Home_Page_Advt
Home_Page_Advt
Home_Page_Advt

ಬಸ್‌ಗಳಲ್ಲಿ ವಿದ್ಯಾರ್ಥಿಗಳ ನೇತಾಡಿಕೊಂಡು ಸಂಚಾರ: ಸಾರಿಗೆ ಅದಾಲತ್‌ನಲ್ಲಿ ಆರ್‌ಟಿಓ ಆನಂದ ಗೌಡ

ಪುತ್ತೂರು: ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ನೇತಾಡಿಕೊಂಡು ಹೋಗುತ್ತಿರುವುದು ಗಮನಿಸಿದ್ದು ಆವಶ್ಯಕತೆಯಿರುವಲ್ಲಿ ಹೆಚ್ಚುವರಿ ಓಡಾಟ ನಡೆಸಲು ಕ್ರಮಕೈಗೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಆನಂದ ಗೌಡ ಜ.14ರಂದು ಬನ್ನೂರು ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ ನಡೆದ ಸಾರಿಗೆ ಅದಾಲತ್‌ನಲ್ಲಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾರಿಗೆ ಅಧಿಕಾರಿ ಆನಂದ ಗೌಡರವರು, ವಿದ್ಯಾರ್ಥಿಗಳು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ನೇತಾಡಿಕೊಂಡು ಹೋಗುತ್ತಿರುವ ಬಗ್ಗೆ ದೂರುಗಳು ಬಂದಿದೆ. ಈ ನಿಟ್ಟಿನಲ್ಲಿ ನಾನೇ ಖುದ್ದು ಪರಿಶೀಲನೆ ನಡೆಸಿದ್ದೇನೆ. ಕೊಳ್ತಿಗೆ ಹಾಗೂ ಅಳಿಕೆ ಬಸ್‌ಗಳಲ್ಲಿ ವಿದ್ಯಾರ್ಥಿಗಳು ನೇತಾಡಿಕೊಂಡು ಹೋಗುತ್ತಿರುವುದನ್ನು ಗಮನಿಸಿದ್ದೇನೆ. ಬಸ್‌ಗಳಲ್ಲಿ ನೇತಾಡಿಕೊಂಡು ಹೋಗುವುದು ಬಹಳಷ್ಟು ಅಪಾಯಕಾರಿಯಾಗಿದೆ. ಇದಕ್ಕಾಗಿ ಕೆಲವು ಪ್ರದೇಶಗಳಿಗೆ ಹೆಚ್ಚುವರಿ ಬಸ್ ಓಡಾಟ ನಡೆಸುವಂತೆ ಸಾರಿಗೆ ಅಧಿಕಾರಿ ಆನಂದ ಗೌಡ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ತಿಳಿಸಿದರು. ಹೊಸದಾಗಿ ಬರುವ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಬಾಗಿಲು ಸರಿಯಾಗಿರುತ್ತದೆ. ನಂತರ ಬಾಗಿಲು ಇರುವುದಿಲ್ಲ. ಬಸ್‌ಗಳು ಬಾಗಿಲು ಹಾಕಿಯೇ ಸಂಚರಿಸುವಂತೆ ನಿಯಮ ಕಡ್ಡಾಯಗೊಳಿಸಬೇಕು ಎಂದು ಶ್ರೀಧರ ಗೌಡ ಅಂಗಡಿಹಿತ್ಲು ಹೇಳಿದರು.

22 ಸಾವು:
ಪುತ್ತೂರು-ಸಂಪಾಜೆ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಒಟ್ಟು 22 ಮಂದಿ ಸಾವನ್ನಪ್ಪಿದ್ದಾರೆ. ಕೆಎಸ್‌ಆರ್‌ಟಿಸಿಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹವನ್ನು ಆಯೋಜಿಸಿ, ಸುರಕ್ಷತೆಯ ಬಗ್ಗೆ ಅರಿವು ಮೂಡಿಸಿ, ಅಪಘಾತದ ಪ್ರಮಾಣವನ್ನು ಕಡಿಮೆಗೊಳಿಸುವಂತೆ ಆನಂದ ಗೌಡ ತಿಳಿಸಿದರು.

ಎಲ್‌ಇಡಿ ಹೆಡ್‌ಲೈಟ್‌ಗಳಿಗೆ ದಂಡಹಾಕಿ:
ವಾಹನಗಳಲ್ಲಿ ಅಧಿಕ ಬೆಳಕು ನೀಡುವ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಅಳವಡಿಸಲಾಗುತ್ತಿದ್ದ ಸಣ್ಣ ವಾಹನಗಳಲ್ಲಿ ಸಂಚರಿಸುವವರಿಗೆ ಭಾರಿ ತೊಂದರೆ ಉಂಟಾಗುತ್ತಿದೆ. ಎದುರಿನಿಂದ ಬರುವ ವಾಹನಗಳ ಹೆಡ್‌ಲೈಟ್‌ನಿಂದ ವೃದ್ದರು ವಾಹನದಲ್ಲಿ ಸಂಚರಿಸುವುದು ಕಷ್ಟಕರವಾಗಿದ್ದು ಇಲಾಖೆಯಿಂದ ರಾತ್ರಿ ವೇಳೆಯಲ್ಲಿ ತನಿಖೆ ನಡೆಸಿ ಅಧಿಕ ಬೆಳಕು ನೀಡುವ ವಾಹನಗಳಿಗೆ ದಂಡ ಹಾಕುವಂತೆ ಶ್ರೀಧರ ಗೌಡ ಒತ್ತಾಯಿಸಿದರು. ಕಳೆದ ಬಾರಿ ೯೦ ವಾಹನಗಳಲ್ಲಿರುವ ಹೆಡ್‌ಲೈಟ್‌ಗಳನ್ನು ಒಡೆದು ಹಾಕಿ ಕೇಸು ದಾಖಲಿಸಲಾಗಿದೆ ಎಂದು ಇಲಾಖೆಯ ಪುರುಷೋತ್ತಮ ಹೇಳಿದರು.

