುರಿತು ಮಾಹಿತಿ ಪಡೆದು ಕೊಂಡರು. ದ.ಕ.ಜೇನು ವ್ಯವಸಾಯಗಾರರ ಸಹಕಾರ ಸಂಘದ ಅಧ್ಯಕ್ಷ ಚಂದ್ರಕೋಲ್ಚಾರ್, ನಿರ್ದೇಶಕರಾದ ಪಾಂಡುರಂಗ ಹೆಗ್ಡೆ, ಕಾರ್ಯನಿರ್ವಹಣಾಧಿಕಾರಿ ತಿಮ್ಮಯ್ಯ ಮತ್ತು ಸಿಬಂದಿಗಳು ಜೇನು ಸಂಸ್ಕರಣೆಯ ಕುರಿತು ಮಾಹಿತಿ ನೀಡಿದರು.