HomePage_Banner
HomePage_Banner
HomePage_Banner
HomePage_Banner

ಪುತ್ತೂರು ಕಂಬಳ ಯಶಸ್ವಿ ಸಂಪನ್ನ: ಸಹಸ್ರಾರು ಮಂದಿಯಿಂದ ಕಂಬಳ ವೀಕ್ಷಣೆ – ಸಹಕರಿಸಿದವರಿಗೆ ಗೌರವಾರ್ಪಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಚಿತ್ರ: ಜೀತ್ ಪುತ್ತೂರು
-ಸಂತೋಷ್ ಮೊಟ್ಟೆತಡ್ಕ

  • 175 ಕೋಲು ಉದ್ದದ ಜೋಡುಕರೆಯನ್ನು ನಿರ್ಮಿಸಲಾಗಿದ್ದು, 6.5ಕೋಲು ಎತ್ತರದ ಎರಡು ನಿಶಾನೆ
  • 7.5 ಕೋಲು ಎತ್ತರದ ಒಂದು ನಿಶಾನೆಯನ್ನು ಕನೆಹಲಗೆ ವಿಭಾಗದಲ್ಲಿ ಜೋಡಿಸಲಾಗಿತ್ತು
  • ಕಂಬಳದುದ್ದಕ್ಕೂ ಕೆಂಪು ಶಾಲು ಹಾಕಿಕೊಂಡ ಕಂಬಳ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ರಾರಾಜಿಸುತ್ತಿದ್ದರು
  • ಕರೆಯ ಎರಡೂ ಪಾರ್ಶ್ವದಲ್ಲಿ ಪ್ರೇಕ್ಷಕರ ಗ್ಯಾಲರಿ, ಮಹಿಳೆಯರಿಗೆ ಪ್ರತ್ಯೇಕ ಗ್ಯಾಲರಿಯನ್ನು ನಿರ್ಮಿಸಲಾಗಿತ್ತು

ಪುತ್ತೂರು: ದೈವಶಕ್ತಿ ಹಾಗೂ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಅನುಗ್ರಹ, ಅಷ್ಟಧಿಕ್ಕುಗಳಿಂದ ಜಾತಿ-ಮತ-ಭೇದವಿಲ್ಲದೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕಂಬಳಾಭಿಮಾನಿಗಳ ಆಶೀರ್ವಾದದ ಜೊತೆಗೆ ಭರಪೂರ ಸಹಕಾರ, ಕಂಬಳದ ಯಶಸ್ವಿಗೆ ಅಹರ್ನಿಶಿ ದುಡಿದ ಕಂಬಳ ಸಮಿತಿಯ ಸದಸ್ಯರಿಗೆ ಹಾಗೂ ಸ್ವಯಂಸೇವಕರಿಗೆ ಕಂಬಳವು ನಿರೀಕ್ಷೆಗೂ ಮೀರಿ ಯಶಸ್ವಿಯಾದ ಅನುಭವದ ಜೊತೆಗೆ ಆನಂದ, ೨೭ನೇ ಸಂಭ್ರಮದ ಕಂಬಳದ ಪ್ರಸ್ತುತ ವರ್ಷ ೧೪೧ ಜೋಡಿ ಕೋಣಗಳು ಕರೆಯಲ್ಲಿ ಭಾಗಿಯಾದ ಕ್ಷಣಗಳು. ಸಹಸ್ರ ಸಹಸ್ರ ಕಂಬಳಾಭಿಮಾನಿಗಳಿಂದ ವೀಕ್ಷಣೆ ಹೀಗೆ ಹತ್ತು ಹಲವು ದಾಖಲೆಗಳೊಂದಿಗೆ ಕಂಗೊಳಿಸಿ ಚಾರಿತ್ರಿಕವೆನಿಸಲ್ಪಟ್ಟ ಕೋಟಿ ಚೆನ್ನಯ ಹೊನಲು ಬೆಳಕಿನ ಪುತ್ತೂರು ಕಂಬಳಕ್ಕೆ ಜ.೨೦ ರಂದು ಯಶಸ್ವಿ ಸಂಪನ್ನ ಹೊಂದಿದೆ.

