Home_Page_Advt
Home_Page_Advt
Home_Page_Advt

ಉಪ್ಪಿನಂಗಡಿ: ರಸ್ತೆ ಒತ್ತುವರಿ, ತೆರವಿಗೆ ಆಗ್ರಹಿಸಿ ಲೋಕಾಯುಕ್ತಕ್ಕೆ ದೂರು

  • ಸ್ಥಳ ತನಿಖೆ ಮಾಡಿ, ಕ್ರಮಕ್ಕೆ ಬರೆಯಲಾಗಿದೆ – ಚಂದ್ರನಾಯ್ಕ್


ಉಪ್ಪಿನಂಗಡಿ: ಉಪ್ಪಿನಂಗಡಿ ಗ್ರಾಮದ ನೂಜಿಪಾದಾಳ-ಕುಕ್ಕಮಜಲು ರಸ್ತೆಯನ್ನು ಕೆಲ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿ ತಡೆಗೋಡೆ ನಿರ್ಮಿಸಿದ್ದು, ಇದರಿಂದಾಗಿ ಸಂಚಾರಕ್ಕೆ ತೊಡಕು ಉಂಟಾಗಿದ್ದು, ಇದನ್ನು ತೆರವುಗೊಳಿಸಲು ಆದೇಶಿಸುವಂತೆ ಕೋರಿ ಉಪ್ಪಿನಂಗಡಿ ಗ್ರಾಮದ ಅರ್ತಿಲ ನಿವಾಸಿ ಬಾಲಸುಬ್ರಹ್ಮಣ್ಯ ಹೊಳ್ಳ ಎಂಬವರು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.

ಈ ರಸ್ತೆ ಒತ್ತುವರಿ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್‍ಯನಿರ್ವಹಣಾಧಿಕಾರಿಯವರಿಗೆ ದೂರು ಸಲ್ಲಿಸಿದ್ದು, ಅದರಂತೆ ಅವರು ೨೦೧೪ ಜುಲೈ ೨೧ರಂದು ಪುತ್ತೂರು ತಾಲೂಕು ಪಂಚಾಯಿತಿ ಕಾರ್‍ಯನಿರ್ವಹಣಾಧಿಕಾರಿಗೆ ಪತ್ರ ಬರೆದು ನಿಯಮಾನುಸಾರ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು. ಆ ಪ್ರಕಾರ ೨೦೧೪ ಜುಲೈ ೨೩ರಂದು ತಹಸೀಲ್ದಾರ್ ೨೫ ಲಿಂಕ್ಸ್ (ಅಂದಾಜು ೫ ಮೀಟರ್) ಅಗಲದ ರಸ್ತೆಯನ್ನು ಪಹಣಿ ೧೧ರಲ್ಲಿ ದಾಖಲಿಸಿ ಆದೇಶಿಸಿರುತ್ತಾರೆ.

ಆದರೆ ಈ ರೀತಿಯ ಕಾನೂನುಬದ್ಧವಾದ ಆದೇಶ ಇದ್ದರೂ ತಹಸೀಲ್ದಾರ್ ಮತ್ತು ಪಿಡಿಓ ರಸ್ತೆ ತೆರವಿಗೆ ಯಾವುದೇ ಕ್ರಮಕೈಗೊಳ್ಳದೆ ತೀರಾ ನಿರ್ಲಕ್ಷತನ ತೋರುತ್ತಿದ್ದಾರೆ. ಆದ ಕಾರಣ ಸಾರ್ವಜನಿಕ ಹಿತದೃಷ್ಠಿಯಿಂದ ಈ ರಸ್ತೆ ಒತ್ತುವರಿಯನ್ನು ತೆರವು ಮಾಡಿ ರಸ್ತೆಯನ್ನು ಸಂಚಾರ ಮುಕ್ತ ಮಾಡುವರೇ ಸಂಬಂಧಪಟ್ಟ ಇಲಾಖೆಗೆ ಆದೇಶಿಸುವಂತೆ ದೂರಿನಲ್ಲಿ ತಿಳಿಸಲಾಗಿದೆ.

ಸ್ಥಳ ತನಿಖೆ ಮಾಡಿ, ಕ್ರಮಕ್ಕೆ ಬರೆಯಲಾಗಿದೆ:
ಈ ಬಗ್ಗೆ ಉಪ್ಪಿನಂಗಡಿ ಗ್ರಾಮಕರಣಿಕರ ಚಂದ್ರನಾಯ್ಕ್ ಪ್ರತಿಕ್ರಿಯಿಸಿ “ಲೋಕಾಯುಕ್ತರಿಂದ ಬಂದ ನಿರ್ದೇಶನ, ತಹಸೀಲ್ದಾರ್ ಆದೇಶದಂತೆ ಸ್ಥಳ ಪರಿಶೀಲನೆ ಮಾಡಿದ್ದು, ಒತ್ತುವರಿ ಮಾಡಿರುವ ವ್ಯಕ್ತಿಗಳಿಗೆ ಸೂಚನೆ ನೀಡಿದ್ದು, ಆ ಪ್ರಕಾರ ಗ್ರಾಮ ಪಂಚಾಯಿತಿ ರಸ್ತೆ ಅಭಿವೃದ್ಧಿ ಮಾಡುವ ಸಂದರ್ಭದಲ್ಲಿ ತೆರವು ಮಾಡಿಕೊಡುವ ಬಗ್ಗೆ ಒತ್ತುವರಿದಾರರು ಒಪ್ಪಿಕೊಂಡಿದ್ದಾರೆ. ಅದಾಗ್ಯೂ ರಸ್ತೆ ಬದಿಯಲ್ಲಿ ೨ ಅಪಾಯಕಾರಿ ಮರ ಇದ್ದು, ಇದನ್ನು ತೆರವು ಮಾಡುವಂತೆ ತಹಸೀಲ್ದಾರ್ ಮೂಲಕ ಅರಣ್ಯ ಇಲಾಖೆಗೆ ಕೇಳಿಕೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.