ನಗರದಲ್ಲಿ ಸಿಟಿ ಬಸ್ ಸಂಚರಿಸಲಿ:
ಪುತ್ತೂರು ಪುರಸಭೆ ನಗರ ಸಭೆಯಾಗಿ ಮೇಲ್ದರ್ಜೆಗೆ ಏರಿದೆ. ಈ ನಿಟ್ಟಿನಲ್ಲಿ ನಗರದೊಳಗೆ ಸಿಟ್ ಬಸ್ ಸಂಚಾರ ಪ್ರಾರಂಭಿಸುವಂತೆ ಸುಬ್ರಹ್ಮಣ್ಯ ಭಟ್ ಬಲ್ನಾಡು ಒತ್ತಾಯಿಸಿದರು. ಈ ಹಿಂದೆ ಒಂದು ಬಾರಿ ಸಿಟಿ ಬಸ್ ನಗರದೊಳಗೆ ಅಳವಡಿಸಲಾಗಿದ್ದರೂ ಅದು ಪರಿಣಾಮಕಾರಿಯಾಗಿ ಪ್ರಯೋಜನ ಪಡೆಯಲಿಲ್ಲ. ಅದಕ್ಕಾಗಿ ಅದನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದರು. ನಗರದಲ್ಲಿ ಸುಮಾರು ೪೦೦೦ದಷ್ಟು ಆಟೋ ರಿಕ್ಷಾಗಳಿದ್ದು ಸಿಟಿ ಬಸ್ ಪ್ರಾರಂಭಿಸಿದರೆ ಅವರು ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ಚಂದ್ರಶೇಖರ ಕೊಡಿಪ್ಪಾಡಿ ತಿಳಿಸಿದರು.

ಆಟೋ ರಿಕ್ಷಾಗಳಿಗೆ ಮೀಟರ್ ಅಳವಡಿಸಿ:
ಪುತ್ತೂರು ನಗರದೊಳಗೆ ಸಂಚರಿಸುವ ಆಟೋ ರಿಕ್ಷಾಗಳಿಗೆ ಮೀಟರ್ ಅಳವಡಿಸಬೇಕು. ಮೀಟರ್ ದರದಲ್ಲಿ ಪ್ರಯಾಣಿಕರಿಂದ ದರ ಪಡೆದುಕೊಳ್ಳುವಂತೆ ಶ್ರೀಜಿತ್ ಕಡಬ ತಿಳಿಸಿದರು. ಪುತ್ತೂರು ಹಳ್ಳಿಗಳ ಪ್ರದೇಶವಾಗಿರುವುದರಿಂದ ಮೀಟರ್ ದರದಲ್ಲಿ ಆಟೋ ಓಡಿಸುವುದು ಅಸಾಧ್ಯ ಎಂದು ಚಂದ್ರಶೇಖರ ಕೊಡಿಪ್ಪಾಡಿ ಹೇಳಿದರು.

ನೆಲ್ಯಾಡಿ-ಕಡಬ ಹೆಚ್ಚುವರಿ ಬಸ್:
ಕಡಬ ತಾಲೂಕು ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದ್ದು ನೆಲ್ಯಾಡಿಯಿಂದ ಕಡಬಕ್ಕೆ ಕೆಎಸ್‌ಆರ್‌ಟಿಸಿ ಬಸ್ ನಿಗದಿತ ಪ್ರಮಾಣದಲ್ಲಿದೆ. ಪುತ್ತೂರಿಂದ ಬರುವ ಬಸ್ ನೆಲ್ಯಾಡಿ ಮೂಲಕ ಕಡಬಕ್ಕೆ ಬಸ್‌ಗಳು ಸಂಚರಿಸುತ್ತಿದೆ. ಈ ನಿಟ್ಟಿನಲ್ಲಿ ನೆಲ್ಯಾಡಿಯಿಂದ ಕಡಬಕ್ಕೆ ಹೆಚ್ಚುವರಿ ಬಸ್ ಸಂಚರಿಸಲಿ. ಸಂಜೆ ೫ ಗಂಟೆಗೆ ಕಡಬ ಮರ್ದಾಳ, ಇಚ್ಲಂಪಾಡಿ ಮಾರ್ಗ ಮೂಲಕ ಪುತ್ತೂರಿಗೆ ಬಸ್‌ನ ಆವಶ್ಯಕತೆಯಿದೆ. ಧರ್ಮಸ್ಥಳದಿಂದ ಕಾಸರಗೋಡು ಸಂಚರಿಸುವ ಬಸ್ ನಿಗದಿತ ಸ್ಟೇಜ್‌ಗಳಲ್ಲಿ ನಿಲುಗಡೆ ಮಾಡುವುದಿಲ್ಲ ಎಂದು ಜನಾರ್ದನ ನೆಲ್ಯಾಡಿ ಹೇಳಿದರು.

ಸಾರಿಗೆ ಇಲಾಖೆಯ ಪುರುಷೋತ್ತಮ, ವಿವೇಕ್, ಕೆಎಸ್‌ಆರ್‌ಟಿಸಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದ್ದರು. ಸಾರಿಗೆ ಅಧಿಕಾರಿ ಆನಂದ ಗೌಡ ಸ್ವಾಗತಿಸಿ, ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.