Home_Page_Advt
Home_Page_Advt
Home_Page_Advt

ವಿವೇಕಾನಂದ ಕಾಲೇಜಿನಲ್ಲಿ ಪ್ರತಿಭಾ ದಿನೋತ್ಸವ

  • ವಿದ್ಯಾರ್ಥಿಗಳ ಕಲಾ ಪ್ರೌಢಿಮೆ ಅನಾವರಣಗೊಳ್ಳಲಿ: ಡಾ. ಪೀಟರ್ ವಿಲ್ಸನ್ ಪ್ರಭಾಕರ್

ಪುತ್ತೂರು: ಜೀವನ ಎಂದರೆ ಹುಟ್ಟು ಸಾವಿನ ಮಧ್ಯೆ ಇರುವ ಕಾಲ. ಈ ಸಂದರ್ಭದಲ್ಲಿ ಬದುಕಿನ ಸಾಗರದಲ್ಲಿ ಕಲಿಯುವುದು ಸಾಕಷ್ಟಿದೆ. ವಿದ್ಯಾರ್ಥಿಗಳ ಸೃಜನಶೀಲತೆ ಹಾಗೂ ಕಲಾ ಪ್ರೌಢಿಮೆಯನ್ನು ಅನಾವರಣಗೊಳಿಸಲು ಪ್ರತಿಭಾ ದಿನಾಚರಣೆ ಸಹಕಾರಿ ಎಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಕ್ಯಾಂಪಸ್‌ನ ಕೇಶವ ಸಂಕಲ್ಪ ಸಭಾಂಗಣದಲ್ಲಿ ಕಾಲೇಜಿನ ಲಲಿತ ಕಲಾ ಸಂಘದ ಆಶ್ರಯದಲ್ಲಿ ಜ.14 ರಂದು ನಡೆದ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ವಾರ್ಷಿಕ ಪ್ರತಿಭಾ ದಿನೋತ್ಸವವನ್ನು ಉದ್ಘಾಟಿಸಿ ಶುಭಹಾರೈಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರಿಗೆ ಹೊಸತನ್ನು ಆಲೋಚಿಸುವಂತೆ ಮಾಡುವುದರೊಂದಿಗೆ ವೀಕ್ಷಕನ ಮನೋಶಕ್ತಿಯನ್ನು ಹಾಗೂ ಗ್ರಹಿಸುವ ಶಕ್ತಿಯನ್ನು ಹೆಚ್ಚಿಸುವಂತೆ ಮಾಡುತ್ತದೆ ಎಂದು ಹೇಳಿದರಲ್ಲದೆ ಅದೇ ರೀತಿ ನಮ್ಮಲ್ಲಿರುವ ವಿದ್ಯೆಯನ್ನು ಹಂಚಿಕೊಂಡಾಗ ಅನುಭವ ಹೆಚ್ಚಾತ್ತದೆ. ಸೂರ್ಯನ ಬೆಳಕಿನ ಶಾಖದ ಮೂಲಕ ಶಕ್ತಿ ಉತ್ಪಾದಿಸುವ ಬದಲು ಬೆಳಕನ್ನು ಮಾರ್ಗದರ್ಶನ ರೂಪದಲ್ಲಿ ಬಳಸಿಕೊಳ್ಳಬೇಕು. ಅದೇ ರೀತಿ ಸಮುದ್ರ ಎಂಬುದು ಎಲ್ಲರಿಗೂ ಒಂದೇ ಅದನ್ನು ಯಾವ ರೀತಿಯನ್ನು ಸದುಪಯೋಗಿಸುತ್ತೇವೆ ಎಂಬುದು ಅವರವರಿಗೆ ಬಿಟ್ಟದ್ದು ಎಂದು ಹೇಳಿದರು.

