HomePage_Banner
HomePage_Banner
HomePage_Banner
HomePage_Banner

ಆಲಂಕಾರಿನಲ್ಲಿ ಲಾರಿಯ ಬ್ಯಾಟರಿ ಕಳ್ಳತನ- ದೈವಕ್ಕೆ ಮೊರೆ

Puttur_Advt_NewsUnder_1
Puttur_Advt_NewsUnder_1


ಆಲಂಕಾರು : ಕಡಬ ಠಾಣಾ ವ್ಯಾಪ್ತಿಯ ಆಲಂಕಾರು ಪೇಟೆಯ ವಠಾರದಲ್ಲಿ ವಾಹನಗಳ ಬ್ಯಾಟರಿ ಕಳ್ಳತನದ ಪ್ರಕರಣ ವರದಿಯಾಗಿದೆ. ಜ.10ರಂದು ರಾತ್ರಿ ವಾಹನಗಳ ಬ್ಯಾಟರಿ ಕಳವು ನಡೆದಿದ್ದು ಪ್ರಕರಣದ ಬಗ್ಗೆ ವಾಹನ ಮಾಲಿಕರು ಪೊಲೀಸ್ ದೂರು ದಾಖಲಿಸದೆ ಆಲಂಕಾರು ಬುಡೇರಿಯಾ ದೈವಗಳಿಗೆ ಹರಿಕೆಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಆಲಂಕಾರು ಶ್ರೀ ಉಳ್ಳಾಲ್ತಿ ಶಾಮಿಯಾನದ ಲಾರಿಯನ್ನು ರಾತ್ರಿ ಶಾಮಿಯಾನದ ಅಂಗಡಿಯ ವಠಾರದಲ್ಲಿ ನಿಲ್ಲಿಸಲಾಗಿತ್ತು. ಮರುದಿನ ಶಾಮಿಯಾನದ ಮಾಲಕ ಪಜ್ಜಡ್ಕದ ಶಕ್ತಿಪ್ರಸಾದ್ ಬೆಳಿಗ್ಗೆ ಬಂದು ಲಾರಿ ಚಾಲನೆಗೆ ತೊಡಗಿದಾಗ ಬ್ಯಾಟರಿ ಕಳ್ಳತನವಾದ ಬಗ್ಗೆ ತಿಳಿದು ಬಂದಿದೆ. ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಿಸದೆ ದೈವದ ಮೊರೆ ಹೋಗಲು ತೀರ್ಮಾನಿಸಿದ್ದು ಸಂಕ್ರಮಣದ ದಿನದಂದು ಬುಡೇರಿಯಾ ಉಳ್ಳಾಲ್ತಿ ಹಾಗೂ ಶಿರಾಡಿ ದೈವದ ಕ್ಷೇತ್ರದಲ್ಲಿ ಕಳವುಗೈದಿರುವ ಕಳ್ಳರಿಗೆ ಕಠಿಣ ಶಿಕ್ಷೆ ನೀಡುವಂತೆ ಹರಿಕೆ ಮಾಡಲಾಗುವುದೆಂದು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.