HomePage_Banner
HomePage_Banner
HomePage_Banner
HomePage_Banner

ಮಚ್ಚಿಮಲೆ, ಬೂತ್ 108ರಲ್ಲಿ ಭಾರತ್ ಮಾತಾ ಪೂಜೆ, ಪೌರತ್ವ ತಿದ್ದುಪಡಿ ಕಾಯ್ದೆ ಅರಿವು

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಭಾರತ್ ಮಾತಾ ಪೂಜನಾ ಕಾರ್ಯಕ್ರಮ ಬಿಜೆಪಿ ಬೂತ್ 108ರಲ್ಲಿ ಜ.9ರಂದು ರಾತ್ರಿ ಮಚ್ಚಿಮಲೆ ಬೊಳ್ಳಾಣದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜನಜಾಗೃತಿ ಅಭಿಯಾನ ನಡೆಯಿತು.

ಬಿ.ಜೆ.ಪಿ. ನಗರ ಮಂಡಲದ ನಿಯೋಜಿತ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್ ರವರು ದಿಕ್ಸೂಚಿ ಭಾಷಣ ಮಾಡಿದರು. ನರೇಂದ್ರ ಮೋದಿ ಕಾಲಾವಧಿಯಲ್ಲಿ ಮಾಡಲ್ಪಟ್ಟ ಅದ್ಭುತ ಕಾರ್ಯಗಳಾದ ನೋಟ್ ಬ್ಯಾನ್, ಜಿ.ಎಸ್.ಟಿ ಜ್ಯಾರಿ, 370ನೇ ವಿಧಿ ರದ್ಧತಿ, ತ್ರಿವಳಿ ತಲಾಕ್ ರದ್ದತಿ, ರಾಮ ಮಂದಿರ ನಿರ್ಮಾಣ ಅಂತಿಮ ತೀರ್ಪು ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದ ಅವರು ಪೌರತ್ವ ಕಾಯ್ದೆ ಕುರಿತು ಭಾರತೀಯರಾದ ನಾವೆಲ್ಲರೂ ಒಗ್ಗಟ್ಟಾಗಿ ಬೆಂಬಲಿಸಬೇಕೆಂದರು. ಕಾರ್ಯಕ್ರಮದ ಪ್ರಾರಂಭದಲ್ಲಿ ದೀಪ ಪ್ರಜ್ವಲನೆ ಮಾಡಿ ಭಾರತ್ ಮಾತಾ ಭಾವಚಿತ್ರಕ್ಕೆ ಮಾತೆಯರಿಂದ ಪುಷ್ಪಾರ್ಚನೆ, ವಂದೇ ಮಾತರಂ ಪ್ರಾರ್ಥನೆ ನಡೆಯಿತು. ಭಾರತ್ ಮಾತಾ ಪೂಜನಾ ಕಾರ್ಯಕ್ರಮದ ಬಗ್ಗೆ ನಗರಸಭಾ ಸದಸ್ಯೆ ದೀಕ್ಷಾ ಪೈ ವಿವರಿಸಿದರು.

ಮಿಸ್ ಕಾಲ್ ಅಭಿಯಾನ:
ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಮೊ: 8866288662 ಸಂಖ್ಯೆಗೆ ಕರೆ ಮಾಡುವ ಮಾಡುವ ಮೂಲಕ ಸಾಮೂಹಿಕ ಮಿಸ್ ಕಾಲ್ ಅಭಿಯಾನ ನಡೆಸಲಾಯಿತು. ಬೂತ್ ಅಧ್ಯಕ್ಷ ಭರತ್ ಕುಲಾಲ್ ಬೊಳ್ಳಾಣ, ಪ್ರ. ಕಾರ್ಯದರ್ಶಿ ಜಯಪ್ರಕಾಶ್ ಆಚಾರ್ಯ, ಸಮಿತಿಯ ಪದಾಧಿಕಾರಿಗಳು, ಸದಸ್ಯರು ಅಲ್ಲದೇ ನಲುವತ್ತೈದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಉಪಸ್ಥಿತರಿದ್ದರು. ಸತೀಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ಪ್ರಕಾಶ್ ಆಚಾರ್ಯ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.