ದಿ.ಜಯಂತ್ ಕುಮಾರ್ ರೈ ಹಾಗೂ ದಿ.ದಿವಾಕರ್ ರೈ ಕೋಡಿಂಬಾಡಿರವರಿಂದ ಸ್ಥಾಪನೆಗೊಂಡಿದ್ದ, ಇತಿಹಾಸ ಪ್ರಸಿದ್ಧ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರು ಗದ್ದೆಯಲ್ಲಿ ಉದ್ಯಮಿ ಎನ್ ಮುತ್ತಪ್ಪ ರೈರವರ ಸಾರಥ್ಯದಲ್ಲಿ, ಮಾಜಿ ಸಚಿವ ವಿನಯಕುಮಾರ್ ಸೊರಕೆರವರ ಗೌರವಾಧ್ಯಕ್ಷತೆಯಲ್ಲಿ ನಡೆದ 27ರ ಸಂಭ್ರಮದ ಪುತ್ತೂರಿನ ಕೋಟಿ-ಚೆನ್ನಯ ಜೋಡುಕರೆ ಕಂಬಳದ ಸಮಾರೋಪ ಸಮಾರಂಭವು ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಕಂಬಳ ಸಮಿತಿಯ ಸಂಚಾಲಕರಾದ ಎಸ್. ಸುಧಾಕರ್ ಶೆಟ್ಟಿರವರು ಮಾತನಾಡಿ, ಶ್ರೀ ಮಹಾಲಿಂಗೇಶ್ವರ ದೇವರ ಪವಿತ್ರ ಜಾಗದಲ್ಲಿ ಅಂದು ಶಾಸಕರಾಗಿದ್ದ ವಿನಯಕುಮಾರ್ ಸೊರಕೆ, ಅಗಲಿದ ಜಯಂತ್ ರೈ, ದಿವಾಕರ್ ರೈ ಕೋಡಿಂಬಾಡಿರವರ ಚುರುಕುತನದಿಂದ ಮತ್ತು ನಿಸ್ವಾರ್ಥ ಮನೋಭಾವನೆಯಿಂದ ಆರಂಭಗೊಂಡ ಈ ಕಂಬಳ ಇಂದು ಅಧ್ಯಕ್ಷ ಚಂದ್ರಹಾಸ ಶೆಟ್ಟಿರವರ ನೇತೃತ್ವದಲ್ಲಿ ಯಶಸ್ವಿಯ ಹೆಜ್ಜೆಯನ್ನು ಇಡುತ್ತಿರುವ ಸಂದರ್ಭದಲ್ಲಿ ಕಂಬಳವು ಜಾತ್ಯಾತೀತವಾಗಿ ನಡೆಯುತ್ತಿದೆ ಎಂದರು. ಶ್ರದ್ಧೆ, ಸಂಸ್ಕಾರ ಹಾಗೂ ಭಕ್ತಿ ಇದ್ದರೆ ಯಾವುದೇ ಕಾರ್ಯವೂ ಸಿದ್ಧಿಸುವುದು ಎಂಬುದಕ್ಕೆ ಕಳೆದ ಕಳೆದ ೨೭ ವರ್ಷಗಳ ಈ ಕಂಬಳವೇ ಸಾಕ್ಷಿಯಾಗಿದೆ. ಕನಸು ಮನಸ್ಸಿನಲ್ಲೂ ಎನಿಸದ ರೀತಿಯಲ್ಲಿ ದೈವಿಶಕ್ತಿಗಳು ಮತ್ತು ದೇವರು ಆಶೀರ್ವಾದ ಮಾಡುವ ಮೂಲಕ ಈ ಪವಿತ್ರ ಮಣ್ಣಿನ ಶಕ್ತಿಯನ್ನು ತೋರಿಸಿಕೊಟ್ಟಿದ್ದಾರೆ ಎಂದು ಅವರು ಹೇಳಿದರು.

