ಜ.2: ಕಬಕದಲ್ಲಿ ಸುನ್ನಿ ಮಹಾ ಸಮ್ಮೇಳನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್‌ಗೆ ಪೌರ ಸನ್ಮಾನ

ಪುತ್ತೂರು: ಕರ್ನಾಟಕ ರಆಜ್ಯ ಸುನ್ನೀ ಯುವಜನ ಸಂಘದದ ಕಬಕ ಶಾಖೆಯ ವತಿಯಿಂದ ಸುನ್ನೀ ಮಹಾ ಸಮ್ಮೇಳವು ಜ.೨ರಂದು ಕಬಕದ ಬಗ್ಗುಮೂಲೆ ಮೈದಾನದ ಎ.ಪಿ.ಎಸ್ ಮಹಮ್ಮದ್ ತಂಙಳ್ ವೇದಿಕೆಯಲ್ಲಿ ಜರುಗಲಿದ್ದು, ಸಮ್ಮೇಳನದಲ್ಲಿ ಕರ್ನಾಟಕ ಸುನ್ನೀ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಅವರಿಗೆ ಪೌರ ಸನ್ಮಾನ ನಡೆಯಲಿದೆ ಎಂದು ಮಿತ್ತೂರು ಕೆ.ಜಿ.ಎನ್ ಮುದರ್ರಿಸ್ ಹುಸೈನ್ ಮುಈನಿ ಮಾರ್ನಾಡ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಮುಂದಿನ ಮಾರ್ಚ್ ತಿಂಗಳಲ್ಲಿ ಮೂವತ್ತನೇ ವಾರ್ಷಿಕೋತ್ಸವ ಆಚರಿಸಲಿರುವ ಮಾಣಿ ದಾರುಲ್ ಇರ್ಶಾದ್ ವಿದ್ಯಾಸಂಸ್ಥೆಯ ಸಾರಥಿಯಾಗಿರುವ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಅವರಿಗೆ ನಡೆಯುವ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಯ್ಯಿಯ್ಯುತುಲ್ ಉಲಮಾ ಅಧ್ಯಕ್ಷ ರಈಸುಲ್ ಉಲಮಾ ಇ ಸುಲೈಮಾನ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಉಳ್ಳಾಲ ಖಾಝಿ ಖುರ್ರತುಸ್ಸಾದತ್ ಸಯ್ಯದ್ ಫಝಲ್ ಕೋಯಮ್ಮ ಅಲ್ ಬುಖಾರಿ ಕೂರತ್ ಪ್ರಾರ್ಥನೆ ನೆರೆವೇರಿಸಲಿದ್ದು, ಅಖಿಲ ಭಾರತ ಸುನ್ನಿ ಉಲಮಾ ಒಕ್ಕೂಟದ ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಮುಖ್ಯ ಭಾಷಣ ಮಾಡಲಿದ್ದಾರೆ. ಸಮಸ್ತ ಕೇರಳ ಜಂಇಯ್ಯುತುಲ್ ಉಲಮಾದ ಉಪಾಧ್ಯಕ್ಷ ತಾಜುಶ್ಮರೀಅಃ ಎಂ.ಅಲಿ ಕುಂಞಿ ಮುಸ್ಲಿಯಾರ್ ಆಶೀರ್ವಚನ ನೀಡಲಿದ್ದಾರೆ ಎಂದ ಅವರು ಕರ್ನಾಟಕ ಜಂಯಿಯ್ಯುತುಲ್ ಉಲಮಾ ಅಧ್ಯಕ್ಷ ಉಡುಪಿ ಚಿಕ್ಕಮಗಳೂರು, ಹಾಸನ ಸಂಯುಕ್ತ ಖಾಝಿ ತಾಜುಲ್ ಫುಕಹಾಹ್ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಸಮಸ್ತ ಕೇರಳ ಜಂಯ್ಯಿಯ್ಯತುಲ್ ಉಲಮಾ ದ ಕೇಂದ್ರ ಮುಶಾವರ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಅವರು ಹೇಳಿದರು. ಸಮಾರಂಭದಲ್ಲಿ ಯೇನಪೋಯ ವಿವಿಯ ಕುಲಪತಿ ವೈ ಅಬ್ದುಲ್ಲ ಕುಂಞಿ, ದ.ಕ. ಮುಸ್ಲಿಮ್ ಜಮಾಅತ್ ಕಾರ್ಯಾಧ್ಯಕ್ಷ ಎಸ್.ಎಮ್.ರಶೀದ್ ಹಾಜಿ, ಶಾಸಕ ಯು.ಟಿ.ಖಾದರ್, ಮಮ್ತಾಝ್ ಅಲಿ ಕೃಷ್ಣಾಪುರ, ಯು.ಟಿ ಇಫ್ತಿಕಾರ್ ಸಹಿತ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ಹುಸೈನ್ ಮುಈನಿ ಮಾರ್ನಾಡ್ ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಆದಂ ಹಾಜಿ ಪಡೀಲ್, ಎಸ್.ವೈ.ಎಸ್ ಕಬಕ ಶಾಖೆಯ ಅಧ್ಯಕ್ಷ ಸಿದ್ದೀಕ್ ಹಾಜಿ ಕಬಕ, ಸ್ವಾಗತ ಸಮಿತಿ ವೈಸ್ ಕನ್ವಿನರ್ ಶಾಕಿರ್ ಹಾಜಿ ಮಿತ್ತೂರು, ಎಸ್.ವೈ.ಎಸ್ ಕಬಕ ಶಾಖೆಯ ಪ್ರ.ಕಾರ್ಯದರ್ಶಿ ಹಮೀದ್ ತಾಜ್‌ಮಹಲ್ ಉಪಸ್ಥಿತರಿದ್ದರು.