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಾನಿಕ್ಸ್ ವಿಭಾಗದ ಉಪನ್ಯಾಸಕ ಹರಿಪ್ರಸಾದ್, ವಿವೇಕಾನಂದ ಪದವಿಪೂರ್ವ ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ನಂದಿನಿ, ಪುತ್ತೂರಿನ ಕಲಾವಿದೆ ವಿಧೂಷಿ ಮಂಜುಳಾ ಸುಬ್ರಹ್ಮಣ್ಯ ಪ್ರತಿಭಾ ದಿನಾಚರಣೆಯ ತೀರ್ಪುಗಾರರಾಗಿ ಸಹಕರಿಸಿದರು.

ಲಲಿತ ಕಲಾ ಸಂಘದ ಸಹ ಸಂಯೋಜಕ ಡಾ. ಮನಮೋಹನ, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು ಉಪನ್ಯಾಸಕ, ಉಪನ್ಯಾಸಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಲಲಿತ ಕಲಾ ಸಂಘದ ಸಂಯೋಜಕಿ ಡಾ. ದುರ್ಗಾರತ್ನ ಸ್ವಾಗತಿಸಿದರು.

ಸಾಂಸ್ಕೃತಿಕ ಪ್ರತಿಭೆಗಳ ಅನಾವರಣ
ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ತರಗತಿವಾರು ಸಾಂಸ್ಕೃತಿಕ ಕಾರ್ಯಕ್ರಮ ಬೆಳಗ್ಗೆಯಿಂದ ಸಂಜೆಯ ತನಕ ನಿರಂತರವಾಗಿ ನಡೆಯಿತು. ವಿವಿಧ ವಿಭಾಗಗಳ ವಿದ್ಯಾರ್ಥಿಗಳ ಸೃಜಶೀಲತೆಯ ವೈವಿಧ್ಯಮಯ ಕಾರ್ಯಕ್ರಮಗಳು ಎಲ್ಲರನ್ನು ಆಕರ್ಷಿಸಿತು. ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವಂತಹ ಭರತನಾಟ್ಯ, ಮೋಹಿನಿಯಾಟಂ, ಶಾಸ್ತ್ರೀಯ ನೃತ್ಯಗಳು ನೃತ್ಯಪ್ರಿಯರ ಇಂಗಿತವನ್ನು ನೀಗಿಸಿದರೆ. ಶಾಸ್ತ್ರೀಯ ಸಂಗೀತ, ಸಮೂಹ ಗಾಯನ, ಚಲನಚಿತ್ರದ ಹಾಡುಗಳನ್ನು ಹಾಡಿ ಗಾನ ಪ್ರಿಯರನ್ನು ಸೆಳೆದರು. ಫನ್ನಿ ಡ್ಯಾನ್ಸ್‌ಗಳ ಮೂಲಕ ಸಭಿಕರನ್ನು ರಂಜಿಸುವ ಕಾರ್ಯಕ್ರಮವಂತೂ ನೆರೆದಿದ್ದವರನ್ನು ಮನೋರಂಜನೆಯ ಲೋಕಕ್ಕೆ ಕೊಂಡೊಯ್ಯಿತು.

ಇಡೀ ಸಾಂಸ್ಕೃತಿಕ ಕಾರ್ಯಕ್ರಮದ ಮಧ್ಯೆ ದೇಶ ಭಕ್ತಿ, ರಾಷ್ಟ್ರ ಪ್ರೇಮವನ್ನು ಹುಟ್ಟಿಸುವ ಕಾರ್ಯಕ್ರಮ, ನಾಟಕ, ಮೈಮ್, ರೆಟ್ರೋ ಡ್ಯಾನ್ಸ್, ಫ್ಯೂಷನ್ ಡ್ಯಾನ್ಸ್, ಸೆಮಿ ಕ್ಲಾಸಿಕಲ್ ಫ್ಯೂಷನ್‌ಗಳ ಮೂಲಕ ಹೊಸ ನಾಟ್ಯ ವಿಧಾನಗಳನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.