ಜಯಕರ್ನಾಟಕ ತಾಲೂಕು ಘಟಕದ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಮಾತನಾಡಿ, ಕಂಬಳಕ್ಕೆ ಹೆಚ್ಚಿನ ಅಬ್ಬರ ಕೊಟ್ಟವರು ಮುತ್ತಪ್ಪ ರೈಯವರು. ಕಂಬಳ ನಡೆಸುವುದು ಅಷ್ಟೊಂದು ಸುಲಭ ಸಾಧ್ಯವಿಲ್ಲ. ಆದರೆ ಇಲ್ಲಿನ ಶಕ್ತಿ ಎನಿಸಿದ ಶ್ರೀ ಮಹಾಲಿಂಗೇಶ್ವರ ದೇವರು ಎಲ್ಲವೂ ಸಾಂಗವಾಗಿ ನಡೆಯುವಂತೆ ಅನುಗ್ರಹಿಸಿದ್ದಾರೆ. ಎಲ್ಲಿವರೆಗೆ ಇಲ್ಲಿನ ಕಂಬಳದ ಜನಪ್ರಿಯತೆ ಇದೆಯೆಂದರೆ ರಾತ್ರಿ ಮೂರು ಗಂಟೆಗೂ ಅದ್ಭುತ ಜನಸ್ತೋಮ ಕಂಬಳವನ್ನು ಏಕಾಗ್ರತೆಯಿಂದ ವೀಕ್ಷಿಸುತ್ತಿರುವುದು ಸಾಕ್ಷಿಯಾಗಿದೆ ಎಂದರು.

ಪುತ್ತೂರು ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹಾಬಲ ರೈ ವಳತ್ತಡ್ಕರವರು ಮಾತನಾಡಿ, ಒಂದು ಕಡೆ ಪೇಟಾದವರು ಕಂಬಳವನ್ನು ನಿಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಹಾಗೂ ಸರಕಾರಕ್ಕೆ ಒತ್ತಾಯ ತರುತ್ತಿದ್ದಾರೆ, ಮತ್ತೊಂದೆಡೆ ಕಂಬಳಾಭಿಮಾನಿಗಳು ಜನಪದ ಕ್ರೀಡೆಯಾಗಿರುವ ಕಂಬಳವನ್ನು ನಿಲ್ಲಿಸಬಾರದು ಎನ್ನುವ ಕೂಗು ಕೇಳಿ ಬರುತ್ತಿದೆ. ಆದರೆ ಸೂರ್‍ಯ ಚಂದ್ರರಿರುವ ತನಕ ಗ್ರಾಮೀಣ ಕ್ರೀಡೆ ಎನಿಸಿದ ಈ ಕಂಬಳವು ನಿರಂತರ ನಡೆಯಲಿ ಎಂದರು.

