Home_Page_Advt
Home_Page_Advt
Home_Page_Advt

ಪುತ್ತೂರಿನಲ್ಲಿ ಬ್ಲಡ್ ಡೋನರ್ಸ್ ವತಿಯಿಂದ 227 ನೇ ರಕ್ತದಾನ ಶಿಬಿರ


ಪುತ್ತೂರು:  ಕೆ ಎಲ್ 17 ಮೆನ್ಸ್ ಫ್ಯಾಶನ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಜಂಟಿ ಸಹಯೋಗದಲ್ಲಿ ಇಂಡಿಯನ್ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಮಂಗಳೂರು ಇದರ ಸಹಕಾರದೊಂದಿಗೆ ಮಾದರಿ ರಕ್ತದಾನ ಶಿಬಿರವು ಪುತ್ತೂರಿನ ಕೆ ಎಸ್ ಆರ್ ಟಿ ಸಿ ಬಳಿಯಿರುವ ಹಿಂದೂಸ್ಥಾನ್ ಕಾಂಪ್ಲೆಕ್ಸ್ ನಲ್ಲಿ ನಡೆಯಿತು. ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ 227 ನೇ ರಕ್ತದಾನ ಶಿಬಿರದಲ್ಲಿ ಒಟ್ಟು 74 ಮಂದಿಯಿಂದ ರಕ್ತದಾನ ನಡೆಯಿತು.

ಶಿಬಿರವನ್ನು ದುವಾದ ಮೂಲಕ ಉದ್ಘಾಟಿಸಿದ ಆರ್ ಜೆ ಎಂ ಬಲ್ನಾಡ್ ಇದರ ಗೌರವಾಧ್ಯಕ್ಷರಾದ ಸೈಯ್ಯದ್ ಮುಝಮ್ಮಿಲ್ ತಂಗಳ್ ಕಾಸರಗೋಡು ಅವರು ಮಾತನಾಡಿ ಇಂತಹ ಸಾಮಾಜಿಕ ಕಳಕಳಿಯ ಯುವಕರ ನಡೆಯು ಸಮುದಾಯ ಸಬಲೀಕರಣದ ಅಭ್ಯುದಯಕ್ಕೆ ಮುನ್ನುಡಿಯಾಗಲಿದೆ ಎಂದರು.

ರಕ್ತದಾನ ಶಿಬಿರವನ್ನು ಮುಹಮ್ಮದ್ ಸಲೀಂ ಇಚ್ಚಾ ಅವರು ಸಾಂಕೇತಿಕವಾಗಿ ಉದ್ಘಾಟಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ ವಹಿಸಿದ್ದರು.

ಈ ಸಂದರ್ಭದಲ್ಲಿ ಫಹಾದ್ ಇಂಜಿನಿಯರಿಂಗ್ ಇದರ ಮಾಲಕರಾದ ಮುಹಮ್ಮದ್ ನಾಸೀರ್ ,ಎಸ್ ಡಿ ಪಿ ಐ ಪುತ್ತೂರು ನಗರಾಧ್ಯಕ್ಷರಾದ ಬಶೀರ್ ಕೂರ್ನಡ್ಕ ,ಬ್ಲಡ್ ಡೋನರ್ಸ್ ಮಂಗಳೂರು ಪ್ರಧಾನ ಕಾರ್ಯದರ್ಶಿಗಳಾದ ನವಾಝ್ ಕಲ್ಲರಕೋಡಿ ,ಐವಾ ಫ್ಯಾಶನ್ ಇದರ ಮಾಲಕರಾದ ಭಾತಿಷ ಬಲ್ನಾಡ್ , ಕೆ ಎಲ್ 17 ಇದರ ಮಾಲಕರಾದ ಮಂಚು ಕೆ ಎಲ್ 17 ,ಅನ್ಸಾರುಲ್ ಯುವಕ ಸಮಿತಿ ಬಪ್ಪಳಿಗೆಯ ಅಧ್ಯಕ್ಷರಾದ ಮೋನು ಬಪ್ಪಳಿಗೆ,ರಝಾಕ್ ಬಿ ಎಚ್ ಬಪ್ಪಳಿಗೆ,ಆಸಿಫ್ ಬಲ್ನಾಡ್ ,ಹಬೀಬ್ ಪುತ್ತೂರು,ಅಝೀಝ್ ಬಲ್ನಾಡ್,ಸಿನಾನ್ ಡಿಕ್ಯೂ,ಶರೀಫ್ ಬಲ್ನಾಡ್ ,ಆಶಿಕ್ ಬನ್ನೂರು,ಬ್ಲಡ್ ಡೋನರ್ಸ್ ಕಾರ್ಯನಿರ್ವಾಹಕರುಗಳಾದ ಇಮ್ರಾನ್ ಉಪ್ಪಿನಂಗಡಿ,ಫಾರೂಕ್ ಆತೂರು,ಸಲಾಂ ಚೊಂಬುಗುಡ್ಡೆ ,ಅಝೀಝ್ ಕಲ್ಲರಕೋಡಿ ಉಪಸ್ಥಿತರಿದ್ದರು. ಬ್ಲಡ್ ಡೋನರ್ಸ್ ಮಂಗಳೂರು ಕಾರ್ಯನಿರ್ವಾಹಕರಾಗಿರುವ ರಝಾಕ್ ಸಾಲ್ಮರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.