HomePage_Banner
HomePage_Banner
HomePage_Banner
HomePage_Banner

ಮಂಗಳೂರು ವಿವಿ ಅಂತರ್ ಕಾಲೇಜು ಮಟ್ಟದ ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಕಬಡ್ಡಿ ಸ್ಪರ್ಧೆಯಾಗಿರದೆ ವೃತ್ತಿಯಾಗಿ ಮಾರ್ಪಟ್ಟಿದೆ: ಪ್ರಶಾಂತ್ ರೈ

ಪುತ್ತೂರು: ಹಿಂದೆ ಕಬಡ್ಡಿ ಕೇವಲ ಸ್ಪರ್ಧೆಯಾಗಿತ್ತು ಆದರೆ ಇಂದು ಕಬಡ್ಡಿ ಆಟ ಉದ್ಯೋಗವಾಗಿ, ವೃತ್ತಿಯಾಗಿ ಮಾರ್ಪಾಡಾಗಿದೆ. ಇದರಿಂದ ಬದುಕು ಕಟ್ಟಿಕೊಂಡವರ ಸಂಖ್ಯೆ ಅಧಿಕವಾಗಿದೆ. ಯಾವುದೇ ಕ್ಷೇತ್ರದಲ್ಲಿ ಸಾಧನೆ ಸುಲಭ ಸಾಧ್ಯವಿಲ್ಲ. ಉತ್ತಮ ಕಬಡ್ಡಿ ಆಟಗಾರನಾಗಲು ಕಠಿಣ ಶ್ರಮ, ಪ್ರಯತ್ನ ಅಗತ್ಯ ಎಂದು ಬೆಂಗಳೂರಿನ ವಿಜಯ ಬ್ಯಾಂಕ್ ಉದ್ಯೋಗಿ, ರಾಷ್ಟ್ರೀಯ ಪ್ರೊ. ಕಬಡ್ಡಿ ಆಟಗಾರ ಪ್ರಶಾಂತ್ ರೈ ಕೈಕಾರ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಕಾಲೇಜಿನ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ಎರಡು ದಿನಗಳ ಮಂಗಳೂರು ವಿವಿ ಅಂತರ್ ಕಾಲೇಜು ಮಟ್ಟದ ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಯಾವುದೇ ಕ್ಷೇತ್ರದಲ್ಲಿ ಸಾಧಕನಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುವುದು ಸುಲಭವಲ್ಲ. ಶಿಕ್ಷಣದಿಂದ ಹೊರತಾಗಿ ಕ್ರೀಡೆಯಲ್ಲಿ ಅದರಲ್ಲೂ ಕಬಡ್ಡಿ ಆಟದ ಮೂಲಕ ತನ್ನನ್ನು ತಾನು ಗುರುತಿಸಿಕೊಳ್ಳುವಂತಾಗಿದೆ. ಇದು ಓರ್ವ ಕ್ರೀಡಾಳುವಾಗಿ ಹೆಮ್ಮೆಯ ವಿಚಾರ ಎಂದು ಹೇಳಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಬಡ್ಡಿ ಭಾರತದ ದೇಸಿ ಹಾಗೂ ಮಣ್ಣಿನ ಆಟ. ವ್ಯಕ್ತಿಯ ಬುದ್ಧಿವಂತಿಕೆ, ಶಕ್ತಿ, ಪೌರುಷವನ್ನು ಒಗ್ಗೂಡಿಸುವ ವೈಶಿಷ್ಟ್ಯ ಪೂರ್ಣ ಆಟ ಕಬಡ್ಡಿಯಾಗಿದೆ. ಸ್ಪರ್ಧೆಯ ಸಮಯದಲ್ಲಿ ತಮ್ಮ ಸಂಸ್ಥೆಯನ್ನು ಪ್ರತಿನಿಧಿಸಿ ಜಯಶಾಲಿಯಾಗಬೇಕು. ಇನ್ನುಳಿದ ಸಮಯದಲ್ಲಿ ಸ್ನೇಹಿತರಂತೆ ಇರಬೇಕು ಎಂದು ಹೇಳಿದರು. ಮಂಗಳೂರು ವಿವಿಯ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕಿಶೋರ್ ಕುಮಾರ್ ಸಿ.ಕೆ. ಮಾತನಾಡಿ, ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲರಿಗೂ ಶುಭಹಾರೈಸಿ ಮಂಗಳೂರು ವಿಶ್ವವಿದ್ಯಾನಿಲಯವು ಕ್ರೀಡೆಗೆ ವಿಶೇಷ ಆದ್ಯತೆ ನೀಡುತ್ತಿದೆ. ವಿವೇಕಾನಂದ ಕಾಲೇಜು ವಿವಿಧ ಬಗೆಯ ಕ್ರೀಡೆಗಳನ್ನು ಯಶಸ್ವಿಯಾಗಿ ಸಂಘಟಿಸಿ ಉತ್ತಮ ಹೆಸರು ಪಡೆದಿದೆ ಎಂದರು. ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪಿ. ಶ್ರೀನಿವಾಸ ಪೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡಾ ಮನೋಭಾವವನ್ನು ಇಟ್ಟುಕೊಂಡು ಸ್ಪರ್ಧೆಯಲ್ಲಿ ಜಯಶಾಲಿಯಾಗುವ ಜವಾಬ್ದಾರಿ ಕ್ರೀಡಾಳುಗಳದ್ದು. ಸ್ಪರ್ಧೆ ಸ್ನೇಹದ ಬಂಧವನ್ನು ಬೆಳೆಸುವಂತಿರಬೇಕು. ಕಬಡ್ಡಿ ಕೇವಲ ಸ್ಪರ್ಧೆಯಾಗದೆ ಅದೊಂದು ಹಬ್ಬವಾಗಬೇಕು ಎಂದು ನುಡಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್, ನಿರ್ದೇಶಕ ಗುಣಪಾಲ ಜೈನ್, , ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್., ಆಡಳಿತ ಮಂಡಳಿಯ ಸದಸ್ಯ ಕೃಷ್ಣ ನಾಯ್ಕ್ ಎ., ವಿವೇಕಾನಂದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಜ್ಯೋತಿ ಕುಮಾರಿ ಪಿ.ಸಿ., ಯತೀಶ್ ಕುಮಾರ್ ಬಿ. ಉಪಸ್ಥಿತರಿದ್ದರು. ರಶ್ಮಿ, ಅನುಷಾ ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಸ್ವಾಗತಿಸಿದರು. ವಿವೇಕಾನಂದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ ವಂದಿಸಿದರು. ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ವಿಜಯಸರಸ್ವತಿ ಕಾರ್ಯಕ್ರಮ ನಿರೂಪಿಸಿದರು.