ಗೌರವಾರ್ಪಣೆ:
ಕಂಬಳಕ್ಕೆ ಆಗಮಿಸಿದ ತೀರ್ಪುಗಾರರ ಪರವಾಗಿ ಜಿಲ್ಲಾ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಗುಣಪಾಲ ಕಡಂಬ, ಯಂ.ರಾಜೀವ ಶೆಟ್ಟಿ ಎಡ್ತೂರು, ಕೋಣಗಳನ್ನು ಬಿಡಿಸುವವರಾಗಿ ಅಪ್ಪು ಯಾನೆ ವಲೇರಿಯನ್ ಡೇಸಾ ಅಲ್ಲಿಪಾದೆ, ನೀರಿನ ಉಸ್ತುವಾರಿ ವಹಿಸಿಕೊಂಡ ಸುದೇಶ್ ನಾಕ್ ಚಿಕ್ಕಪುತ್ತೂರು, ವಾಹನದ ಮೂಲಕ ಕಂಬಳ ಪ್ರಚಾರದ ಉಸ್ತುವಾರಿ ವಹಿಸಿಕೊಂಡ ನೇಮಾಕ್ಷ ಸುವರ್ಣ, ತೀರ್ಪುಗಾರರ ಸಂಚಾಲಕರಾಗಿ ರವೀಂದ್ರ ಕುಮಾರ್ ಕುಕ್ಕುಂದೂರು, ತೀರ್ಪುಗಾರರಾಗಿ ಎಂ.ಸುಧಾಕರ ಶೆಟ್ಟಿ ಮುಗೆರೋಡಿ, ಎನ್.ವಿಜಯಕುಮಾರ್ ಕಂಗಿನಮನೆ, ವಿದ್ಯಾಧರ್ ಜೈನ್ ರೆಂಜಾಳ, ವೀಡಿಯೋ ತೀರ್ಪುಗಾರರಾಗಿ ಜಿಲ್ಲಾ ಕಂಬಳ ಸಮಿತಿಯ ಉಸ್ತುವಾರಿಗಳಾದ ಸುದರ್ಶನ್ ನಾಕ್ ಕಂಪ, ನವೀನ್‌ಚಂದ್ರ ನಾಕ್, ಪ್ರೇಮಾನಂದ ನಾಕ್, ಸಚಿನ್ ಸರೋಳಿ, ಕಿಶನ್ ಸರೋಳಿ, ಸತೀಶ್ ನಾಕ್ ಸುಳ್ಯ, ಯತೀಶ್ ಶೆಟ್ಟಿ ಕೋಡಿಂಬಾಡಿ, ಶೇಖರ್ ಶೆಟ್ಟಿ ಪಾಲ್ತಾಡು, ಜತಿನ್ ಕಂಪ, ಆರ್.ಕೆ ಇಲೆಕ್ಟ್ರಿಕಲ್ಸ್‌ರವರಿಗೆ, ಶೀಘ್ರ ಫಿನಿಶಿಂಗ್ ತೀರ್ಪು ನೀಡಿದ ಸ್ಕೈ ವೀವ್ ಲೇಸರ ಭೀಮ್‌ನ ರತ್ನಾಕರ್ ನಾಕ್, ವೀಡಿಯೋ ರೆಕಾರ್ಡಿಂಗ್‌ಗೆ ಸಹಕರಿಸಿದ ಉಮಾಶಂಕರ್ ಪಾಂಗ್ಲಾಯಿ, ನೆಕ್ಕಿಲಾಡಿ-ಉಪ್ಪಿನಂಗಡಿ ಬಿ.ಎಸ್ ಬ್ಯಾಂಡ್ ಪರವಾಗಿ ಗಂಗಾಧರ್, ಸಿಡಿಮದ್ದು ಸಿಡಿಸಿದ ಗರ್ನಾಲ್ ಸಾಯ್ಬ್‌ರವರಿಗೆ, ಫೊಟೋಗ್ರಾಫರ್ ಜೀತ್ ಸ್ಟುಡಿಯೋದ ಜಗದೀಶ್ ಶೆಟ್ಟಿಯವರಿಗೆ, ಪ್ರಥಮ ಚಿಕಿತ್ಸೆ ಮೂಲಕ ಸಹಕರಿಸಿದ ಆರೋಗ್ಯ ಸಹಾಯಕಿ ತಂಡದವರಿಗೆ, ಕಂಬಳಕ್ಕೆ ಪತ್ರಿಕೆ ಮೂಲಕ ಹೆಚ್ಚಿನ ಪ್ರಚಾರ ನೀಡಿದ ಪತ್ರಕರ್ತ ಸುದ್ದಿ ಬಿಡುಗಡೆ ಪತ್ರಿಕೆಯ ಸಂತೋಷ್ ಮೊಟ್ಟೆತ್ತಡ್ಕರವರಿಗೆ ಶಾಲು ಹೊದಿಸಿ ಗೌರವಿಸಲಾಯಿತು.

