HomePage_Banner
HomePage_Banner
HomePage_Banner
HomePage_Banner

ಬಿ.ಸಿ.ರೋಡ್: ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳ ವಿವಿಧೋದ್ದೇಶ ಸಹಕಾರಿ ಸಂಘದ ಶಾಖೆ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳ ವಿವಿಧೋದ್ದೇಶ ಸಹಕಾರಿ ಸಂಘದ ಬಿ.ಸಿ.ರೋಡ್ ಶಾಖೆಯ ಸ್ವಂತ ಕಛೇರಿಯು ಬಿ.ಸಿರೋಡ್‌ನ ಕ್ರಿಸ್ಟಲ್ ಫ್ಲಾಝದಲ್ಲಿ ಜ.೧೦ರಂದು ಶುಭಾರಂಭಗೊಂಡಿತು.  ಕಚೇರಿಯ ಉದ್ಘಾಟನೆಯನ್ನು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ನೆರವೇರಿಸಿ ಸಂದರ್ಭೋಚಿತವಾಗಿ ಮಾತನಾಡಿ, ಸಂಸ್ಥೆಗೆ ಶುಭಹಾರೈಸಿದರು.

ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಪುರುಷೋತ್ತಮ ಕೆ.ಭಂಡಾರಿ ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಸ್ಥೆಯ ಬೆಳವಣಿಗೆ, ಸಾಧನೆ ಬಗ್ಗೆ ತಿಳಿಸಿ ಗ್ರಾಹಕರ ಸಹಕಾರ ಕೋರಿದರು.  ಕ್ಯಾಂಪ್ಕೋ ಲಿ.ನ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ದೀಪ ಬೆಳಗಿಸಿ ಉದ್ಘಾಟಿಸಿ, ಸಂಸ್ಥೆಗೆ ಶುಭಹಾರೈಸಿದರು.

ಬಂಟ್ವಾಳ ತಾ.ಪಂ.ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ, ದ.ಕ. ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರಾದ ಪ್ರವೀಣ್ ಬಿ.ನಾಯಕ್, ಎಲ್‌ಐಸಿ ಬಂಟ್ವಾಳ ಶಾಖೆಯ ಮುಖ್ಯ ಶಾಖಾಧಿಕಾರಿ ಪಿ.ಸಿ.ನಾಯಕ್, ಕ್ರಿಸ್ಟಲ್ ಫ್ಲಾಝ ಬಿ.ಸಿರೋಡ್‌ನ ಪಾಲುದಾರರಾದ ಪಿ.ಎ.ಲತೀಫ್, ಮೊಹಮ್ಮದ್ ಇಕ್ಬಾಲ್ ಬಾವ, ಎಲ್‌ಐಸಿ ಬೆಳ್ತಂಗಡಿ ಸೆಟಲೈಟ್ ಕಚೇರಿ ಶಾಖಾಧಿಕಾರಿ ದೇವಪ್ಪ ನಾಯ್ಕ್ ಇವರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿತು.

ಬಿ.ಸಿ.ರೋಡ್ ಶಾಖೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಕಾಂತ್ ಸಿ.ಹೆಚ್., ಶಾಖಾಧಿಕಾರಿ ಎಸ್.ರಾಮಯ ಶೆಟ್ಟಿ, ನಿರ್ದೇಶಕ ಮಂಡಳಿಯ ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಕಲ್ಲಾಡಿ, ಸದಸ್ಯರಾದ ಸಿ.ವಿ..ಭಟ್, ಎಂ.ಜಯರಾಮ ಭಂಡಾರಿ, ಎ.ವಿಶ್ವನಾಥ ಗಟ್ಟಿ, ಸ್ಟ್ಯಾನಿ ಡಿ’ಸೋಜಾ, ಕಾಶೀನಾಥ ಪುತ್ರನ್, ಕೊಡಂಗೆ ಬಾಲಕೃಷ್ಣ ನಾಯ್ಕ್, ಹೆಚ್.ಸುಬ್ರಹ್ಮಣ್ಯ ಭಟ್, ಲೀಲಾವತಿ ಕೆ., ಸುಷ್ಮಾ ಜನಾರ್ದನ್, ಪೀಟರ್ ಎ. ಪಿಂಟೋ, ಶ್ರೀನಿವಾಸ್ ಕಣ್ವತೀರ್ಥ, ಕಿಶೋರ್ ಕುಟಿನ್ಹಾ ಹಾಗೂ ಚಂದ್ರಕಾಂತ್, ಸಿಬ್ಬಂದಿಗಳಾದ ವಂದಿತಾ ಜೆಸಿಂತಾ ಮೊಂತೆರೋ, ವೀಣಾ ಕುಮಾರಿ ಬಿ., ಉಪಸ್ಥಿತರಿದ್ದು ವಿವಿಧ ಕಾರ್‍ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಸ್ವಾಗತಿಸಿ, ನಿರ್ದೇಶಕರಾದ ವಿಶ್ವನಾಥ ಗಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.