ಕಬಡ್ಡಿ ಇಂದು ನನಗೆ ಬದುಕು ನೀಡಿದೆ. ಪ್ರೊ ಕಬಡ್ಡಿ ನಾನು ನಿರೀಕ್ಷಿಸದಷ್ಟು ಆರ್ಥಿಕ ಚೈತನ್ಯ ನೀಡಿದೆ. ಪ್ರೊ ಕಬಡ್ಡಿಯ ಮೊದಲ ಎರಡು ಆವೃತ್ತಿಗಳಲ್ಲಿ ೭೯ ಹಾಗೂ ೭೭ ಲಕ್ಷ ರೂಪಾಯಿ ನನಗೆ ದೊರೆತಿದೆ. ಸಮರ್ಪಣಾ ಭಾವದಿಂದ ಯಾವುದೇ ಒಂದು ಕ್ಷೇತ್ರದಲ್ಲಿ ತೊಡಗಿಕೊಂಡರೆ ಉನ್ನತ ಬದುಕು ನಮ್ಮದಾಗುತ್ತದೆ – ಪ್ರಶಾಂತ್ ರೈ ಕೈಕಾರ

ಮಂಗಳೂರು ವಲಯದ ಮಂಗಳೂರು, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ ತಾಲೂಕು ಮತ್ತು ಕೊಡಗು ಜಿಲ್ಲೆಯಿಂದ ಸುಮಾರು ೪೭ ಕಾಲೇಜುಗಳು ಭಾಗವಹಿಸಿವೆ. ಪ್ರಥಮ ಬಾರಿಗೆ ಮ್ಯಾಟ್ ಅಂಗಳದ ಕಬಡ್ಡಿ ಪಂದ್ಯಾಟ ನಡೆಯುತ್ತಿದ್ದು, ವಿವೇಕಾನಂದ ಕಾಲೇಜು ೪೦ ವರ್ಷಗಳ ಬಳಿಕ ಈ ಪಂದ್ಯಾಟದ ಆತಿಥ್ಯವನ್ನು ವಹಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.