ಸಹಕಾರ:
ಕಂಬಳದ ಪ್ರಧಾನ ತೀರ್ಪುಗಾರರಾಗಿ ಕೆ.ಗುಣಪಾಲ ಕಡಂಬ ಮೂಡಬಿದ್ರೆ ಮತ್ತು ಯಂ.ರಾಜೀವ ಶೆಟ್ಟಿ ಎಡ್ತೂರು, ತೀರ್ಪುಗಾರರ ಸಂಚಾಲಕರಾಗಿ ಯಂ.ಸುಧಾಕರ್ ಶೆಟ್ಟಿ ಮುಗೆರೋಡಿ, ತೀರ್ಪುಗಾರರಾಗಿ ನಿರಂಜನ ರೈ ಮಠಂತಬೆಟ್ಟು, ರವೀಂದ್ರ ಕುಮಾರ್ ಕುಕ್ಕುಂದೂರು, ಎನ್.ವಿಜಯಕುಮಾರ್ ಕಂಗಿನಮನೆ, ಕೋಣಗಳನ್ನು ಬಿಡಿಸುವವರಾಗಿ ಸುಧೀಶ್ ಕುಮಾರ್ ಆರಿಗ ಬಂಗಾಡಿ, ಅಜಿತ್ ಕುಮಾರ್ ಜೈನ್ ಈದು, ಜನಾರ್ದನ ನಾಯ್ಕ ಕರ್ಪೆ, ಸಹಕರಿಸುವವರಾಗಿ ಶೀನ ಶೆಟ್ಟಿ ವೀರಕಂಭ, ಉಮೇಶ್ ಕರ್ಕೇರಾ ಪುತ್ತೂರು, ಮಹಾವೀರ್ ಜೈನ್ ಕಜೆ ವೇಣೂರು, ಸತೀಶ್ ಕುಮಾರ್ ಹೊಸ್ಮಾರು, ಪ್ರಕಾಶ್ ಕಜೆಕಾರು, ಪದ್ಮನಾಭ ರೈ ಕಂಪದಬೈಲು, ಬರವಣಿಗೆ ಮತ್ತು ದಾಖಲೆ ನಿರ್ವಹಣೆ ಸಂಕಪ್ಪ ಶೆಟ್ಟಿ ನಗ್ರಿ ಹಾಗೂ ಕೆ.ಶ್ರೀಧರ ಆಚಾರ್ಯ ಸಾಣೂರುರವರು ಸಹಕರಿಸಿದರು.

ಜಯಕರ್ನಾಟಕ ಬೀಡಿ ಕಂಟ್ರಾಕ್ಟ್‌ದಾರರ ಸಂಘದ ಗಂಗಾಧರ್ ಶೆಟ್ಟಿ ಕೈಕಾರ, ತಾಲೂಕು ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು, ಉದ್ಯಮಿ ರೋಶನ್ ರೈ ಬನ್ನೂರು, ಕಂಬಳ ಸಮಿತಿ ಉಪಾಧ್ಯಕ್ಷ ರಿಚರ್ಡ್ ಲೂವಿಸ್ ಡಾಯಸ್, ಪ್ರಗತಿಪರ ಕೃಷಿಕ ದಿವಾಕರ್ ರೈ ಸಣಂಗಲ, ಮಾರಪ್ಪ ಶೆಟ್ಟಿ ಬೈಲುಗುತ್ತು, ಮಾನಕ ಜ್ಯುವೆಲ್ಸ್‌ನ ಸಿದ್ಧಾರ್ಥ್, ವಿಜಯಾ ಬ್ಯಾಂಕ್‌ನ ರಾಜೀವ್ ಶೆಟ್ಟಿ, ಸತೀಶ್ ಗೌಡ, ರಾಷ್ಟ್ರೀಯ ಕಬಡ್ಡಿ ಆಟಗಾರ ಪ್ರಶಾಂತ್ ಕುಮಾರ್ ರೈ, ಉದ್ಯಮಿ ಪ್ರವೀಣ್ ಶೆಟ್ಟಿ ಅಳಕೆಮಜಲು, ಜೋಕಿಂ ಡಿ’ಸೋಜ ಬನ್ನೂರು, ಪುತ್ತೂರು ಬ್ಯಾಂಕ್ ಆಫ್ ಬರೋಡದ ಸೀನಿಯರ್ ಮ್ಯಾನೇಜರ್ ಅವಿನಾಶ್ ಚೌಟ, ಉದ್ಯಮಿ ಅಜಿತ್ ಶೆಟ್ಟಿ ಕಡಬ, ಕೃಷ್ಣಪ್ರಸಾದ್ ಆಳ್ವ, ಶಶಿಕಿರಣ್ ರೈ ನೂಜಿಬೈಲು, ವಿಕ್ರಂ ಶೆಟ್ಟಿ ಅಂತರ ಕೋಡಿಂಬಾಡಿ, ಗಣೇಶ್‌ರಾಜ್ ಬಿಳಿಯೂರು, ಸುಧೀರ್ ಶೆಟ್ಟಿ ನೆಹರುನಗರ ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಸ್ವಾಗತಿಸಿ, ಸುದರ್ಶನ್ ನಾಕ್ ಕಂಪ ವಂದಿಸಿದರು. ಕಾರ್ಯದರ್ಶಿ ದಿನೇಶ್ ಪಿ.ವಿ, ಕೋಶಾಧಿಕಾರಿ ಪ್ರಸನ್ನ ಕುಮಾರ್ ಶೆಟ್ಟಿ ಸಹಿತ ಕಂಬಳದ ಪದಾಧಿಕಾರಿಗಳು ಅತಿಥಿಗಳಿಗೆ ಶಾಲು ಹಾಕಿ ಸ್ವಾಗತಿಸಿದರು. ಉಪಾಧ್ಯಕ್ಷ ನಿರಂಜನ್ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