ದರ್ಸ್ ರಂಗದ ಸಾಧಕ
ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಅವರು ಆರಂಭದಲ್ಲಿ ಧಾರ್ಮಿಕ ವಿದ್ಯಾಭ್ಯಾಸ ನೀಡಲು ವಿದ್ಯಾಸಂಸ್ಥೆಯ ಕೊರತೆಯಿದ್ದರೂ ಮಸೀದಿಗಳಲ್ಲಿ ತನ್ನ ಕಾರ್ಯವನ್ನು ಆರಂಭಿಸಿದ್ದರು. ಮಂಚಪ್ಪಾಡಿ, ಸೂರಿಂಜೆ, ಪಾಣೆಮಂಗಳೂರಿನಲ್ಲಿ ಧಾರ್ಮಿಕ ವಿದ್ಯಾಭ್ಯಾಸ ನೀಡಿದ ಅವರು ಮಾಣಿಯಲ್ಲಿ ದಾರುಲ್ ಇರ್ಶಾದ್ ವಿದ್ಯಾಸಂಸ್ಥೆಯ ನಿರ್ಮಾಣದ ಬಳಿಕ ಅಲ್ಲೇ ಪೂರ್ಣಕಾಲಿಕ ಸೇವೆ ನೀಡುತ್ತಿದ್ದು, ಇದೀಗ ದರ್ಸ್ ರಂಗದಲ್ಲ ಅವರು ೫೦ ವರ್ಷ ಪೂರೈಸಿದ್ದಾರೆ – ಹುಸೈನ್ ಮುಈನಿ ಮಾರ್ನಾಡ್ ಮುದರ್ರಿಸ್ ಕೆ.ಜಿ.ಎನ್ ಮಿತ್ತೂರು

About The Author

Related posts

1 Comment

  1. ರಾಫಿ ನಗರ

    Sir ಸ್ವಲ್ಪ ಬದಲಾಯಿಸಿ

    ಕರ್ನಾಟಕ ಜಂಯಿಯ್ಯತುಲ್ ಉಲಮಾದ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಬದಲು ,ಸಮಸ್ತ ಕೇರಳ ಜಂಯ್ಯಿಯ್ಯತುಲ್ ಉಲಮಾ ದ ಕೇಂದ್ರ ಮುಶಾವರ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಎಂದಾಗಬೇಕು

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.