ಅಣ್ಣ ಮುತ್ತಪ್ಪ ರೈಯವರ ಸಾರಥ್ಯದ ಈ ಪುತ್ತೂರು ಕಂಬಳ ಪ್ರಸ್ತುತ ವರ್ಷವೂ ಯಾವುದೇ ಅಡೆ-ತಡೆಯಿಲ್ಲದೆ ನಿರ್ವಿಘ್ನವಾಗಿ ನೆರವೇರಲು ಶ್ರೀ ಮಹಾಲಿಂಗೇಶ್ವರ ದೇವರ ಆಶೀರ್ವಾದವೇ ಕಾರಣ. ಜೊತೆಗೆ ನಮ್ಮ ಕಂಬಳ ಸಮಿತಿಯ ಅವಿರತ ಹಗಲಿರುಳು ಶ್ರಮದಿಂದ ಎರಡು ದಿನಗಳ ಕಂಬಳ ಬಹಳ ಯಶಸ್ವಿಯಾಗಿ ಮುಗಿದಿದೆ. ಬಾರ್ಕೂರಿನಿಂದ ಪುತ್ತೂರಿನವರೆಗಿನ ೧೪೧ ಜೊತೆ ಕೋಣಗಳ ಮಾಲಕರು ಹಾಗೂ ಅವರ ಸಿಬ್ಬಂದಿ ವರ್ಗದವರು ನಮ್ಮ ಕಂಬಳಕ್ಕೆ ಆಗಮಿಸಿ ಕಂಬಳದ ಅಂದವನ್ನು ಹೆಚ್ಚಿಸಿದ್ದಾರೆ. ಜಿಲ್ಲೆಯ ನಂಬರ್ ವನ್ ಕಂಬಳವೆನಿಸಿದ ಈ ಪುತ್ತೂರು ಕಂಬಳಕ್ಕೆ ಸಹಸ್ರಾರು ಮಂದಿ ಆಗಮಿಸಿ, ಕಂಬಳನ್ನು ವೀಕ್ಷಿಸಿ ಕಂಬಳದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಎನ್.ಚಂದ್ರಹಾಸ ಶೆಟ್ಟಿ, ಅಧ್ಯಕ್ಷರು, ಪುತ್ತೂರು ಕಂಬಳ ಸಮಿತಿ

ಎರಡು ದಿನಗಳ ವೈಭವದ ಕಂಬಳವನ್ನು `ಸುದ್ದಿ’ ಪತ್ರಿಕೆಯು ಯೂಟ್ಯೂಬ್ ಮುಖೇನ ಹಗಲಿರುಲು ನಿರಂತರ ನೇರಪ್ರಸಾರವನ್ನು ನೀಡುತ್ತಿದ್ದು, ಸುಮಾರು ಲಕ್ಷಕ್ಕೂ ಮಿಕ್ಕಿ ಕಂಬಳಾಭಿಮಾನಿಗಳು ಸುದ್ದಿ ನೇರಪ್ರಸಾರವನ್ನು ನೋಡುವ ಮೂಲಕ ಕಂಬಳದ ವೈಭವವನ್ನು ಮತ್ತಷ್ಟು ರಂಗೇರಿಸಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.